ರಣಜಿ : ಹೈದರಾಬಾದ್ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ

Posted By:
Subscribe to Oneindia Kannada

ಶಿವಮೊಗ್ಗ, ಅಕ್ಟೋಬರ್ 27: ಇಲ್ಲಿನ ಕೆಎಸ್ ಸಿಎ ಸ್ಟೇಡಿಯಂನಲ್ಲಿ ನಡೆದ 84ನೇ ಆವೃತ್ತಿಯ ರಣಜಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಕರ್ನಾಟಕ ಭರ್ಜರಿ ಜಯಗಳಿಸಿದೆ.

ಕರ್ನಾಟಕ ನೀಡಿದ್ದ 380 ರನ್ ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ 320 ರನ್ ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ 59 ರನ್ ಗಳ ಅಮೋಘ ಜಯ ಸಾಧಿಸಿತು.

ರಣಜಿ ಕ್ರಿಕೆಟ್: ಹೈದರಾಬಾದ್ ಗೆಲ್ಲಲು 380 ರನ್ ಗುರಿ ನೀಡಿದ ಕರ್ನಾಟಕ

ಹೈದರಾಬಾದ್ ಪರ ಟಾಮಿ ಅಗರವಾಲ್ 44, ಬಿ ಸಂದೀಪ್ 80 ಹಾಗೂ ಆಶೀಶ್ ರೆಡ್ಡಿ 57 ರನ್ ಗಳಿಸಿರುವುದನ್ನು ಬಿಟ್ಟರೇ ಉಳಿದ ಬ್ಯಾಟ್ಸ್ ಮನ್ ಗಳು ಕರ್ನಾಟಕದ ಬೌಲಿಂಗ್ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದರು.

ಇನ್ನು ಮಾರಕ ದಾಳಿ ನಡೆಸಿರುವ ಕರ್ನಾಟಕದ ವೇಗಿಗಳಾದ ಗೌತಮ್. ಕೆ 3 ಹಾಗೂ ಶ್ರೇಯಸ್ ಗೋಪಾಲ್ 4 ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ಮೊದಲ ಇನ್ನಿಂಗ್ ನಲ್ಲಿ ಮುನ್ನಡೆ ಸಾಧಿಸಿದ್ದ ಕರ್ನಾಟಕ

ಮೊದಲ ಇನ್ನಿಂಗ್ ನಲ್ಲಿ ಮುನ್ನಡೆ ಸಾಧಿಸಿದ್ದ ಕರ್ನಾಟಕ

ಹೈದರಾಬಾದ್ ದಾಳಿ ಕರ್ನಾಟಕ ತಂಡದ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 183 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ್ದ ಹೈದರಾಬಾದ್ ಕರ್ನಾಟಕ ಬೌಲರ್ ಗಳ ಎದುರು ರನ್ ಗಳಿಸಲು ತಿಣುಕಾಡಿತು. ಅಂತಿಮವಾಗಿ ಹೈದರಾಬಾದ್ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 136 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ 47 ರನ್ ಗಳ ಮುನ್ನಡೆ ಸಾಧಿಸಿತ್ತು.

2ನೇ ಇನ್ನಿಂಗ್ಸ್ ನ ಸ್ಕೋರ್ ಲೆಕ್ಕಾಚಾರ

2ನೇ ಇನ್ನಿಂಗ್ಸ್ ನ ಸ್ಕೋರ್ ಲೆಕ್ಕಾಚಾರ

ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ 47 ರನ್ ಗಳ ಮುನ್ನಡೆ ಸಾಧಿಸಿದ್ದ ಕರ್ನಾಟಕ ತನ್ನ 2ನೇ ಇನ್ನಿಂಗ್ಸ್ ನಲ್ಲಿ ಕರುಣ್ ನಾಯರ್ ಅಮೋಘ ಶತಕ ಹಾಗೂ ಸ್ಟುವರ್ಟ್ ಬಿನ್ನಿ ಆಕರ್ಷಕ ಅರ್ಧಶತಕದ ನೆರವಿನಿಂದ 332 ರನ್ ಪೇರಿಸಿ, ಹೈದರಾಬಾದಿಗೆ ಗೆಲ್ಲಲು 380 ರನ್ ಗಳ ಗುರಿ ನೀಡಿತ್ತು.

 59 ರನ್ ಗಳಿಂದ ಸೋಲೋಪ್ಪಿಕೊಂಡ ಹೈದರಾಬಾದ್

59 ರನ್ ಗಳಿಂದ ಸೋಲೋಪ್ಪಿಕೊಂಡ ಹೈದರಾಬಾದ್

380 ರನ್ ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ಗೆ ಆರಂಭದಲ್ಲಿಯೇ ಕರ್ನಾಟಕ ಬೌಲರ್ ಗಳು ಆಘಾತ ನೀಡಿದರು. ಗೌತಮ್. ಕೆ (3 ವಿಕೆಟ್) ಹಾಗೂ ಶ್ರೇಯಸ್ ಗೋಪಾಲ್ 4 ವಿಕೆಟ್ ಕಬಳಿಸಿ ಹೈದರಾಬಾದ್ ತಂಡವನ್ನು 320 ರನ್ ಗಳಿಗೆ ಕಟ್ಟಿ ಹಾಕಿದರು.

ಟೂರ್ನಿಯಲ್ಲಿ 2ನೇ ಜಯ ದಾಖಲಿಸಿದ ಕರ್ನಾಟಕ

ಟೂರ್ನಿಯಲ್ಲಿ 2ನೇ ಜಯ ದಾಖಲಿಸಿದ ಕರ್ನಾಟಕ

84ನೇ ಆವೃತ್ತಿಯ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ಸತತ ಎರಡು ಪಂದ್ಯಗಳಲ್ಲಿ ಜಯಗಳಿಸಿ ಒಟ್ಟು 6 ಅಂಕಗಳನ್ನು ಕಲೆಹಾಕಿದೆ. ಮೊದಲ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಇನ್ನಿಂಗ್ಸ್ ಜಯಗಳಿಸಿತ್ತು. ಶುಕ್ರವಾರ 2ನೇ ಪಂದ್ಯದಲ್ಲಿ ವಿನಯ್ ಕುಮಾರ್ ಪಡೆ ಹೈದರಾಬಾದ್ ಜಯ ದಾಖಲಿಸಿ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka notched up their second successive victory in the Ranji Trophy Group A on Friday (October 27), beating Hyderabad by 59 runs at the KSCA Navale Stadium.
Please Wait while comments are loading...