ಕೊಹ್ಲಿಗೆ ಒಂದು ಪಂದ್ಯದ ನಿಷೇಧದ ಭೀತಿ ಏಕೆ?

Posted By:
Subscribe to Oneindia Kannada

ಬೆಂಗಳೂರು, ಮೇ 06: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ 9ರಲ್ಲಿ ಸೋಲಿನ ಸರಮಾಲೆ ಹೊತ್ತು ತಿರುಗುತ್ತಿದೆ. ಈಗ ನಾಯಕ ವಿರಾಟ್ ಕೊಹ್ಲಿ ವಿರುದ್ಧ ದಂಡ ಕೂಡಾ ಹಾಕಲಾಗಿದೆ. ಜತೆಗೆ ಒಂದು ಪಂದ್ಯದ ನಿಷೇಧದ ಭೀತಿಯನ್ನು ಎದುರಿಸುತ್ತಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಐಪಿಎಲ್‌ನ ಮುಂಬರುವ ಪಂದ್ಯಗಳಲ್ಲಿ ಆರ್ ಸಿಬಿ ತಂಡ ನಿಗದಿತ ಸಮಯಕ್ಕೆ ಓವರ್-ರೇಟ್ ಕಾಯ್ದುಕೊಳ್ಳಲು ವಿಫಲವಾದರೆ ವಿರಾಟ್ ಕೊಹ್ಲಿ ಅವರು ಒಂದು ಪಂದ್ಯದಿಂದ ನಿಷೇಧಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶ ಬಂದಿದೆ. [ಗಂಭೀರ್ ಗೆ ದಂಡ, ವಿರಾಟ್ ಕೊಹ್ಲಿ ನಷ್ಟ]

ಆಡಿರುವ 7 ಪಂದ್ಯಗಳಲ್ಲಿ ಕೇವಲ 2 ಪಂದ್ಯವನ್ನು ಗೆದ್ದುಕೊಂಡಿರುವ ಆರ್‌ಸಿಬಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಜೊತೆಗೆ ನಿಗದಿತ ಸಮಯದೊಳಗೆ(1 ಗಂಟೆ 25 ನಿಮಿಷದ ಅವಧಿ) ಓವರ್‌ಗಳನ್ನು ಪೂರ್ಣಗೊಳಿಸಬೇಕಾಗಿದೆ.

IPL 2016: RCB captain Virat Kohli facing danger of 1-match ban

ವಿರಾಟ್ ಕೊಹ್ಲಿ ಅವರು ಈಗಾಗಲೇ ಎರಡು ಬಾರಿ ಓವರ್‌ರೇಟ್ ಕಾಯ್ದುಕೊಳ್ಳದ ಕಾರಣಕ್ಕೆ 12 ಲಕ್ಷ ರೂ. ಹಾಗೂ 24 ಲಕ್ಷ ರೂ. ದಂಡ ಪಾವತಿಸಿದ್ದಾರೆ. ಮೂರನೇ ಬಾರಿ ಈ ತಪ್ಪು ನಡೆದರೆ, ನೀತಿ ಸಂಹಿತೆಯ ಪ್ರಕಾರ 30 ಲಕ್ಷ ರೂ. ದಂಡ ತೆರಬೇಕಲ್ಲದೆ ಒಂದು ಪಂದ್ಯದಿಂದ ನಿಷೇಧವನ್ನು ಎದುರಿಸಬೇಕಾಗುತ್ತದೆ. ಕ್ರಿಕೆಟ್ ನಿಯಮ 4, 4.1 ರಿಂದ 4.25ರ ತನಕ ಇರುವ ನಿಬಂಧನೆಗಳ ಪೂರ್ಣ ವಿವರ ಇಲ್ಲಿದೆ ಓದಿ.

ಕೊಹ್ಲಿ ಅವರು ಐಪಿಎಲ್‌ 9ರಲ್ಲಿ ಆಡಿರುವ 7 ಇನಿಂಗ್ಸ್‌ಗಳಲ್ಲಿ 433 ರನ್ ಗಳಿಸಿ ಟೂರ್ನಿಯಲ್ಲಿ ಅಗ್ರ ಸ್ಕೋರರ್ ಎನಿಸಿ ಅರೇಂಜ್ ಕ್ಯಾಪ್ ಧರಿಸಿದ್ದಾರೆ. [ಗೆಲುವಿನ ಸಂಭ್ರಮಕ್ಕೆ ಸಾಕ್ಷಿಯಾದ ಶಾರುಖ್]

ಎ.22 ರಂದು ಪುಣೆ ವಿರುದ್ಧ ಹಾಗೂ ಸೋಮವಾರ ಕೋಲ್ಕತಾ ವಿರುದ್ಧ ಪಂದ್ಯದಲ್ಲಿ ನಿಗದಿತ ಸಮಯದೊಳಗೆ ಓವರ್ ಪೂರ್ಣಗೊಳಿಸದ ಕಾರಣಕ್ಕೆ ಕೊಹ್ಲಿಗೆ ದಂಡ ವಿಧಿಸಲಾಗಿದೆ. ಆರ್‌ಸಿಬಿ ಶನಿವಾರ ಪುಣೆ ಸೂಪರ್‌ಜಯಂಟ್ಸ್ ತಂಡವನ್ನು ಎದುರಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
It is not the best of the times for Virat Kohli as the captain of Royal Challengers Bangalore (RCB) in the ongoing Indian Premier League 2016 (IPL 9) Twenty20 tournament.
Please Wait while comments are loading...