ಫುಟ್ಬಾಲ್ ದಿಗ್ಗಜನ ಜತೆ ಕ್ರಿಕೆಟ್ ದಿಗ್ಗಜ ಕೊಹ್ಲಿ!

Posted By:
Subscribe to Oneindia Kannada

ಮುಂಬೈ, ಏಪಿರ್ಲ್ 06: ಪೋರ್ಚುಗಲ್‌ನ ಫುಟ್ಬಾಲ್ ದಿಗ್ಗಜ ಲೂಯಿಸ್ ಫಿಗೊ ಅವರನ್ನು ಸ್ವಾಗತಿಸಲು ಅವರ ಅಭಿಮಾನಿಯಾಗಿ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರು ಆಗಮಿಸಿದ್ದರು. ಕ್ರಿಕೆಟ್ ಜೊತೆಗೆ ಫುಟ್ಬಾಲ್ ಕ್ರೇಜ್ ಹೆಚ್ಚಿಸಲು ಕೊಹ್ಲಿ ಕೂಡಾ ಸಾಥ್ ನೀಡುತ್ತಿದ್ದು, ಮಂಗಳವಾರ ಮೊಟ್ಟ ಮೊದಲ ಬಹುರಾಷ್ಟ್ರೀಯ ಫುಟ್ಸಾಲ್ ಲೀಗ್ ಗೆ ಚಾಲನೆ ನೀಡಲಾಯಿತು.

ಭಾರತದ 8 ನಗರಗಳಲ್ಲಿ ಜು.15 ರಿಂದ 24ರ ತನಕ ನಡೆಯಲಿರುವ ಫುಟ್ಸಾಲ್ ಲೀಗ್ ಕೂಡಾ ಫ್ರಾಂಚೈಸಿ ಆಧಾರಿತ ಲೀಗ್ ಆಗಿದೆ. ಉದ್ಘಾಟನಾ ಸಮಾರಂಭದ ನಂತರ ಮಾತನಾಡಿದ ಫಿಗೊ, 'ಫೀಫಾ ಅಧ್ಯಕ್ಷೀಯ ಚುನಾವಣೆಯಿಂದ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಆದರೆ, ಹೊಸ ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫಾಂಟಿನೊಗೆ ಶುಭ ಹಾರೈಸಿದರು. 2015ರ ಮೇನಲ್ಲಿ ನಡೆದ ಫಿಫಾ ಅಧ್ಯಕ್ಷ ಚುನಾವಣೆ ನಡೆದಿತ್ತು.[ಫುಟ್ಬಾಲ್ ನಿಂದ ಫೀಫಾ, ಯುಇಎಫ್ಎ ಅಧ್ಯಕ್ಷರಿಗೆ ನಿಷೇಧ]

ರಿಯಲ್ ಮ್ಯಾಡ್ರಿಡ್, ಬಾರ್ಸಿಲೋನ ಹಾಗೂ ಇಂಟರ್ ಮಿಲನ್‌ನಂಥ ವಿಶ್ವದ ಅಗ್ರಗಣ್ಯ ಕ್ಲಬ್‌ ಗಳ ಪರ ಕೂಡಾ ಆಡಿರುವ ಫಿಗೊ 2001ರಲ್ಲಿ ಫೀಫಾ ವರ್ಷದ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು. [ರೆಡ್ ಕಾರ್ಡ್ ತೋರಿಸಿದ ರೆಫರಿಗೆ ಬಿತ್ತು ಗುಂಡೇಟು]

ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಬಗ್ಗೆ ಫಿಗೊ ಮೆಚ್ಚುಗೆ ವ್ಯಕ್ತಪಡಿಸಿದರು. ಐಎಸ್‌ಎಲ್‌ನಲ್ಲಿ ಕೋಚ್ ಹುದ್ದೆ ವಹಿಸಿಕೊಳ್ಳುವ ಬಗ್ಗೆಯೂ ಆಸಕ್ತಿ ಇದೆ ಎಂದರು.

ಮೊಟ್ಟ ಮೊದಲ ಬಹುರಾಷ್ಟ್ರೀಯ ಫುಟ್ಸಾಲ್ ಲೀಗ್

ಮೊಟ್ಟ ಮೊದಲ ಬಹುರಾಷ್ಟ್ರೀಯ ಫುಟ್ಸಾಲ್ ಲೀಗ್

ಮಂಗಳವಾರ ಮೊಟ್ಟ ಮೊದಲ ಬಹುರಾಷ್ಟ್ರೀಯ ಫುಟ್ಸಾಲ್ ಲೀಗ್ ಗೆ ಚಾಲನೆ ನೀಡಲಾಯಿತು. ಪ್ರಿಮಿಯರ್ ಫುಟ್ಸಾಲ್ ಮ್ಯಾನೇಜ್ಮೆಂಟ್ ಪ್ರೈ ಲಿಮಿಟೆಡ್ ಆಯೋಜನೆಯಲ್ಲಿ ಪಂದ್ಯಗಳು ನಡೆಯಲಿವೆ

ಚುಟುಕು ಫುಟ್ಬಾಲ್ ಪಂದ್ಯಾವಳಿಗಳು

ಚುಟುಕು ಫುಟ್ಬಾಲ್ ಪಂದ್ಯಾವಳಿಗಳು

ಪ್ರತಿ ತಂಡದಲ್ಲೂ 5 ಜನ ಆಟಗಾರರಿರುತ್ತಾರೆ. ತಲಾ 20 ನಿಮಿಷಗಳ ಎರಡು ಅವಧಿ ಆಟವಾಡಲಾಗುತ್ತದೆ. ಇದಕ್ಕೆ ಫುಟ್ಸಾಲ್ ಎಂದು ಕರೆಯಲಾಗುತ್ತದೆ. ಫುಟ್ಸಾಲ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್ಎಐ), ಅಸೋಸಿಯೇಷನ್ ಮುಂಡಿಯಾಲ್ ಡಿ ಫುಟ್ಸಾಲ್ (ಎಎಂಎಫ್) ನ ಮಾನ್ಯತೆ ಇದಕ್ಕಿದೆ.

ಫುಟ್ಸಾಲ್ ಲೀಗ್ ಯಾವಾಗ ನಡೆಯಲಿದೆ?

ಫುಟ್ಸಾಲ್ ಲೀಗ್ ಯಾವಾಗ ನಡೆಯಲಿದೆ?

ಭಾರತದ 8 ನಗರಗಳಲ್ಲಿ ಜು.15 ರಿಂದ 24ರ ತನಕ ನಡೆಯಲಿರುವ ಫುಟ್ಸಾಲ್ ಲೀಗ್ ಕೂಡಾ ಫ್ರಾಂಚೈಸಿ ಆಧಾರಿತ ಲೀಗ್ ಆಗಿದೆ.

ಅಭಿಮಾನಿಯಾಗಿ ಕ್ರಿಕೆಟ್ ದಿಗ್ಗಜ ವಿರಾಟ್

ಫುಟ್ಬಾಲ್ ದಿಗ್ಗಜ ಲೂಯಿಸ್ ಫಿಗೊ ಅವರನ್ನು ಸ್ವಾಗತಿಸಲು ಅವರ ಅಭಿಮಾನಿಯಾಗಿ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರು ಆಗಮಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's star batsman Virat Kohli experienced a fanboy moment on Tuesday after he met Portugal football legend Luis Figo in Mumbai.
Please Wait while comments are loading...