ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊಹಾಲಿ ಟೆಸ್ಟ್ : ಟೀಂ ಇಂಡಿಯಾದ ಮರ್ಯಾದೆ ಪ್ರಶ್ನೆ

By Mahesh

ಮೊಹಾಲಿ, ನ.04: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಹಾಗೂ ಏಕದಿನ ಕ್ರಿಕೆಟ್ ಸರಣಿಯನ್ನು ಕಳೆದುಕೊಂಡಿರುವ ಟೀಂ ಇಂಡಿಯಾಕ್ಕೆ ಈಗ ಟೆಸ್ಟ್ ಸರಣಿ ಗೆಲ್ಲುವುದು ಅನಿವಾರ್ಯವಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದ ಟೆಸ್ಟ್ ತಂಡ ನಾಲ್ಕು ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ನವೆಂಬರ್ 5 ರಿಂದ ಆಡಲಿದೆ. ಮೇಲ್ನೋಟಕ್ಕೆ ಉಭಯ ತಂಡಗಳು ಸಮಬಲದಿಂದ ಕೂಡಿದ್ದರೂ ಗೆಲುವಿನ ರುಚಿ ಕಂಡಿರುವ ದಕ್ಷಿಣ ಆಫ್ರಿಕಾ ಗೆಲುವಿನ ನಾಗಾಲೋಟ ಮುಂದುವರೆಸಲು ಹಾತೊರೆಯುತ್ತಿದೆ.

ಇಶಾಂತ್ ಶರ್ಮ ಇಲ್ಲದೆ ಟೀಂ ಇಂಡಿಯಾ ಕಣಕ್ಕಿಳಿಯಬೇಕಿದೆ. ಶ್ರೀಲಂಕಾ ವಿರುದ್ಧ ಐತಿಹಾಸಿಕ ಸರಣಿ ಗೆದ್ದ ಬಳಿಕ ವಿರಾಟ್ ಕೊಹ್ಲಿ ಅವರು ತವರು ನೆಲದಲ್ಲಿ ನಂ.1 ತಂಡವನ್ನು ಹೇಗೆ ಕಟ್ಟಿ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. [ಭಾರತ -ದಕ್ಷಿಣ ಆಫ್ರಿಕಾ ಸರಣಿ ಸಂಪೂರ್ಣ ಮಾರ್ಗದರ್ಶಿ]

ಸ್ಪಿನ್ ತಂತ್ರ: ಮೊದಲ ಟೆಸ್ಟ್ ಪಂದ್ಯಕ್ಕೆ ಆರ್ ಅಶ್ವಿನ್ ಲಭ್ಯರಾಗಿದ್ದು, ರವೀಂದ್ರ ಜಡೇಜ ಕೂಡಾ ತಂಡವನ್ನು ಸೇರಿರುವುದರಿಂದ ಸ್ಪಿನ್ ತಂತ್ರವನ್ನು ಕೊಹ್ಲಿ ಪ್ರಯೋಗಿಸಲಿದ್ದಾರೆ. ಶ್ರೀಲಂಕಾದಲ್ಲಿ 20 ವಿಕೆಟ್ ಪಡೆದ ಅಶ್ವಿನ್ ಅವರ ದಾಳಿ ಎದುರಿಸುವುದು ಕಷ್ಟ ಎಂದು ಫಾಫ್ ಡುಪ್ಲೆಸಿಸ್ ಹಾಗೂ ಡೀನ್ ಎಲ್ಗಾರ್ ಹೇಳಿಕೆ ನೀಡಿದ್ದಾರೆ.

Virat Kohli

ತಂಡದ ನಿರ್ದೇಶಕ ರವಿ ಶಾಸ್ತ್ರಿ ಹೇಳಿಕೆಯನ್ನು ಗಮನಿಸಿದರೆ, ರವೀಂದ್ರ ಜಡೇಜ, ಆರ್ ಅಶ್ವಿನ್ ಹಾಗೂ ಅಮಿತ್ ಮಿಶ್ರಾರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾ ಕೂಡಾ ಲೆಗ್ ಸ್ಪಿನ್ನರ್ ಇಮ್ರಾನ್ ತಾಹೀರ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಸಿಮೋನ್ ಹಾರ್ಪರ್ ಹಾಗೂ ಡೆನ್ ಪೈಡ್ ಸ್ಪಿನ್ ಅಷ್ಟಾಗಿ ಭಾರತೀಯರ ಬ್ಯಾಟ್ಸ್ ಮನ್ ಗಳನ್ನು ಬಾಧಿಸುವುದಿಲ್ಲ ಎನ್ನಬಹುದು. [ಟೆಸ್ಟ್ ಪಂದ್ಯಕ್ಕೂ ಮುನ್ನ ಇಶಾಂತ್ ಗೆ ಗಾಯ]

