ಆಸ್ಟ್ರೇಲಿಯನ್ ಓಪನ್‌: ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಔಟ್!

Posted By:
Subscribe to Oneindia Kannada

ಮೆಲ್ಬೋರ್ನ್, ಜನವರಿ19: ವಿಶ್ವದ ನಂ 2 ಆಟಗಾರ, ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಗೆ ಉಜ್ಬೇಕಿಸ್ತಾನದ ಆಟಗಾರ ಗುರುವಾರದಂದು ಅಚ್ಚರಿಯ ಸೋಲುಣಿಸಿದ್ದಾರೆ.ಈ ಬಾರಿಯ ಆಸ್ಟ್ರೇಲಿಯನ್ ಓಪನ್‌ ನ ಎರಡನೆ ಸುತ್ತಿನಲ್ಲೇ ಜೊಕೊವಿಕ್ ನಿರ್ಗಮಿಸಿದ್ದಾರೆ.

ಆರು ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ್ ಜೊಕೊವಿಕ್ ಅವರು ಏಳನೇ ಬಾರಿ ಚಾಂಪಿಯನ್ ಆಗುವ ಕನಸು ಭಗ್ನವಾಗಿದೆ. ಪುರುಷರ ಸಿಂಗಲ್ಸ್ ನ ಎರಡನೇ ಸುತ್ತಿನ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಡೆನಿಸ್ ಇಸ್ಟೊಮಿನ್ ವಿರುದ್ಧ 7-6(10/8), 5-7, 2-6, 7-6(7/5) ಸೆಟ್‌ಗಳ ಅಂತರದಿಂದ ಸೋಲು ಕಂಡಿದ್ದಾರೆ.

Australian Open: World No. 2 Novak Djokovic suffers shock defeat by World No. 117 Denis Istomin

ಸುಮಾರು ನಾಲ್ಕು ಗಂಟೆ, 48 ನಿಮಿಷಗಳ ಹೋರಾಟ ನಡೆಸಿ ಕೂಡಾ ವಿಶ್ವದ 117ನೇ ಶ್ರೇಯಾಂಕಿತ ಡೆನಿಸ್ ವಿರುದ್ಧ ಜೊಕೊವಿಕ್ ಸೋತಿದ್ದಾರೆ. ಜೊಕೊವಿಕ್ 2008ರ ವಿಂಬಲ್ಡನ್ ಟೂರ್ನಿಯ ಬಳಿಕ ಎರಡನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಎರಡನೆ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ. 12 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್‌ಗೆ ಆಘಾತಕಾರಿ ಸೋಲುಣಿಸಿದ ಇಸ್ಟೊಮಿನ್ ಮೂರನೆ ಸುತ್ತಿನಲ್ಲಿ ಸ್ಪೇನ್‌ನ ಪಾಬ್ಲೊ ಕ್ಯಾರ್ರೆನೊರನ್ನು ಎದುರಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Denis Istomin of Uzbekistan played the match of his life on Thursday (Jan 19) when he defeated world number two Novak Djokovic of Serbia at the Australian Open.
Please Wait while comments are loading...