ಜೋಕೆ...ಮಲ್ಪೆ ಬೀಚ್ ನಲ್ಲಿ ಮತ್ತೆ ಕಾಣಿಸಿಕೊಂಡಿವೆ ಜೆಲ್ಲಿ ಫಿಶ್ ಗಳು, ನೀರಿಗಿಳಿಯುವ ಮುನ್ನ ಯೋಚಿಸಿ
Recommended Video

ಉಡುಪಿ, ಅಕ್ಟೋಬರ್. 23: ಕರಾವಳಿಯಲ್ಲಿ ಜೆಲ್ಲಿ ಫಿಶ್ ಗಳ ದಾಳಿ ಆರಂಭವಾಗಿದ್ದು, ಸಮುದ್ರದಲ್ಲಿ ನೀರಾಟಕ್ಕೆ ಇಳಿಯುವವರ ಮೇಲೆ ಜೆಲ್ಲಿ ಫಿಶ್ ದಾಳಿ ಮಾಡುತ್ತಿವೆ. ಸಮುದ್ರ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ಆರು ಮಂದಿ ಪ್ರವಾಸಿಗರ ಮೇಲೆ ಜೆಲ್ಲಿ ಫಿಶ್ ದಾಳಿ ನಡೆಸಿದ ಘಟನೆ ಇದೀಗ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.
ಮಲ್ಪೆ ಕಡಲ ಕಿನಾರೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಜೆಲ್ಲಿ ಫಿಶ್ ದಾಳಿಗೆ ಒಳಗಾದವರಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಿ ಕಳುಹಿಸಿಕೊಡಲಾಗಿದೆ. ಸಮುದ್ರದಲ್ಲಿ ಜೆಲ್ಲಿ ಫಿಶ್ ಗಳು ಹೇರಳವಾಗಿ ಬಂದಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಕಡಲಿಗೆ ಇಳಿಯದಂತೆ ಎಚ್ಚರ ವಹಿಸಲಾಗುತ್ತಿದೆ.
ಪ್ರತಿವರ್ಷ ಈ ಜೆಲ್ಲಿ ಫಿಶ್ ಹಾಗೂ ತೊರಕೆ ಮೀನುಗಳು, ಮರಿಗಳು ಕಿನಾರೆಗೆ ಬರುತ್ತವೆ. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿವೆ. ಇವುಗಳು ಕಡಲ ಕಿನಾರೆಗೆ ಬಂದಾಗ ಈ ರೀತಿಯ ದಾಳಿಗಳನ್ನು ನಡೆಸುತ್ತವೆ. ಅವುಗಳು ಕಿನಾರೆ ಬಳಿ ಬಂದರೆ ಕೆಲವೊಮ್ಮೆ ಎರಡು ಅಥವಾ ಮೂರು ದಿನಗಳವರೆಗೆ ಇರುತ್ತವೆ.

ಜೆಲ್ಲಿ ಫಿಶ್ ಅಪಾಯಕಾರಿ ಅಲ್ಲ. ಆದರೆ ಅದರ ಸ್ಪರ್ಶದಿಂದ ವಿಪರೀತ ಉರಿ ಹಾಗೂ ಅದು ಸ್ಪರ್ಶಿಸಿದ ಭಾಗ ಊದಿ ಕೊಳ್ಳುತ್ತದೆ. ಜೆಲ್ಲಿ ಫಿಶ್ ಗಳಲ್ಲಿ ಎರಡು ಬಗೆ ಇದೆ. ಒಂದು ಬಿಳಿ ಹಾಗೂ ಇನ್ನೊಂದು ನಸುಗೆಂಪು ಬಣ್ಣದ್ದು. ಕೆಂಪು ಜಲ್ಲಿ ಫಿಶ್ ಸ್ಪರ್ಶಿಸಿದರೆ ಉರಿ ಹೆಚ್ಚು . ಮಲ್ಪೆ ಸೆಂಟ್ ಮೇರಿಸ್ ದ್ವೀಪದ ಒಂದು ಬದಿಯಲ್ಲಿ ಈ ರೀತಿಯ ಮೀನು ಸಾಮಾನ್ಯವಾಗಿ ಕಂಡು ಬರುತ್ತದೆ.
ಈ ಹಿನ್ನೆಲೆಯಲ್ಲಿ ಆ ಪ್ರದೇಶಕ್ಕೆ ಯಾರೂ ಹೋಗದಂತೆ ತಡೆಯಲಾಗುತ್ತದೆ. ಕಳೆದ 2 ದಿನಗಳಿಂದ ಉಡುಪಿಯ ಮಲ್ಪೆ ಕಡಲಕಿನಾರೆಗೆ ಜೆಲ್ಲಿ ಫಿಶ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿವೆ.
ಮಂಗಳೂರಿನ ಪಣಂಬೂರು ಕಡಲ ಕಿನಾರೆ ಬಳಿಯೂ ಕೂಡ ಈ ಜೆಲ್ಲಿ ಫಿಶ್ ಗಳು ಕಂಡು ಬಂದಿವೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬೀಚ್ ನಲ್ಲಿ ಕಳೆದ ಭಾನುವಾರ ಜೆಲ್ಲಿಫಿಶ್ ದಾಳಿ ನಡೆಸಿದ್ದವು. ಇದರಿಂದ ಕೆಲವರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಯೂ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರವಹಿಸಲಾಗಿದೆ .

ಕಳೆದ ಸೆಪ್ಟೆಂಬರ್ ನಲ್ಲಿ ಮಲ್ಪೆ ಬೀಚ್ ನಲ್ಲಿ ಸ್ಟಿಂಗ್ ರೇ ಮೀನುಗಳು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದವು. ಈ ಮೀನುಗಳು ಬಾಲದಲ್ಲಿರುವ ಮುಳ್ಳಿನಿಂದ ನೀರಿಗಿಳಿಯುವ ಪ್ರವಾಸಿಗರನ್ನು ಚುಚ್ಚಿ ಗಾಯಗೊಳಿಸಿದ್ದವು.












Click it and Unblock the Notifications