ಟೀಂ ಇಂಡಿಯಾ ಕೋಚ್ ಸ್ಥಾನಕ್ಕೇರಿದ ಸಂಜಯ್ ಬಂಗಾರ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮೇ 27 : ಜೂನ್ ನಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ತಂಡಕ್ಕೆ ಸಂಜಯ್ ಬಂಗಾರ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ, ಈ ಮೊದಲು ಟೀಂ ಇಂಡಿಯಾದ ಅಸಿಸ್ಟೆಂಟ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಬಂಗಾರ್, ಜಿಂಬಾಬ್ವೆ ಟೂರ್ನಿಗೆ ಭಾರತ ತಂಡದ ಕೋಚ್ ಸ್ಥಾನವನ್ನು ನಿಭಾಯಿಸಲಿದ್ದಾರೆಂದು ಬಿಸಿಸಿಐ ಮೂಲಗಳು ತಿಳಿಸಿವೆ..[ಕೋಚ್ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ!]

3 ಏಕದಿನ ಮತ್ತು 3 ಟಿ-20 ಪಂದ್ಯಗಳಿಗೆ ಮಾತ್ರ ತಾತ್ಕಲಿಕವಾಗಿ ಜಿಂಬಾಬ್ವೆ ಟೂರ್ನಿಗೆ ಭಾರತ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿದ್ದ ಸಂಜಯ್ ಬಂಗಾರ್ ಅವರನ್ನು ನೇಮಿಸಿದೆ. ಇನ್ನು ಫೀಲ್ಡಿಂಗ್ ಕೋಚ್ ಸ್ಥಾನಕ್ಕೆ ಅಭಯ್ ಶರ್ಮ ಅವರನ್ನು ನೇಮಿಸಲಾಗಿದೆ ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಪ್ರಕಟಿಸಿದ್ದಾರೆ. ಈಗಾಗಲೇ ಮೂರು ಏಕದಿನ ಹಾಗೂ ಮೂರು ಟ್ವಂಟಿ-20 ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಲಾಗಿದೆ. [ಟೀಂ ಇಂಡಿಯಾ ಕೋಚ್ ಆಗಲು ರೆಡಿ : ಕರ್ನಾಟಕದ ಕೋಚ್]

Sanjay Bangar

ಸಂಜಯ್ ಬಂಗಾರ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪ್ರೀತಿ ಝಿಂಟಾ ಮಾಲೀಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.[ಜಿಂಬಾಬ್ವೆ ಪ್ರವಾಸಕ್ಕೆ ಯುವ ತಂಡ ಆಯ್ಕೆ, ಧೋನಿ ನಾಯಕ]

ರವಿ ಶಾಸ್ತ್ರಿ ಅವರು ಸುಮಾರು 18 ತಿಂಗಳು ಕಾಲ ಟೀಂ ಇಂಡಿಯಾ ಕೋಚ್ ಸ್ಥಾನವನ್ನು ನಿಭಾಯಿಸಿದ್ದರು. ಅವರ ಅವಧಿ ಮುಕ್ತಾಯಗೊಂಡಿದ್ದರಿಂದ ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆ ಖಾಲಿ ಇದೆ. ಈಗಾಗಲೇ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಅಹ್ವಾನಿಸಿದ್ದು ಇನ್ನೆರಡು ತಿಂಗಳಲ್ಲಿ ಟೀಂ ಇಂಡಿಯಾ ಕೋಚ್ ನ್ನು ನೇಮಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ಬೊರ್ಡ್ (ಬಿಸಿಸಿಐ) ತಿಳಿಸಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former India and Railways all-rounder Sanjay Bangar was today named coach for the national cricket team's upcoming tour to Zimbabwe, while there was no place for Bharat Arun and R Sridhar in the support staff.
Please Wait while comments are loading...