Get Updates
Get notified of breaking news, exclusive insights, and must-see stories!

ಹಿಜಾಬ್ ವಿವಾದ: ಸ್ಥಳೀಯಕ್ಕಿಂತ ಮೊದಲು ಪಾಕ್ ಮಾಧ್ಯಮದಲ್ಲಿ ಬಂದಿದ್ದು ಹೇಗೆ?; ಗೃಹ ಸಚಿವರಿಗೆ ಪತ್ರ

ಉಡುಪಿ, ಫೆಬ್ರವರಿ 16: ಉಡುಪಿಯ ಹಿಜಾಬ್ ವಿವಾದ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಉಡುಪಿಯಿಂದ ಆರಂಭವಾದ ಹಿಜಾಬ್ ಕಿಚ್ಚು ರಾಜ್ಯದಲ್ಲಿ ಭಾರೀ ವಿವಾದ ಮಾಡಿದೆ. ಹಿಜಾಬ್ ವಿವಾದವನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಾಯ ಮಾಡುತ್ತಿರುವ ನಡುವೆಯೇ ಉಡುಪಿ ಶಾಸಕ ರಘುಪತಿ ಭಟ್, ಹಿಜಾಬ್ ವಿವಾದದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ‌ಮನವಿ ಮಾಡಿರುವ ರಘುಪತಿ ಭಟ್, "ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಹಿಜಾಬ್ ಪ್ರಕರಣವನ್ನು ಮತೀಯ ಇಸ್ಲಾಂಮಿಕ್ ಸಂಘಟನೆಗಳು ಜನರಲ್ಲಿ ಕೋಮುವಾದ ಸೃಷ್ಟಿಸಿ ಅಶಾಂತಿ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವಲ್ಲಿ ಪಡ್ಯಂತ್ರ ರೂಪಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸುವುದು ಅತ್ಯವಶ್ಯಕವಾಗಿದೆ''.

 ಮತಾಂಧತೆಯ ಕುರಿತು ತರಬೇತಿ

ಮತಾಂಧತೆಯ ಕುರಿತು ತರಬೇತಿ

"ಉಡುಪಿ ಜಿಲ್ಲೆಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ 12 ಮಂದಿ ವಿದ್ಯಾರ್ಥಿಗಳಿಗೆ ಮತೀಯವಾದಿ ಇಸ್ಲಾಂಮಿಕ್ ಸಂಘಟನೆಗಳು 3 ದಿನಗಳ ಕಾಲ ಗುಪ್ತ ಸ್ಥಳದಲ್ಲಿ ಮತಾಂಧತೆಯ ಕುರಿತು ತರಬೇತಿ ನೀಡಿರುವುದು ಈ ವಿದ್ಯಾರ್ಥಿಗಳಿಂದ ತಿಳಿದಿರುತ್ತದೆ,'' ಎಂದು ಶಾಸಕ ರಘುಪತಿ ಭಟ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ಹಿಜಾಬ್ ವಿಚಾರ ಬಂದಾಗ ಕಾಲೇಜು ಶಿಕ್ಷಣ ಸಮಿತಿ, ಪೋಷಕರು ಹಾಗೂ ವಿದ್ಯಾರ್ಥಿಗಳನ್ನೊಳಗೊಂಡ ಶಿಕ್ಷಣ ಸೇವಾ ಸಮಿತಿ ಸದರಿ 12 ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ- ಸೂಚನೆಯನ್ನು ನೀಡಲಾಗಿದ್ದರೂ, ಸಹ 6 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ತರಗತಿಯೊಳಗೆ ಪ್ರವೇಶ ನೀಡುವಂತೆ ಹಕ್ಕೋತ್ತಾಯ ಮಾಡಿದ್ದಾರೆ,'' ಎಂದು ಶಾಸಕ ರಘುಪತಿ ಭಟ್ ಪತ್ರದಲ್ಲಿ ಹೇಳಿದ್ದಾರೆ.

