ಧೋನಿ ರುಂಡ ಹಿಡಿದು ಹುಚ್ಚಾಟವಾಡಿದ್ದವರಿಗೆ ಮಂಗಳಾರತಿ

Subscribe to Oneindia Kannada

ಮಿರ್ಪುರ, ಮಾರ್ಚ್, 07: ಬಾಂಗ್ಲಾ ಮಾಧ್ಯಮಗಳು ಮತ್ತು ಅಭಿಮಾನಿಗಳ ಹುಚ್ಚಾಟಕ್ಕೆ ಎಂಎಸ್ ಧೋನಿ ಪಡೆ ಅದ್ಭುತ ಪ್ರದರ್ಶನದಿಂದಲೇ ಉತ್ತರ ನೀಡಿದೆ. ಬಾಂಗ್ಲಾ ಹುಚ್ಚಾಟ ಭಾರತದ ಆಟದ ಎದುರು ಮಣ್ಣು ಪಾಲಾಗಿದೆ.

ಫೈನಲ್ ಗೂ ಮುನ್ನ ಬಾಂಗ್ಲಾ ವೇಗಿ ತಸ್ಕಿನ್ ಅಹಮದ್ ಕೈಯಲ್ಲಿ ಧೋನಿ ರುಂಡವನ್ನು ಹಿಡಿದಂತೆ ಚಿತ್ರಿಸಿದ್ದವರಿಗೆ ಭಾರತೀಯ ಅಭಿಮಾನಿಗಳು ತಕ್ಕ ಉತ್ತರವನ್ನೇ ನೀಡಿದ್ದಾರೆ. ಧೋನಿ ಪಡೆ ಸುದ್ದಿಗೆ ಬಂದರೆ ನಿಮಗೆ ಯಾವ ಗತಿಯಾಗುತ್ತದೆ ಎಂಬುದನ್ನು ಸಾರಿ ಸಾರಿ ಹೇಳಿದ್ದಾರೆ. [ಏಷ್ಯಾಕಪ್ ಫೈನಲ್‌ಗೂ ಮುನ್ನ ಏನಿದು ಅಸಹ್ಯ..!]

ಮಳೆಯಿಂದ 15 ಓವರ್ ಗೆ ಇಳಿದ ಪಂದ್ಯವನ್ನು ಭಾರತ ಅನಾಯಾಸವಾಗಿ ಚೇಸ್ ಮಾಡಿತು. ನಾಯಕ ಎಂಎಸ್ ಧೋನಿ ಕೊನೆಯಲ್ಲಿ ಆರ್ಭಟಿಸಿದ ಬಗೆ ಬಾಂಗ್ಲಾದೇಶಿಗರನ್ನು ಬೆಚ್ಚಿ ಬೀಳಿಸಿತು. ಕೇವಲ ಆರು ಚೆಂಡುಗಳಲ್ಲಿ 20 ರನ್ ಗಳಿಸಿದ ಮಹೇಂದ್ರ ಸಿಂಗ್ ಧೋನಿ ಬಾಂಗ್ಲಾಗೆ ಸರಿಯಾಗಿ ಚಳಿ ಬಿಡಿಸಿದರು.

ಏಷ್ಯಾಕಪ್ ಮುಡಿಗೇರಿಸಿಕೊಂಡ ಭಾರತ

 ಧೋನಿ ರುಂಡ ತಸ್ಕಿನ್ ಕೈಯಲ್ಲಿ

ಧೋನಿ ರುಂಡ ತಸ್ಕಿನ್ ಕೈಯಲ್ಲಿ

ಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ರುಂಡವನ್ನು ಬಾಂಗ್ಲಾ ವೇಗಿ ತಸ್ಕಿನ್ ಅಹಮದ್ ಕೈ ಹಿಡಿದಿರುವಂತೆ ಚಿತ್ರಿಸಲಾಗಿತ್ತು.

ಈಗ ಹೇಗಾಯ್ತು?

ನಾಯಕ ಎಂಎಸ್ ಧೋನಿ ಇದೀಗ ಅಹಮದ್ ರುಂಡವನ್ನು ಕೈಯಲ್ಲಿ ಹಿಡಿದಿದ್ದು ಈಗ ಹೇಗಾಯಿತು ಎಂದು ಪ್ರಶ್ನೆ ಮಾಡುತ್ತಿರುವಂತೆ ಭಾರತೀಯ ಅಭಿಮಾನಿಗಳೂ ಫೋಟೋ ಶಾಪ್ ಮಾಡಿ ಪ್ರತ್ಯುತ್ತರ ನೀಡಿದ್ದಾರೆ.

ನಿಜ ಯಾವುದು?

ಧೋನಿ ರುಂಡವನ್ನು ಕೈಯಲ್ಲಿ ಹಿಡಿದಿರುವಂತೆ ಮಾಡಿದ್ದು ಅವರ ಭ್ರಮೆ, ಎರಡು ಮೀನುಗಳನ್ನು ಹಿಡಿದು ಹೋಗುವುದು ರಿಯಾಲಿಟಿ ಎಂದು ಭಾರತೀಯರು ಅದೇ ಫೋಟೊವನ್ನು ಮತ್ತೆ ಫೋಟೋ ಶಾಪ್ ಮಾಡಿದ್ದಾರೆ.

ಶಾಸ್ತ್ರಿ ಹೇಳಿದ್ದೇನು?

ಶಾಸ್ತ್ರಿ ಹೇಳಿದ್ದೇನು?

ಪಂದ್ಯದ ನಂತರ ಮಾತನಾಡಿದ ಶಾಸ್ತ್ರಿ ನಾವು ಎಂದಿನಂತೆ ಕ್ರಿಕೆಟ್ ಆಡಿದೆವು. ಯಾರೋ ಮಾಡಿದ್ದ ಕೆಟ್ಟ ಕೆಲಸ ನಮಗೆ ಮತ್ತಷ್ಟು ಸ್ಫೂರ್ತಿ ನೀಡಿತು ಎಂದು ಹೇಳಿದ್ದಾರೆ.

ಧವನ್-ಕೊಹ್ಲಿ ಜುಗಲ್ ಬಂದಿ

ಆರಂಭಿಕ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಜತೆಯಾಟದಲ್ಲಿ ಬಾಂಗ್ಲಾ ನುಜ್ಜು ಗುಜ್ಜಾಗಿದ್ದು ಹೀಗೆ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Be it in any part of the world, Indian cricket team enjoys huge support from the fans. But on Sunday night (March 6), at the Sher-e-Bangla Stadium, it was different.It was a sea of green at the ground in Mirpur as Bangladeshi fans trooped in to back their men against India in the Asia Cup Twenty20 final. What the Asia Cup 2016 final taught to Bangladesh Do not mess with Dhoni!
Please Wait while comments are loading...