ವಿಶ್ವ ಟಿ20 : ನಾಯಕನಾಗಿ ಎಂಎಸ್ ಧೋನಿಯಿಂದ ವಿಶ್ವ ದಾಖಲೆ

Posted By:
Subscribe to Oneindia Kannada

ನಾಗ್ಪುರ, ಮಾರ್ಚ್ 15 : ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಮೆಂಟ್ ನ ಮೊದಲ ಪಂದ್ಯದಲ್ಲಿ (ಮಾರ್ಚ್ 15) ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆ ತೆರಳುತ್ತಿದ್ದಂತೆ ಹೊಸ ದಾಖಲೆ ಬರೆದರು. ವಿಸಿಎ ಮೈದಾನದಲ್ಲಿ ಟಾಸ್ ಸೋತರೂ ನಾಯಕರಾಗಿ ಧೋನಿ ಹೊಸ ದಾಖಲೆ ಬರೆದರು. ಏನಿದು ದಾಖಲೆ ಮುಂದೆ ಓದಿ...

ಪಂದ್ಯದ ಸ್ಕೋರ್ ಕಾರ್ಡ್

ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಮೈದಾನದಲ್ಲಿ ಮಂಗಳವಾರ ಮಹೇಂದ್ರ ಸಿಂಗ್ ಧೋನಿ ಅವರು ನಾಯಕರಾಗಿ ಸತತವಾಗಿ ಆರು ವಿಶ್ವ ಟ್ವೆಂಟಿ 20 ಟೂರ್ನಮೆಂಟ್ ನಲ್ಲಿ ಆಡಿದ ಹೊಸ ದಾಖಲೆ ನಿರ್ಮಿಸಿದರು.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೂ ಕಿವೀಸ್ ತಂಡ 126/7 ಮಾತ್ರ ಸ್ಕೋರ್ ಮಾಡಲು ಸಾಧ್ಯವಾಯಿತು.ಆದರೆ, ಅಲ್ಪಮೊತ್ತ ಚೇಸ್ ಮಾಡಲಾಗದೆ ಟೀಂ ಇಂಡಿಯಾ 79 ರನ್ನಿಗೆ ಸರ್ವಪತನಕ ಕಂಡು ಸೋಲೊಪ್ಪಿಕೊಂಡಿತು. [ಪಂದ್ಯದ ವರದಿ ಇಲ್ಲಿ ಓದಿ]

India captain MS Dhoni sets world record

ಎಂಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ವಿಶ್ವ ಟಿ20 ಕಪ್ ಎತ್ತಿತ್ತು. ಆನಂತರ 34 ವರ್ಷದ ಧೋನಿ ಅವರು ಮತ್ತೊಮ್ಮೆ ತಂಡವನ್ನು ಮುನ್ನಡೆಸುತ್ತಿದ್ದಾರೆ. 2007 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಪಂದ್ಯವಾಡಿದ ಧೋನಿ ಇದುವರೆವಿಗೂ 63 ಪಂದ್ಯಗಳನ್ನಾಡಿದ್ದಾರೆ.

ನಾಯಕನಾಗಿ ಆಯ್ಕೆಯಾದ ಮೊದಲ ಟೂರ್ನಿಯನ್ನು ಗೆಲ್ಲಿಸಿಕೊಟ್ಟ ಧೋನಿ ಮತ್ತೊಮ್ಮೆ ಕಪ್ ಎತ್ತಲು ಸಾಧ್ಯವಾಗಲಿಲ್ಲ. 2009,2010,2012 ಹಾಗೂ 2014 ಆವೃತ್ತಿಯಲ್ಲಿ ಧೋನಿ ನಾಯಕರಾಗಿದ್ದರು. ವಿಶ್ವ ಟಿ20 ವಿಶೇಷವೆಂದರೆ, ಪ್ರತಿ ಬಾರಿ ಹೊಸ ತಂಡ ಕಪ್ ಗೆದ್ದುಕೊಂಡಿದೆ. ಯಾವ ತಂಡವೂ ಎರಡು ಬಾರಿ ಕಪ್ ಗೆದ್ದಿಲ್ಲ.

ಧೋನಿ 28 ಪಂದ್ಯಗಳಲ್ಲಿ ನಾಯಕರಾಗಿ 18 ರಲ್ಲಿ ಗೆಲುವು, 9 ಸೋಲು ಕಂಡಿದ್ದಾರೆ. 1 ಪಂದ್ಯ ರದ್ದಾಗಿದೆ. ಕಳೆದ ಬಾರಿ ಧೋನಿ ನೇತೃತ್ವದ ತಂಡವನ್ನು ಶ್ರೀಲಂಕಾ ಸೋಲಿಸಿ ಕಪ್ ಎತ್ತಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜನೆಯ ಎಲ್ಲಾ ಮಾದರಿ ವಿಶ್ವಕಪ್ (ವಿಶ್ವ ಟಿ20 2007, ವಿಶ್ವಕಪ್ 2011, ಚಾಂಪಿಯನ್ಸ್ ಟ್ರೋಫಿ 2013) ಗೆದ್ದಿರುವ ಏಕೈಕ ನಾಯಕರಾಗಿರುವ ಧೋನಿ ಅವರಿಗೆ ಇದು ಬಹುಶಃ ಕೊನೆ ಟೂರ್ನಿಯಾಗಿದೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India captain Mahendra Singh Dhoni set a world record when he led the team against New Zealand at the ICC World Twenty20 2016 here tonight (March 15).
Please Wait while comments are loading...