ರಿಯೋ ನಂತರ ಹಾಕಿ ಇಂಡಿಯಾ ಶ್ರೇಯಾಂಕದಲ್ಲಿ ಕುಸಿತ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 24: ರಿಯೋ ಒಲಿಂಪಿಕ್ಸ್ ನಲ್ಲಿ ನೀರಸ ಪ್ರದರ್ಶನ ನೀಡಿರುವ ಭಾರತದ ಪುರುಷರ ಹಾಕಿ ತಂಡದ ಎಫ್ ಐಎಚ್ ಶ್ರೇಯಾಂಕ ಪಟ್ಟಿಯಲ್ಲಿ ಕುಸಿತ ಕಂಡಿದೆ. ಆದರೆ, ಹಲವಾರು ವರ್ಷಗಳ ನಂತರ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡಿದ್ದ ಮಹಿಳಾ ತಂಡದ ಶ್ರೇಯಾಂಕದಲ್ಲಿ ಏರಿಕೆ ಕಂಡು ಬಂದಿದೆ.

ಹಾಕಿ ಇಂಡಿಯಾದ ಪುರುಷದ ತಂಡದ ಶ್ರೇಯಾಂಕದಲ್ಲಿ ಆರನೇ ಸ್ಥಾನಕ್ಕೆ ಕುಸಿತ ಕಂಡಿದೆ. ಮಹಿಳಾ ಹಾಕಿ ತಂಡ ಒಂದು ಸ್ಥಾನ ಮೇಲೇರಿದ್ದು ಪಟ್ಟಿಯಲ್ಲಿ 12ನೇ ಸ್ಥಾನಕ್ಕೆ ಏರಿದೆ.

men-s-hockey-team-slips-one-place-sixth-fih-rankings

ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಬುಧವಾರ ಪ್ರಕಟಿಸಿದ ಶ್ರೇಯಾಂಕ ಪಟ್ಟಿಯಂತೆ, ಐದನೇ ಸ್ಥಾನದಲ್ಲಿದ್ದ ಟೀಂ ಇಂಡಿಯಾ ಆರನೇ ಸ್ಥಾನಕ್ಕೆ ಕುಸಿದಿದೆ. ರಿಯೋ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್​ನಲ್ಲಿ ಬೆಲ್ಜಿಯಂ ವಿರುದ್ಧ 3-1ರ ಅಂತರದಲ್ಲಿ ಹೀನಾಯ ಸೋಲನುಭವಿಸಿ ಟೂರ್ನಿಯಿಂದ ಹೊರ ಬಂದಿತು. ಆಸ್ಟ್ರೇಲಿಯಾ ಮೊದಲ ಸ್ಥಾನವನ್ು ಕಾಯ್ದುಕೊಂಡಿದೆ.

ದ್ವಿತೀಯ ಸ್ಥಾನವನ್ನು ಅರ್ಜೆಂಟಿನಾ, ತೃತೀಯ ಸ್ಥಾನವನ್ನು ನೆದರ್ಲೆಂಡ್, ನಾಲ್ಕನೇ ಸ್ಥಾನವನ್ನು ಜರ್ಮನಿ ಹಾಗೂ ಐದನೇ ಸ್ಥಾನವನ್ನು ಬೆಲ್ಜಿಯಂ ಅಲಂಕರಿಸಿದೆ.

ಓಲ್ಟಮನ್ ಮಾರ್ಗದರ್ಶನದಲ್ಲಿ ರಿಯೋಕ್ಕೆ ತೆರಳಿದ್ದ ಪಿ.ಆರ್ ಶ್ರೀಜೇಶ್ ನೇತೃತ್ವದ ಭಾರತೀಯ ಹಾಕಿ ತಂಡ ಮೂರು ಸೋಲು, ಎರಡು ಗೆಲುವು ಹಾಗೂ ಒಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ತವರಿಗೆ ವಾಪಸ್ಸಾಗಿದ್ದರು.

ಪುರುಷರ ಎಫ್ ಐಎಚ್ ಶ್ರೇಯಾಂಕ ಪಟ್ಟಿ:

1. ಆಸ್ಟ್ರೇಲಿಯಾ

2. ಅರ್ಜೆಂಟೀನಾ

3. ನೆದರ್ಲೆಂಡ್

4. ಜರ್ಮನಿ

5. ಬೆಲ್ಜಿಯಂ

6. ಭಾರತ

7. ಗ್ರೇಟ್ ಬ್ರಿಟನ್

(ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian men's hockey team slipped one place to occupy sixth in the FIH rankings after their lackluster show in Rio Olympics while their female counterparts surprisingly gained one position to be at 12th in the latest charts released on Tuesday.
Please Wait while comments are loading...