ವಿರಾಟ್ ಕೊಹ್ಲಿ ಸ್ನಾನಗೃಹದಲ್ಲಿ ಕಣ್ಣೀರಿಟ್ಟಿದ್ದೇಕೆ? ಗೆಳೆಯ ಯುಜ್ವೇಂದ್ರ ಚಹಾಲ್ ಹೇಳಿದ್ದೇನು?: ಭಾರೀ ವೈರಲ್
Virat Kohli: ಆರ್‌ಸಿಬಿ 17 ವರ್ಷಗಳ ಬಳಿಕ 18ನೇ ಸೀಸನ್‌ನಲ್ಲಿ ಮೊಟ್ಟ ಮೊದಲ ಐಪಿಎಲ್ ಟ್ರೋಫಿ ಗೆದ್ದುಕೊಂಡಿತು. ಈ ವೇಳೆ ವಿರಾಟ್ ಕೊಹ್ಲಿ ಮೈದಾನದಲ್ಲೇ ಕಣ್ಣೀರಿಟ್ಟ ಘಟನೆ ನಡೆಯಿತು. ಇದಕ್ಕೂ ಮುನ್ನ ಅವರು ಸ್ಥಾನ ಮಾಡುವಾಗ ಕಣ್ಣೀರು ಹಾಕಿದ ನೋವಿನ ಸಂಗತಿಯೊಂದನ್ನು ಪಾಡ್ಕಾಸ್ಟ್ವೊಂದರಲ್ಲಿ ಯುಜ್ವೇಂದ್ರ ಚಾಹಲ್ ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ ಇದು ನಡೆದಿದ್ದು ಯಾವಾಗ ಹಾಗೂ ಇದಕ್ಕೆ ಕಾರಣ ಏನೆಂದು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಯಜ್ವೇಂದ್ರ ಚಹಾಲ್ ಅವರು ವಿರಾಟ್ ಕೊಹ್ಲಿ ಅವರ ಜೊತೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ತುಂಬಾ ವರ್ಷಗಳ ಕಾಲ ಆಡಿದ್ದಾರೆ. ಆದರೆ, ಇದೀಗ ಅವರನ್ನು ಆರ್‌ಸಿಬಿ ಕೈಬಿಟ್ಟಿದ್ದು, ಪಂಜಾಬ್ ಪರ ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ತಂಡ ಚೇಂಜ್ ಆದರೂ ಕೂಡ ಇವರ ನಡುವಿನ ಬಾಂಧವ್ಯ ಮಾತ್ರ ಹಾಗೆಯೇ ಇದೆ. ಆರ್‌ಸಿಬಿ ಟ್ರೋಫಿ ಗೆದ್ದ ಬಳಿಕ ಕೊಹ್ಲಿ ಬಗ್ಗೆ ಪಾಡ್‌ಕ್ಯಾಸ್ಟ್‌ವೊಂದರಲ್ಲಿ ತಮ್ಮ ಮನದಾಳದ ಮಾತೊಂದನ್ನು ಯುಜ್ವೇಂದ್ರ ಚಾಹಲ್ ತೆರೆದಿಟ್ಟಿದ್ದು, ಇದು ಸಖತ್ ವೈರಲ್ ಆಗುತ್ತಿದೆ.

ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಿದ್ದು, ಬಹು ವರ್ಷಗಳ ಟ್ರೋಫಿ ಗೆಲುವಿನ ಕನಸು ಕೊನೆಗೂ ನನಸಾಯಿತು. ಈ ಹಿನ್ನೆಲೆ ವಿರಾಟ್ ಕೊಹ್ಲಿ ಕಣ್ಣಲ್ಲಿ ಕಣ್ಣೀರು ಹರಿದುಬಂದಿದ್ದು, ಈ ದೃಶ್ಯ ಭಾರೀ ವೈರಲ್ ಆಗಿತ್ತು. ಇದೇ ವಿಚಾರ ಇಟ್ಟುಕೊಂಡು ಇದಕ್ಕೂ ಮುಂಚೆ ವಿರಾಟ್ ಕೊಹ್ಲಿ ಅವರು ಕಣ್ಣೀರಿಟ್ಟಿದ್ದನ್ನು ನೀವು ನೋಡಿದ್ದೀರಾ ಎಂದು ಚಹಲ್‌ಗೆ ಕೇಳಿದಾಗ ಅವರು ಮನದಾಳದ ಮಾತನ್ನು ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ..
ವಿಶ್ವಾದ್ಯಂತ ಕೊಹ್ಲಿಗೆ ಅಭಿಮಾನಿಗಳಿದ್ದಾರೆ. ಆದರೆ, ಐಪಿಎಲ್ ವಿಚಾರಕ್ಕೆ ಬಂದರೆ, ಕೆಲವರು ಇವರನ್ನು ತಪ್ಪಾಗಿ ಅರ್ಥೈಸಿಕೊಂಡು ಕೆಟ್ಟದಾಗಿ ಮಾತನಾಡಿದವರಿದ್ದಾರೆ. ಈಗಲೂ ಕೆಲವೇ ಕೆಲ ಮಂದಿ ಮಾತನಾಡುತ್ತಲಿರುತ್ತಾರೆ. ಆದರೆ, ವಿರಾಟ್ ಕೊಹ್ಲಿ ಫೀಲ್ಡ್‌ನಲ್ಲಿ ಮಾತ್ರ ತುಂಬಾ ಸೀರಿಯಸ್ ಆಗಿ ಕಾಣುತ್ತಾರೆ. ಆದರೆ ಅವರ ಮನಸು ಮಾತ್ರ ಮಗು ಥರಾ ಎಂದು ಚಹಲ್ ಬಣ್ಣಿಸುವ ಮೂಲಕ ಅವರು ಐಪಿಎಲ್‌ಗೂ ಮುನ್ನ ಕಣ್ಣೀರಿಟ್ಟ ಒಂದು ಘಟನೆಯನ್ನು ನೆನಪಿಸಿದ್ದಾರೆ.
