ಎಎಫ್ ಸಿ ಕಪ್‌: ಬೆಂಗಳೂರು ಫುಟ್ಬಾಲ್ ಕ್ಲಬ್‌ ಪಂದ್ಯ ಡ್ರಾ

Written By: Ramesh
Subscribe to Oneindia Kannada

ಜೋಹರ್ ಬಾಹ್ರು,(ಮಲೇಷ್ಯಾ)ಸೆ. 29 : ಬೆಂಗಳೂರು ಫುಟ್ಬಾಲ್ ಕ್ಲಬ್‌ (ಬಿಎಫ್ ಸಿ) ಹಾಗೂ ಜೋಹರ್ ದಾರುಲ್ ತಾಜಿಮ್ ನಡುವಿನ ಏಷ್ಯನ್ ಫುಟ್ಬಾಲ್ ಫೆಡರೇಷನ್ (ಎಎಫ್ ಸಿ) ಫುಟ್ಬಾಲ್ ಕಪ್‌ ಟೂರ್ನಿಯ ಮೊದಲ ಸೆಮೀಸ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

ತಾನ್ ಶ್ರೀ ದಾತೊ ಹಾಜಿ ಹಸನ್ ಯುನೊಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಿಎಫ್ ಸಿ 1-1 ಗೋಲುಗಳಿಂದ ಜೋಹರ್ ದಾರುಲ್ ತಾಜಿಮ್ ವಿರುದ್ಧ ಡ್ರಾ ಮಾಡಿಕೊಂಡಿತು. ಇದರೊಂದಿಗೆ ಚೊಚ್ಚಲ ಬಾರಿಗೆ ಫೈನಲ್‌ ಪ್ರವೇಶಿಸಿವ ಕನಸನ್ನು ಜೀವಂತವಾಗಿಟ್ಟುಕೊಂಡಿತು.

Bengaluru FC

ಆರಂಭದಲ್ಲಿ ಎರಡು ತಂಡಗಳು ಏಳು ನಿಮಿಷಗಳ ಅವಧಿಯಲ್ಲೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಆದರೆ 53 ನೇ ನಿಮಿಷದಲ್ಲಿ ದಾರುಲ್ ತಂಡದ ಪೆರೇರಾ ಆಕರ್ಷಕ ಗೋಲುಗಳಿಸಿ ಮಿಂಚಿದರು. ಇದಾದ 4 ನಿಮಿಷದಲ್ಲಿ ಬೆಂಗಳೂರಿನ ಲಿಂಗ್ಡೊ ಗೋಲು ಒಂದು ಬಾರಿಸಿ ಎದುರಾಳಿ ತಂಡಕ್ಕೆ ತಿರುಗೇಟು ನೀಡಿದರು.

ಇದರಿಂದ ಎರಡು ತಂಡಗಳು 1-1 ಸಮಬಲ ಗೋಲುಗಳೊಂದಿಗೆ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು. ಅಕ್ಟೋಬರ್‌ 19 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಎರಡನೇ ಹಂತದ ಸೆಮಿಫೈನಲ್ ಪಂದ್ಯ ನಡೆಯಲಿದೆ. ಆ ಪಂದ್ಯದಲ್ಲಿ ಬಿಎಫ್ ಸಿ ಗೆದ್ದರೆ ಅಂತಿಮ ಘಟ್ಟಕ್ಕೆ ಲಗ್ಗೆ ಇಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India midfielder Eugeneson Lyngdoh scored a crucial goal as I-League champions Bengaluru FC held Malaysia's Johor Darul Tazim 1-1 in the away first leg match of their Asian Football Confederation (AFC) Cup semi-final here on Wednesday (Sep 28).
Please Wait while comments are loading...