110 ವರ್ಷ ಹಳೆ ದಾಖಲೆ ಮುರಿದ ಯುವ ಕ್ರಿಕೆಟರ್ !

Posted By:
Subscribe to Oneindia Kannada

ರಾಜ್ ಕೋಟ್, ನವೆಂಬರ್ 14: ಪ್ರವಾಸಿ ಇಂಗ್ಲೆಂಡ್ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾ ನಲ್ಲಿ ಅಂತ್ಯ ಕಂಡಿರಬಹುದು. ಆದರೆ, ಅಂಕಿ ಅಂಶ ಕಲೆಹಾಕುವವರಿಗೆ ಭರಪೂರ ದಾಖಲೆಗಳ ಭಂಡಾರವೇ ಸಿಕ್ಕಿದೆ.

ಗ್ಯಾಲರಿ: ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್

ಭಾರತದ ನಂಟು ಹೊಂದಿರುವ ಇಂಗ್ಲೆಂಡಿನ ಯುವ ಬ್ಯಾಟ್ಸ್ ಮನ್ ಹಸೀಬ್ ಹಮೀದ್ ತನ್ನ ಚೊಚ್ಚಲ ಪಂದ್ಯದಲ್ಲೇ ದಾಖಲೆ ಪುಟ ಸೇರಿದ್ದಾರೆ. [ಶತಕ ಸಿಡಿಸಿ, ದಾಖಲೆಗಳನ್ನು ಅಳಿಸಿದ ನಾಯಕ ಕುಕ್!]

ಡ್ರಾ ಪಂದ್ಯದ ಸ್ಕೋರ್ ಕಾರ್ಡ್

ರಾಜ್ ಕೋಟ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಐದನೇ ದಿನದಂದು ಡ್ರಾನಲ್ಲಿ ಅಂತ್ಯಕಂಡಿದೆ. ಐದನೇ ದಿನದಂದು ಇಂಗ್ಲೆಂಡ್ ಪರ ಎರಡನೇ ಇನ್ನಿಂಗ್ಸ್ ನಲ್ಲಿ ನಾಯಕ ಕುಕ್ ಅವರು ಶತಕ ಬಾರಿಸಿದರೆ, ಆರಂಭಿಕ ಬ್ಯಾಟ್ಸ್ ಮನ್ ಹಮೀದ್ ಅವರು 82ರನ್ ಗಳಿಸಿ ಶತಕ ವಂಚಿತರಾದರು. [ಹಿಟ್ ವಿಕೆಟ್ ಔಟ್, ವಿರಾಟ್ ಕೊಹ್ಲಿ ಎರಡನೇ ಕ್ಯಾಪ್ಟನ್]

ಆದರೆ, ಇಂಗ್ಲೆಂಡ್ ತಂಡ 260/3 ಸ್ಕೋರ್ ಮಾಡಿ ಭಾರತಕ್ಕೆ 310ರನ್ ಟಾರ್ಗೆಟ್ ನೀಡಿತು. ಭಾರತ 52.3 ಓವರ್ ಗಳಲ್ಲಿ 172/6 ಸ್ಕೋರ್ ಮಾಡಿ ಡ್ರಾಗೆ ತೃಪ್ತಿಪಟ್ಟಿತು.

1st Test: England's Haseeb Hameed breaks 110-year record against India

ಈ ನಡುವೆ 19 ವರ್ಷ ವಯಸ್ಸಿನ ಹಮೀದ್ ಎರಡನೇ ಇನ್ನಿಂಗ್ಸ್ ನಲ್ಲಿ ಗಳಿಸಿದ 82ರನ್ ದಾಖಲೆ ಬರೆಯಲು ನೆರವಾಯಿತು.

ಇಂಗ್ಲೆಂಡ್ ಪರ ಚೊಚ್ಚಲ ಪಂದ್ಯವಾಡಿದ ಟೀನೇಜರ್ ಗಳ ಪೈಕಿ ಹಮೀದ್ ಬಾರಿಸಿದ 84ರನ್ ಇಲ್ಲಿ ತನಕದ ಅತ್ಯಧಿಕ ಮೊತ್ತವಾಗಿದೆ. ಇದಕ್ಕೂ ಮುನ್ನ 1906ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜಾಕ್ ಕ್ರಾಫರ್ಡ್ ಅವರು 74ರನ್ ಗಳಿಸಿದ್ದು ಗೈಷ್ಠ ಮೊತ್ತವಾಗಿತ್ತು.

ಹಮೀದ್ ಸಾಧನೆ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದೆ.

ಇಂಗ್ಲೆಂಡ್ ಪರ 21 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 49ರನ್ ಸರಾಸರಿಯಂತೆ 4 ಶತಕ ಹಾಗೂ 10 ಅರ್ಧಶತಕದೊಂದಿಗೆ 1,568ರನ್ ಗಳಿಸಿದ್ದ ಹಮೀದ್ ಗೆ ರಾಜ್ ಕೋಟ್ ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ನೀಡಲಾಯಿತು. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
England's debutant Haseeb Hameed yesterday (November 13) broke a 110-year-old record, against India, on the 5th and final day of the 1st Test which ended in a draw.
Please Wait while comments are loading...