ಕರ್ನಾಟಕ ಪ್ರೀಮಿಯರ್ ಲೀಗ್ 2016: ತಂಡಗಳ ಅಂಕಪಟ್ಟಿ

By: ಶಂಭು, ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಸೆಪ್ಟೆಂಬರ್, 21 : ನಗರದ ರಾಜನಗರದ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 5ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಯಶಸ್ವಿನತ್ತ ಸಾಗುತ್ತಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಆಡುತ್ತಿದ್ದು, ಪಂದ್ಯಗಳು ಜಿದ್ದಾಜಿದ್ದಿಯಿಂದ ಕೂಡಿವೆ. [ಮಾಯಾಂಕ್, ವಿನಯ್ ಬೊಂಬಾಟ, ಶಿವಮೊಗ್ಗಕ್ಕೆ ಬಿತ್ತು ಗೂಟ!]

[In Pics : ಕರ್ನಾಟಕ ಪ್ರೀಮಿಯರ್ ಲೀಗ್]

ಸೆ.21 ರ ವರೆಗೆತಂಡಗಳ ಅಂಕಪಟ್ಟಿ ನೋಡುವುದಾದರೇ, ಮೈಸೂರು ವಾರಿಯರ್ಸ್ ಮತ್ತು ಬೆಳಗಾವಿ ಪ್ಯಾಂಥರ್ಸ್ ತಂಡಗಳು ಆಡಿದ 2 ಪಂದ್ಯಗಳಲ್ಲಿ ಗೆದ್ದು 4 ಅಂಕ ಪಡೆದುಕೊಂಡು ಹುಮ್ಮಸ್ಸಿನಲ್ಲಿವೆ. ಇನ್ನು ಹುಬ್ಬಳ್ಳಿ ಟೈಗರ್ಸ್ ತಂಡ ಮೂರು ಪಂದ್ಯಗಳಲ್ಲಿ 2 ಪಂದ್ಯ ಗೆದ್ದು ಒಂದರಲ್ಲಿ ಸೋತು 4 ಪಾಯಿಂಟ್ ಗಳನ್ನು ಹೊಂದಿದೆ.

KPL 2016

ಮಂಗಳೂರು ಯುನೈಟೆಡ್ ಮತ್ತು ಬಿಜಾಪುರ ಬುಲ್ಸ್ ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಿ ಒಂದರಲ್ಲಿ ಸೋಲು ಮತ್ತೊಂದರಲ್ಲಿ ಗೆಲುವು ಸಾಧಿಸಿ ತಲಾ 2 ಅಂಕ ಗಳಿಸಿವೆ. ನಮ್ಮ ಶಿವಮೊಗ್ಗ ತಂಡ ಮೂರು ಪಂದ್ಯಗಳನ್ನು ಆಡಿ 2 ಪಂದ್ಯಗಳಲ್ಲಿ ಸೋತು ಒಂದರಲ್ಲಿ ಗೆದ್ದು 2 ಪಾಯಿಂಟ್ ಹೊಂದಿದೆ.

ಬಳ್ಳಾರಿ ಟಸ್ಕರ್ಸ್ ಮತ್ತು ಕಿಚ್ಚ ಸುದೀಪ ನಾಯಕತ್ವದ ರಾಕ್ ಸ್ಟಾರ್ಸ್ ಆಡಿದ ಎರಡು ಪಂದ್ಯಗಳನ್ನು ಸೋತು ಯಾವುದೇ ಅಂಕಗಳನ್ನು ಸಂಪಾದಿಸದೆ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿವೆ.

ಗರಿಷ್ಠ ರನ್ ಗಳಿಸಿದವರು : ಎಂ.ಡಿ. ತಾಹಾ 164, ಸಮರ್ಥ್ ಆರ್ 151, ಮಯಾಂಕ್ ಅಗರವಾಲ್143.

ಗರಿಷ್ಠ ವಿಕೆಟ್ ಕಬಳಿಸಿದವರು : ಪ್ರವೀಣ ದುಬೆ 5, ಶ್ರೀನಾಥ ಅರವಿಂದ 5, ಸಿನಾನ್ ಅಬ್ದುಲ್ ಖಾದರ 5.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Premier League (KPL) 2016 Points Table as on september 21.
Please Wait while comments are loading...