ಚೆನ್ನೈ ಸೂಪರ್ ಕಿಂಗ್ಸ್ ಗೆ ಸ್ಟೈಲಾಗಿ ಮರುಸ್ವಾಗತ ಕೋರಿದ ಧೋನಿ

Posted By:
Subscribe to Oneindia Kannada

ನವದೆಹಲಿ, ಜುಲೈ 15: ಐಪಿಎಲ್ ತಂಡವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೇಲೆ ವಿಧಿಸಲಾಗಿದ್ದ ಎರಡು ವರ್ಷಗಳ ನಿಷೇಧ ಜುಲೈ 14ರ ಮಧ್ಯರಾತ್ರಿಗೆ ಮುಗಿದಿದೆ.

ಈ ಹಿನ್ನೆಲೆಯಲ್ಲಿ, ಆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು, ಆ ತಂಡಕ್ಕೆ ಇನ್ ಸ್ಟಾ ಗ್ರಾಂನಲ್ಲಿ ತಮ್ಮದೇ ಆದ ರೀತಿಯಲ್ಲಿ ಸ್ವಾಗತ ಕೋರಿದ್ದಾರೆ. 2013ರ ಐಪಿಎಲ್ ಫಿಕ್ಸಿಂಗ್ ಹಗರಣದ ಹಿನ್ನೆಲೆಯಲ್ಲಿ ಆ ತಂಡಕ್ಕೆ ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗಿತ್ತು.

A post shared by @mahi7781 on Jul 14, 2017 at 9:24pm PDT

ಹಳದಿ ಬಣ್ಣದ ಟಿ-ಶರ್ಟ್ ಧರಿಸಿರುವ ಧೋನಿ, ಎದುರಿಗೆ ನಾಯಿಯೊಂದು ನಿಂತು ತನ್ನೆರಡೂ ಕಾಲುಗಳನ್ನು ಎತ್ತಿ ಗೌರವ ತೋರುತ್ತಿದೆ. ಧೋನಿ ಬೆನ್ನ ಮೇಲೆ ತಮಿಳಿನ ಪದ ''ತಲಾ' (Thala) ಎಂದು ಬರೆಯಲಾಗಿದ್ದು, ಆ ತಲಾ ಪದದ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಧೋನಿ ತೊಡುತ್ತಿದ್ದ ಜೆರ್ಸಿ ನಂಬರ್ 7 ಎಂದು ಬರೆಯಲಾಗಿದೆ. 'ತಲಾ' ಎಂದರೆ ನಾಯಕ ಎಂದರ್ಥ.

ಧೋನಿ ಮಾಡಿರುವ ಆ ಇನ್ ಸ್ಟಾ ಗ್ರಾಂ ಪೋಸ್ಟ್ ಅನ್ನು ತನ್ನ ಟ್ವಿಟ್ಟರ್ ನ ಅಧಿಕೃತ ಖಾತೆಯಲ್ಲಿ ಉಲ್ಲೇಖಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಆಡಳಿತ ಮಂಡಳಿ ಮಂಡಳಿ, ''ಸಿಂಹಗಳು ಶಿಳ್ಳೆ ಹೊಡೆಯುತ್ತಿವೆ. ಯಾರು ವಾಪಸ್ಸಾಗುತ್ತಿದ್ದಾರೆ ಎಂಬುದನ್ನು ಊಹಿಸಿ'' ಎಂದು ಹೇಳಿದೆ.

ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 2010 ಹಾಗೂ 2011ರ ಐಪಿಎಲ್ ಟೂರ್ನಿಗಳನ್ನು ಗೆದ್ದಿತ್ತು. ಇದಲ್ಲದೆ, 2010 ಹಾಗೂ 2014ರ ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯಲ್ಲೂ ಪ್ರಶಸ್ತಿ ಗೆದ್ದುಕೊಂಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former CSK captain Mahendra Singh Dhoni took to Instagram to celebrate CSK's return and uploaded a picture of him donning a yellow jersey with the number '7' and word 'Thala' printed on it.
Please Wait while comments are loading...