 ವಿದ್ಯಾರ್ಥಿನಿಯರ ಮೊಂಡುವಾದ

ವಿದ್ಯಾರ್ಥಿನಿಯರ ಮೊಂಡುವಾದ

"ಸರಕಾರದಿಂದ ಸಮವಸ್ತ್ರ ಸಂಹಿತೆಯ ಬಗ್ಗೆ ಸ್ಪಷ್ಟ ಆದೇಶ ಬಂದರೂ, ಮತೀಯ ಇಸ್ಲಾಂಮಿಕ್ ಸಂಘಟನೆಗಳ ಕುಮ್ಮಕ್ಕಿನಿಂದಾಗಿ ಹಿಜಾಬ್ ಧರಿಸುವುದು ತಮ್ಮ ಧಾರ್ಮಿಕ ಹಕ್ಕು ಎಂಬುವುದಾಗಿ ಈ ವಿದ್ಯಾರ್ಥಿನಿಯರು ಮೊಂಡುವಾದವನ್ನು ಮಾಡುತ್ತಿದ್ದಾರೆ. ಉಡುಪಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಹಿಜಾಬ್ ಪ್ರಕರಣ ಸ್ಥಳೀಯ ಪತ್ರಿಕೆ ಹಾಗೂ ಸ್ಥಳೀಯ ಸುದ್ದಿ ವಾಹಿನಿಯಲ್ಲಿ ಭಿತ್ತರಿಸುವ ಮೊದಲೇ, ಪಾಕಿಸ್ತಾನದ ಸುದ್ದಿ ವಾಹಿನಿಯಾದ ಆಲ್‌ ಜಜೀರಾದಲ್ಲಿ ಹಾಗೂ ರಾಷ್ಟ್ರೀಯ ಸುದ್ದಿ ವಾಹಿನಿಯಾದ ಎನ್‌ಡಿಟಿವಿಯಲ್ಲಿ ಭಿತ್ತರವಾಗಿದೆ," ಎಂದು ರಘುಪತಿ ಭಟ್ ಆಪಾದಿಸಿದ್ದಾರೆ.

 ಎಸ್‌ಡಿಪಿಐ ಮತ್ತು ಸಿಎಫ್ಐ ಹುನ್ನಾರ

ಎಸ್‌ಡಿಪಿಐ ಮತ್ತು ಸಿಎಫ್ಐ ಹುನ್ನಾರ

"ಈ ಅಂಶಗಳನ್ನು ಗಮನಿಸಿದಾಗ ಇದು ಕೋಮು ಹಾಗೂ ಮತೀಯವಾದ ಸೃಷ್ಟಿಸಿ ಅಶಾಂತಿ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡಿಸುವಲ್ಲಿ ಇಸ್ಲಾಂಮಿಕ್ ಮತೀಯ ಸಂಘಟನೆಗಳಾದ ಎಸ್‌ಡಿಪಿಐ ಮತ್ತು ಸಿಎಫ್ಐ ಇವರ ಹುನ್ನಾರವಾಗಿದೆ ಎಂಬುದನ್ನು ತೋರಿಸುತ್ತದೆ. ಅಲ್ಲದೆ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಕಿಸ್ತಾನದಲ್ಲಿ ಭಾರತದ ರಾಯಭಾರಿ ಕಚೇರಿಗೆ ಈ ಪ್ರಕರಣದ ಬಗ್ಗೆ ವರದಿ ನೀಡುವಂತೆ ನೋಟಿಸ್ ಕೂಡಾ ಜಾರಿ ಮಾಡಿರುವುದು ಗಮನಿಸಬೇಕಾದ ಅಂಶವಾಗಿರುತ್ತದೆ," ಎಂದು ಪತ್ರದಲ್ಲಿ ತಿಳಿಸಲಾಗಿದೆ.

 ಭಾರತದಲ್ಲಿ ಮುಸ್ಲಿಮರು ಸುರಕ್ಷಿತರಲ್ಲ ಎಂಬ ಆಪಾದನೆ

ಭಾರತದಲ್ಲಿ ಮುಸ್ಲಿಮರು ಸುರಕ್ಷಿತರಲ್ಲ ಎಂಬ ಆಪಾದನೆ

"ಹಿಜಾಬ್ ವಿಚಾರದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳನ್ನು ಅವಲೋಕಿಸಿದಾಗ ಭಾರತದ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಂದಿಸುವುದು, ಭಾರತದಲ್ಲಿ ಮುಸ್ಲಿಮರು ಸುರಕ್ಷಿತರಲ್ಲ, ಅಸುರಕ್ಷಿತರು ಎಂಬ ಭಾವನೆಯನ್ನು ಹುಟ್ಟುಹಾಕುವುದು, ಭಾರತದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂಬ ಈ ಅಂಶಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವುದು ಮತಾಂಧ ಇಸ್ಲಾಮಿಕ್ ಸಂಘಟನೆಗಳ ಮುಖ್ಯ ಉದ್ದೇಶವಾಗಿರುತ್ತದೆ".

"ಆದ್ದರಿಂದ ಈ ವ್ಯವಸ್ಥಿತ ಮತಾಂಧ ಇಸ್ಲಾಂಮಿಕ್ ಸಂಘಟನೆಗಳ ಹುನ್ನಾರದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿರುವ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು," ಎಂದು ಗೃಹ ಸಚಿವರಿಗೆ ಉಡುಪಿ ಶಾಸಕ ರಘುಪತಿ ಭಟ್ ಒತ್ತಾಯ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+