Udupi Gang War: ಉಡುಪಿಯನ್ನು ಬೆಚ್ಚಿಬೀಳಿಸಿದ ಗರುಡ ಗ್ಯಾಂಗ್‌ನ ಹಿಸ್ಟರಿ ಏನು..?
ಉಡುಪಿ, ಮೇ 28: ಮೇ 18ರಂದು ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡೆದ ಗ್ಯಾಂಗ್‌ವಾರ್ ಮೂಲಕ ಇಡಿ ರಾಜ್ಯದಾದ್ಯಂತ ಸುದ್ದಿ ಮಾಡಿರುವ ಕಾಪು ಮೂಲದ ಗ್ಯಾಂಗ್ ಹೆಸರು ಕೇಳಿದರೆ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಷ್ಣುವಿನ ವಾಹನ ಗರುಡನ ಹೆಸರು ಇಟ್ಟುಕೊಂಡು ದನ ಕಳ್ಳತನ ಮಾಡಲು ಪ್ರಾರಂಭವಾದ ಈ ಗರುಡ ಗ್ಯಾಂಗ್, ಹತ್ತು ವರ್ಷಗಳಲ್ಲಿ ನಟೋರಿಯಸ್ಸಾಗಿ ಬೆಳೆದಿದೆ. ಏಪ್ರಿಲ್ 2022ರಂದು ಗರುಡ ಗ್ಯಾಂಗ್‌ನ ಲೀಡರ್ ಆರೋಪಿ ಆಶಿಕ್ ಶೂಟ್ ಔಟ್ ಮೂಲಕ ಸುದ್ದಿಯಾಗಿದ್ದ. ಕೊತ್ತನೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬೆಂಗಳೂರು ಮೂಲದ ವ್ಯಕ್ತಿಯ ಕಾರು ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣ ಸಂಬಂಧ ಆಶಿಕ್ ಮತ್ತು ಇಸಾಕ್ ಎನ್ನುವಾತನ ಮೇಲೆ ಪ್ರಕರಣ ದಾಖಲಾಗಿತ್ತು.

ಪ್ರಕರಣ ಕೈಗೆತ್ತಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಆಶಿಕ್ ಮತ್ತು ಇಸಾಕ್ ತಾವು ಎಷ್ಟು ನಟೋರಿಯಸ್ ಎನ್ನುವುದನ್ನು ಅವತ್ತೆ ತೋರಿಸಿದ್ದರು. ತಮ್ಮನ್ನು ಹಿಡಿಯಲು ಬಂದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಕೊಲೆ ಮಾಡಿ ಪರಾರಿ ಯಾಗಲು ಯತ್ನಿಸಿದ ಇವರಿಗೆ ಗುಂಡೇಟು ನೀಡಿ ಬಂಧಿಸಬೇಕಾದ ಪ್ರಮೇಯ 2020ರಲ್ಲಿ ನಡೆದಿತ್ತು. ಸದ್ಯ ಹೊಸ ಪ್ರಕರಣದ ಮೂಲಕ ಆಶಿಕ್ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.
ಇನ್ನು ಉಡುಪಿಯ ಕುಂಜಿಬೆಟ್ಟು ರಸ್ತೆ ಬಳಿ ನಡೆದ ಗರುಡ ಗ್ಯಾಂಗ್‌ನ ಆಶಿಕ್ ಮತ್ತು ಮಜಿದ್ ನಡುವೆ ಗ್ಯಾಂಗ್‌ವಾರ್‌ಗೂ ಮೊದಲು ಕಾಪುವಿನಲ್ಲಿ ಟಾಕ್ ವಾರ್ ಒಂದು ನಡೆದಿತ್ತು. ಇದಾದ ಬಳಿಕ ಮಜೀದ್ ಆಶಿಕ್ ತಂಡಕ್ಕೆ ಉಡುಪಿಗೆ ಬರುವಂತೆ ಆಹ್ವಾನ ನೀಡಿದ್ದ. ಉಡುಪಿಗೆ ತನ್ನ ಸಂಗಡಿಗರೊಂದಿಗೆ ಬಂದಿದ್ದ ಆಶಿಕ್ ಕಾರಿನಿಂದ ಕೆಳಗೆ ಇಳಿದೇ ಇರಲಿಲ್ಲ. ಇದರಿಂದ ಕೋಪಗೊಂಡ ಮಜೀದ್ ತನ್ನ ಕಾರಿನಿಂದ ಆಶಿಕ್ ಕಾರಿಗೆ ಡಿಕ್ಕಿ ಹೊಡೆಸಿದ್ದಾನೆ.
ಬಳಿಕ ಕಾರಿನಲ್ಲಿ ತಂದಿದ್ದ ತಲ್ವಾರ್ ಡ್ಯಾಗರ್ ದೊಣ್ಣೆಗಳನ್ನ ಬಳಸಿ ಹಲ್ಲೆಗೆ ಮುಂದಾಗಿದ್ದಾನೆ. ದೃಶ್ಯಾವಳಿಗಳಲ್ಲಿ ಕೈಗೆ ಸಿಕ್ಕ ವಸ್ತುಗಳ ಮೂಲಕ ಎರಡು ತಂಡದವರು ಹಲ್ಲೆ ನಡೆಸುತ್ತಾರೆ. ಇನ್ನು ಬಿಳಿ ಬಣ್ಣದ ಕಾರು ವೇಗವಾಗಿ ಚಲಿಸಿ ಬಂದು ಹಲ್ಲೆಗೆ ನಿಂತ ಎದುರಾಳಿ ತಂಡದವನನ್ನ ಗುದ್ದಿಕೊಂಡು ಹೋಗುವ ದೃಶ್ಯ ಬಂತು ಭಯಾನಕವಾಗಿದೆ. ಸದ್ಯ ಉಡುಪಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಘಟನೆಯಲ್ಲಿ ಭಾಗಿಯಾದ ಆರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.












Click it and Unblock the Notifications