ಕೋಲ್ಕತ್ತಾದಲ್ಲಿ ಮೊಟ್ಟ ಮೊದಲ ಹಗಲು ರಾತ್ರಿ ಟೆಸ್ಟ್ ಪಂದ್ಯ!

Posted By:
Subscribe to Oneindia Kannada

ಕೋಲ್ಕತ್ತಾ, ಜೂನ್ 9 : ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಈ ವರ್ಷ ಮೊಟ್ಟ ಮೊದಲ ಬಾರಿಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಹಗಲು ರಾತ್ರಿ ಪಂದ್ಯವನ್ನಾಡಲಿದೆ. ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ ಅವರು ಬೆಂಗಾಲ್ ಕ್ರಿಕೆಟ್ ಮಂಡಳಿ ಆಡಳಿತ ಚುಕ್ಕಾಣಿ ವಹಿಸಿಕೊಂಡ ಮೇಲೆ ದೊಡ್ಡ ಸವಾಲಿಗೆ ಈಗ ಸಿದ್ಧರಾಗಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನ ಕಾರ್ಯಕ್ರಮ ನಿಗದಿ ಸಮಿತಿ ಗುರುವಾರದಂದು ಈಡನ್ ಗಾರ್ಡನ್ಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರೀನ್ ಸಿಗ್ನಲ್ ನೀಡಿದರು. ನಂತರ 2016-17 ರ ಸೀಸನ್ ಗಾಗಿ ಟೀಂ ಇಂಡಿಯಾದ ವೇಳಾಪಟ್ಟಿ ಪ್ರಕಟಿಸಲಾಯಿತು.

Kolkata's Eden Gardens to host first day-night Test in India

ಈ ವೇಳಾಪಟ್ಟಿಯಂತೆ ನ್ಯೂಜಿಲೆಂಡ್ ತಂಡ ಮೂರು ಟೆಸ್ಟ್ ಪಂದ್ಯಗಳು ಹಾಗೂ ಐದು ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಲಿದೆ. ಇಂದೋರ್ ಹಾಗೂ ಕಾನ್ಪುರಗಳಲ್ಲಿ ಇನ್ನೆರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. [13 ಟೆಸ್ಟ್, 8 ಒಡಿಐ, 3 ಟಿ20 ಟೀಂ ಇಂಡಿಯಾ ವೇಳಾಪಟ್ಟಿ]

ಇದಾದ ಬಳಿಕ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯ, ಮೂರು ಏಕದಿನ ಪಂದ್ಯ ಹಾಗೂ ಮೂರು ಟಿ 20 ಪಂದ್ಯಗಳನ್ನು ಅತಿಥೇಯ ಭಾರತ ಆಡಲಿದೆ. ಒಟ್ಟಾರೆ 13 ಟೆಸ್ಟ್ ಪಂದ್ಯಗಳು ನಿಗದಿಯಾಗಿದ್ದು, ಇದರಲ್ಲಿ ಕಿವೀಸ್ ವಿರುದ್ಧದ ಹಗಲು ರಾತ್ರಿ ಪಂದ್ಯ ಪ್ರಮುಖವಾಗಿದೆ.

ಈಡನ್ ಗಾರ್ಡನ್ಸ್ ನಲ್ಲಿ ಐತಿಹಾಸಿಕ ಹಗಲು ರಾತ್ರಿ ಪಂದ್ಯ ನಡೆಯಲಿರುವುದು ಹೆಮ್ಮೆಯ ವಿಷಯ ಎಂದು ಬೆಂಗಾಲ್ ಕ್ರಿಕೆಟ್ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The venerable Eden Gardens ground will play host to the first ever day-night Test in the country when India take on New Zealand later this year, a senior Cricket Association of Bengal (CAB) official confirmed on Thursday (June 9).
Please Wait while comments are loading...