ಬ್ಯಾಟಿಂಗ್ ಬಲ: ಶಿಖರ್ ಧವನ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರ ಹಾಗೂ ರೋಹಿತ್ ಶರ್ಮ ಅಲ್ಲದೆ ಕರ್ನಾಟಕ ಕೆಎಲ್ ರಾಹುಲ್ ಅವರು ಕೂಡಾ ಉತ್ತಮ ಲಯದಲ್ಲಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಸಮಸ್ಯೆ ಕಾಡುತ್ತಿಲ್ಲ. ದಕ್ಷಿಣ ಆಫ್ರಿಕಾಕ್ಕೆ ನಾಯಕ ಹಶೀಂ ಆಮ್ಲಾ ಲಯಕ್ಕೆ ಮರಳದಿರುವುದು ಸಮಸ್ಯೆಯಾಗಿದೆ. ಅದರೆ, ಫಾಫ್ ಡುಪ್ಲೆಸಿಸ್ ಹಾಗೂ ಎಬಿ ಡಿ ವಿಲಿಯರ್ಸ್ ಮೇಲೆ ಅವಲಂಬಿಸಬಹುದಾಗಿದೆ. [ಬೆಂಗಳೂರಲ್ಲಿ ಎಬಿಡಿ 100ನೇ ಟೆಸ್ಟ್ ಪಂದ್ಯ, ಟಿಕೆಟ್ ಬೇಕಾ? ]

AB de villiers

2013-14ರಲ್ಲಿ ಉಭಯ ದೇಶಗಳ ನಡುವಿನ ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡ 1-0 ಅಂತರದಿಂದ ಗೆದ್ದುಕೊಂಡಿತ್ತು. 2009-10ರಲ್ಲಿ ಸರಣಿ 1-1 ರಂತೆ ಸಮಬಲ ಕಂಡಿತ್ತು.
ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ) ಶಿಖರ್ ಧವನ್, ಮುರಳಿ ವಿಜಯ್, ಕೆಎಲ್ ರಾಹುಲ್, ಅಜಿಂಕ್ಯ ರಹಾನೆ, ರೋಹಿತ್ ಶರ್ಮ,ಚೇತೇಶ್ವರ್ ಪೂಜಾರಾ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವೀಂದ್ರ ಜಡೆಜ, ಆರ್ ಅಶ್ವಿನ್, ಅಮಿತ್ ಮಿಶ್ರಾ, ವರುಣ್ ಅರೋನ್, ಸ್ಟುವರ್ಟ್ ಬಿನ್ನಿ, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮ(ಮೊದಲ ಟೆಸ್ಟಿಗೆ ಅಲಭ್ಯ), ಉಮೇಶ್ ಯಾದವ್.

ದಕ್ಷಿಣ ಆಫ್ರಿಕಾ : ಹಶೀಂ ಆಮ್ಲಾ (ನಾಯಕ), ಎಬಿ ಡಿ ವಿಲಿಯರ್ಸ್ (ಉಪ ನಾಯಕ), ತೆಂಬಾ ಬವುಮಾ, ಜೆಪಿ ಡುಮಿನಿ(ಗಾಯಳು ಅಲಭ್ಯ), ಫಾಫ್ ಡು ಪ್ಲೆಸಿಸ್, ಡೀನ್ ಎಲ್ಗಾರ್, ಸಿಮೋನ್ ಹಾರ್ಮರ್, ಇಮ್ರಾನ್ ತಾಹೀರ್, ಮಾರ್ನೆ ಮಾರ್ಕೆಲ್, ವೆರ್ನೊನ್ ಫಿಲ್ಯಾಂಡರ್, ಡೇನ್ ಪೈಡ್, ಕಾಗಿಸೋ ರಬಡಾ, ಡೇಲ್ ಸ್ಟೈನ್, ಸ್ಟಿಯಾನ್ ವಾನ್ ಜೈಲ್, ಡೇನ್ ವಿಲಾಸ್ (ವಿಕೆಟ್ ಕೀಪರ್). (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X