ವಿಶ್ವಕಪ್ ಫೈನಲಿಗೂ ಮುನ್ನ ಹರ್ಮನ್ ಪ್ರೀತ್ ಗೆ ಗಾಯ

Posted By:
Subscribe to Oneindia Kannada

ಲಂಡನ್, ಜುಲೈ 23: ಐಸಿಸಿ ಮಹಿಳಾ ವಿಶ್ವಕಪ್‌ ಫೈನಲ್‌‌ ಪಂದ್ಯಕ್ಕೂ ಭಾರತದ ತಂಡದ ಸ್ಟಾರ್ ಆಟಗಾರ್ತಿ ಗಾಯಾಳು ಪಟ್ಟಿಗೆ ಸೇರಿದ್ದಾರೆ.

ಲಾರ್ಡ್ಸ್ ಅಂಗಳದಲ್ಲಿ ಭಾರತ-ಇಂಗ್ಲೆಂಡ್‌ ತಂಡ ಮುಖಾಮುಖಿಯಾಗಲಿವೆ. ಭಾರತ ತಂಡವು, ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ನೆಟ್‌ ಅಭ್ಯಾಸದ ವೇಳೆ ಸ್ಫೋಟಕ ಆಟಗಾರ್ತಿ ಹರ್ಮನ್‌ ಪ್ರೀತ್ ಕೌರ್ ಅವರು ಗಾಯಗೊಂಡಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

Injury Worries For Harmanpreet Kaur Ahead Of Final Against England?

ಪ್ರೀತ್‌ ಕೌರ್‌‌ ಬಲ ಭುಜಕ್ಕೆ ಗಾಯವಾಗಿದೆ ಎಂದು ತಿಳಿಸಿದೆ.

ಆದರೆ, ಇದಕ್ಕೆ ಸಂಬಂಧಿಸಿದಂತೆ ತಂಡದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ನಾಯಕಿ ಮಿಥಾಲಿ ರಾಜ್ ಮಾತ್ರ, ಆಡುವ ಹನ್ನೊಂದು ಮಂದಿ ತಂಡದಲ್ಲಿ ಹರ್ಮನ್ ಪ್ರೀತ್ ಇರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

England Beat India By 9 Runs To Win ICC Women's World Cup 2017 | Oneindia Kannada

ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿ ಅಜೇಯ 171 ರನ್‌ ಗಳಿಸಿದ ಕೌರ್‌ ಅವರು ಫೈನಲ್ ಪಂದ್ಯಕ್ಕೆ ಅಲಭ್ಯರಾದರೆ ಭಾರಿ ನಷ್ಟವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Harmanpreet Kaur is said to have hurt her shoulder during a practice session on Saturday, a day before the all-important Women's World Cup final against hosts England.
Please Wait while comments are loading...