Virat Kohli: ಚೆನ್ನೈನಲ್ಲಿ ಭಾರತ ತಂಡವನ್ನು ಸೇರಿಕೊಂಡ ವಿರಾಟ್ ಕೊಹ್ಲಿ: ಸ್ನೇಹಿತರಿಗೆ ವಿಶೇಷ ಮನವಿ
ಭಾರತ vs ನೆದರ್ಲ್ಯಾಂಡ್ಸ್ ಏಕದಿನ ವಿಶ್ವಕಪ್ ಅಭ್ಯಾಸ ಪಂದ್ಯವನ್ನು ತಪ್ಪಿಸಿಕೊಂಡು ಗುವಾಹಟಿಯಿಂದ ತುರ್ತಾಗಿ ಮುಂಬೈಗೆ ತೆರಳಿದ್ದ ವಿರಾಟ್ ಕೊಹ್ಲಿ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಅಕ್ಟೋಬರ್ 8ರಂದು ಭಾರತ ಆಸ್ಟ್ರೇಲಿಯಾ ವಿರುದ್ಧ ಈ ವಿಶ್ವಕಪ್‌ನ ತಮ್ಮ ಮೊದಲ ಪಂದ್ಯವನ್ನು ಚೆನ್ನೈನಲ್ಲಿ ಆಡಲಿದೆ.
ತಿರುವನಂತಪುರದಲ್ಲಿ ನಡೆಯಬೇಕಿದ್ದ ನೆದರ್ಲ್ಯಾಂಡ್ಸ್ ವಿರುದ್ಧದ ಅಭ್ಯಾಸ ಪಂದ್ಯ ರದ್ದಾಗಿದ್ದರಿಂದ ಕೊಹ್ಲಿ ಅನುಪಸ್ಥಿತಿ ಅಷ್ಟಾಗಿ ಕಾಡಲಿಲ್ಲ. ಮುಂಬೈನಿಂದ ತಿರುವನಂತಪುರಕ್ಕೆ ಹಾರಿದ ಕೊಹ್ಲಿ ನಂತರ ತಂಡದೊಂದಿಗೆ ಚೆನ್ನೈಗೆ ಹಾರುವ ಮೊದಲು ತಮ್ಮ ಫೋಟೋಶೂಟ್ ಮುಗಿಸಿದರು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಭ್ಯಾಸ ಪಂದ್ಯ ವಾಶ್ ಔಟ್ ಆದ ನಂತರ ವಿರಾಟ್ ಕೊಹ್ಲಿ ಗುವಾಹಟಿಯಿಂದ ಮುಂಬೈಗೆ ಹಾರಿದರು. ವೈಯಕ್ತಿಕ ತುರ್ತು ಪರಿಸ್ಥಿತಿಗೆ ಹಾಜರಾಗಲು ಬಿಸಿಸಿಐ ಅನುಮತಿ ಕೇಳಿದ್ದ ಅವರು, ಕುಟುಂಬದ ಜೊತೆ ಸಮಯ ಕಳೆದರು.
ಚೆನ್ನೈಗೆ ಬಂದಿಳಿದ ಭಾರತ ತಂಡ
ಮಂಗಳವಾರ ರಾತ್ರಿಯಷ್ಟೇ ತಿರುವನಂತಪುರಕ್ಕೆ ಆಗಮಿಸಿದ ವಿರಾಟ್ ಕೊಹ್ಲಿ, ಐಸಿಸಿಯ ಫೋಟೋಶೂಟ್‌ನಲ್ಲಿ ಭಾಗವಹಿಸಿದ ನಂತರ ಅವರು ಬುಧವಾರ ತಂಡದೊಂದಿಗೆ ಚೆನ್ನೈಗೆ ಪ್ರಯಾಣಿಸಿದ್ದಾರೆ.
ವೈಯಕ್ತಿಕ ತುರ್ತುಸ್ಥಿತಿ, ಗುವಾಹಟಿ ಮತ್ತು ತಿರುವನಂತಪುರಂನಲ್ಲಿ ಯಾವುದೇ ನೆಟ್ ಸೆಷನ್‌ಗಳಿಲ್ಲದ ಕಾರಣ, ವಿರಾಟ್ ಕೊಹ್ಲಿ ಯಾವುದೇ ಅಭ್ಯಾಸವಿಲ್ಲದೆ ಉಳಿದಿದ್ದಾರೆ. ಪ್ರಯಾಣದ ಕಾರಣ ಬುಧವಾರ ವಿರಾಮ ಪಡೆಯಲಿದ್ದು. ಗುರುವಾರ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಅಭ್ಯಾಸವನ್ನು ನಡೆಸಲಿದ್ದಾರೆ.
ಫಾರ್ಮ್‌ಗೆ ಮರಳಿರುವ ಕೊಹ್ಲಿ
ವಿಶ್ವಕಪ್‌ಗೆ ಮುನ್ನ ಭಾರತ ತಂಡ ಯಾವುದೇ ಅಭ್ಯಾಸವನ್ನು ಆಡಿಲ್ಲ. ವಿಶ್ವಕಪ್ ಆರಂಭಕ್ಕೆ ಮುನ್ನ ತಂಡದ ಎಲ್ಲಾ ಆಟಗಾರರು ಫಾರ್ಮ್‌ಗೆ ಮರಳಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶುಭಮನ್ ಗಿಲ್ ಶತಕ ಗಳಿಸಿದ್ದರೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಶತಕ ಬಾರಿಸಿದ್ದರು. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಅರ್ಧಶತಕ ಗಳಿಸಿರುವುದು ತಂಡದ ಬ್ಯಾಟಿಂಗ್ ಪಡೆಯ ಶಕ್ತಿ ಹೆಚ್ಚಿಸಿದೆ.
ಸ್ನೇಹಿತರಿಗೆ ವಿಶೇಷ ಮನವಿ ಮಾಡಿದ ವಿರಾಟ್
ಈ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರ ಇನ್‌ಸ್ಟಾಗ್ರಾಂ ಸ್ಟೋರಿ ವೈರಲ್ ಆಗಿದೆ. ಹಲವು ಸ್ನೇಹಿತರು ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಟಿಕೆಟ್ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ ಅವರಿಗೆ ಮನೆಯಿಂದಲೇ ಪಂದ್ಯವನ್ನು ನೋಡುತ್ತಾ ಎಂಜಾಯ್ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಏಕದಿನ ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.












Click it and Unblock the Notifications