ಮೈದಾನದಲ್ಲಿ ವಿರಾಟ್ ಕೊಹ್ಲಿ ಎಷ್ಟು ಆಕ್ರಮಣಕಾರಿಯಾಗಿ ಕಾಣಿಸಿಕೊಳ್ಳುತ್ತಾರೆಯೋ ಅವರು ಅಷ್ಟೇ ಭಾವನಾತ್ಮಕ ಜೀವಿ. ಇದನ್ನು ನಾವು ತುಂಬಾ ಬಾರಿ ಕಂಡಿದ್ದೇವೆ. ಟೀಂ ಇಂಡಿಯಾ ಈ ಹಿಂದೆ ಟಿ-20 ವಿಶ್ವಕಪ್ ಗೆದ್ದ ವೇಳೆ ಹಾಗೂ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದಾಗ ಮೈದಾನದಲ್ಲೇ ಭಾವುಕರಾಗಿ ಕಣ್ಣೀರಿಟ್ಟಿದ್ದರು. ಇದೀಗ ಅಂತಹದ್ದೇ ಘಟನೆಯೊಂದನ್ನು ಯುಜ್ವೇಂದ್ರ ಚಹಲ್ ತೆರೆದಿಟ್ಟಿದ್ದಾರೆ.
ಪಾಡ್‌ಕಾಸ್ಟ್‌ನಲ್ಲಿ 2025ರ ಐಪಿಎಲ್ ಟ್ರೋಫಿ ಗೆದ್ದ ಬಳಿಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಕಣ್ಣೀರು ಹಾಕಿದ್ದರು. ಆದರೆ, ಇದಕ್ಕೂ ಮೊದಲು ನೀವು ಅವರು ಅಳುವುದನ್ನು ನೋಡಿದ್ದೀರಾ ಎಂದು ಚಾಹಲ್‌ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಚಹಲ್, 2019ರ ವಿಶ್ವಕಪ್‌ನಲ್ಲಿ ಅವರು ಬಾತ್‌ರೂಂಮ್‌ನಲ್ಲಿ ಅಳುತ್ತಿರುವುದನ್ನು ನಾನು ಕಂಡೆ. ಬಳಿಕ ಕೊನೆಯದಾಗಿ ಬ್ಯಾಟಿಂಗ್ ಮಾಡಲು ಬಂದಾಗ, ನಾನು ಅವರ ಪಕ್ಕದಲ್ಲಿ ಹೋಗಿದ್ದೆ. ಆ ವೇಳೆ ಅವರ ಕಣ್ಣುಗಳಲ್ಲಿ ನೀರು ಬಂದಿತ್ತು ಎಂದು ಹೇಳಿದರು.
2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ ಕಿವೀಸ್ ವಿರುದ್ಧ ಸೋಲು ಕಂಡಿತ್ತು. ಆ ಸೋಲಿನ ಬಳಿಕ ಟೀಮ್ ಇಂಡಿಯಾದ ಅಂದಿನ ನಾಯಕ ವಿರಾಟ್ ಕೊಹ್ಲಿ ಆಗಿದ್ದು, ಅವರು ಭಾವುಕರಾಗಿ ಸ್ನಾನಗೃಹದಲ್ಲಿ ಕಣ್ಣೀರು ಹಾಕಿದ್ದರು ಎಂದು ಯುಜ್ವೇಂದ್ರ ಚಹಲ್ ಬಹಿರಂಗಪಡಿಸಿದರು. ಅಲ್ಲದೆ, ಈ ವೇಳೆ ತಂಡದ ಎಲ್ಲಾ ಆಟಗಾರರು ಭಾವುಕರಾಗಿದ್ದರು. ಜೊತೆಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ದೊಡ್ಡ ಆಘಾತ ಉಂಟು ಮಾಡಿತು ಎಂದು ಹೇಳಿದರು.
ಅಲ್ಲದೆ, ಅಂದಿನ ಪಂದ್ಯ ಎಂಎಸ್ ಧೋನಿ ಅವರ ಕೊನೆಯ ವಿಶ್ವಕಪ್ ಪಂದ್ಯ ಆಗಿತ್ತು. ಆ ಪಂದ್ಯದಲ್ಲಿ ನಾನು 10 ಓವರ್‌ಗಳಲ್ಲಿ 63 ರನ್‌ಗೆ 1 ವಿಕೆಟ್ ಪಡೆದೆ. ಆ ವೇಳೆ ನಾನು ಉತ್ತಮವಾಗಿ ಬೌಲಿಂಗ್ ಮಾಡಬೇಕಿತ್ತು ಎಂದು ನನಗೆ ಅನಿಸಿತು ಎಂದು ಪಶ್ಚತಾಪ ಹೊರಹಾಕಿದರು.












Click it and Unblock the Notifications