T20 World Cup: ರೋಹಿತ್ ಶರ್ಮಾ ತಲೆಯಲ್ಲಿ ಏನ್‌ ಓಡ್ತಾ ಇದೆ? ಏಕೆ ಇಂತಹ ನಿರ್ಧಾರ

ಟೀಮ್ ಇಂಡಿಯಾ ಆಟಗಾರರು ಈಗ ಅಮೆರಿಕದಲ್ಲಿ ಟಿ20 ವಿಶ್ವಕಪ್‌ ತಯಾರಿ ನಡೆಸಿದ್ದಾರೆ. ಟೀಮ್ ಇಂಡಿಯಾ ಶತಾಯ ಗತಾಯ ಈ ಬಾರಿ ಟೂರ್ನಿಯನ್ನು ಗೆಲ್ಲಲೇ ಬೇಕು ಎಂಬ ಆಸೆಯನ್ನು ಹೊಂದಿದೆ. 2011 ರಿಂದ ಅನುಭವಿಸುತ್ತಿರುವ ಐಸಿಸಿ ಪ್ರಶಸ್ತಿ ಬರವನ್ನು ನೀಗಿಸುವ ನಿಟ್ಟಿನಲ್ಲಿ ರೋಹಿತ್ ಶರ್ಮಾ ಪಡೆ ಪ್ಲ್ಯಾನ್ ಮಾಡಿಕೊಂಡಿದೆ. ಅದರಂತೆ ಟೀಮ್ ಇಂಡಿಯಾ ಅಭ್ಯಾಸ ಪಂದ್ಯದಲ್ಲಿ ಸಖತ್ ಆಗಿ ಆಡಿದೆ.

ಟಿ20 ವಿಶ್ವಕಪ್‌ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಬಾಂಗ್ಲಾದೇಶದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 60 ರನ್‌ ಗಳಿಂದ ಜಯ ಸಾಧಿಸಿತು. ಈ ಅಭ್ಯಾಸ ಪಂದ್ಯದಲ್ಲಿ ರೋಹಿತ್‌ ಶರ್ಮಾ ಆ ಎರಡು ನಿರ್ದಾರ ಹಲವು ಅಭಿಮಾನಿಗಳ ಮನದಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿವೆ.

T20 World Cup What s Going Through Rohit Sharma s Mind The Reason Behind His Decision

ಸಂಜು ಸ್ಯಾಮ್ಸನ್‌ ಇನ್ನಿಂಗ್ಸ್ ಆರಂಭಿಸಿದ್ದೇಕೆ?

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದರು. ಈ ವೇಳೆ ರೋಹಿತ್ ಜೊತೆ ಯಶಸ್ವಿ ಜೈಸ್ವಾಲ್‌ ಇನ್ನಿಂಗ್ಸ್ ಆರಂಭಿಸುತ್ತಾರೆ ಎಂದು ಎಲ್ಲರೂ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಅದೆಲ್ಲಾ ಉಲ್ಟಾ ಆಯಿತು. ರೋಹಿತ್, ಸಂಜು ಸ್ಯಾಮ್ಸನ್‌ ಇನ್ನಿಂಗ್ಸ್ ಆರಂಭಿಸಿದರು.

ಇದನ್ನು ನೋಡಿದ ಅಭಿಮಾನಿಗಳ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಎದ್ದಿರಬಹುದು. ಇದಕ್ಕೆ ಮೋಸ್ಟಲಿ ರೋಹಿತ್‌ ಶರ್ಮಾ, ಸಂಜು ಸ್ಯಾಮ್ಸನ್‌ ತಂಡದಲ್ಲಿ ಆಯ್ಕೆ ಆದರೆ ಯಾವ ಸ್ಥಾನದಲ್ಲಿ ಆಡಬಲ್ಲರು. ಮತ್ತು, ರಿಷಭ್‌ ಪಂತ್ ಹಾಗೂ ಸಂಜು ನಡುವೆ ಯಾರು ಬೆಸ್ಟ್ ಆಯ್ಕೆ ಎಂದು ತಿಳಿಯುವುದ ಆಗಿತ್ತು ಕಾಣುತ್ತದೆ. ಸಂಜು ಸ್ಯಾಮ್ಸನ್‌ ಐಪಿಎಲ್‌ನಲ್ಲಿ ಹೆಚ್ಚಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರು. ಈ ಕ್ರಮಾಂಕದಲ್ಲಿ ಟೀಮ್ ಇಂಡಿಯಾ ಸ್ಲಾಟ್‌ ಖಾಲಿ ಇಲ್ಲ. ಹೀಗಾಗಿ ಈ ಪ್ರಯೋಗಕ್ಕೆ ಕೈ ಹಾಕಿದರಾ ಶರ್ಮಾ ಎಂಬ ಅನುಮಾನಗಳು ಕಾಡಲಾರಂಬಿಸಿವೆ.

ಸ್ಪಿನ್ ಬೌಲರ್‌ ಚಹಾಲ್‌ಗೆ ಏಕೆ ನೀಡಲಿಲ್ಲ ಬೌಲಿಂಗ್?

ಬಾಂಗ್ಲಾದೇಶದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಒಟ್ಟು 8 ಭಾರತೀಯ ಬೌಲರ್‌ಗಳು ಬೌಲಿಂಗ್ ಮಾಡಿದರು, ಇದರಲ್ಲಿ ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಸೇರಿದ್ದಾರೆ. ಆದರೆ ಬೌಲರ್‌ಗಳ ಪಟ್ಟಿಯಲ್ಲಿ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಹೆಸರು ನಾಪತ್ತೆಯಾಗಿತ್ತು.

T20 World Cup What s Going Through Rohit Sharma s Mind The Reason Behind His Decision

ಯುಜುವೇಂದ್ರ ಚಹಾಲ್‌ ಅವರನ್ನು ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಎಕ್ಸ್‌ ಫ್ಯಾಕ್ಟರ್‌ ರೂಪದಲ್ಲಿ ನೋಡುತ್ತಿರುವಂತೆ ಕಾಣುತ್ತಿದೆ. ಹೀಗಾಗಿ ಇವರಿಗೆ ಬೌಲಿಂಗ್ ಮಾಡಲು ಅವಕಾಶ ನೀಡಲಿಲ್ಲ. ಅಲ್ಲದೆ ಟೀಮ್ ಇಂಡಿಯಾದಲ್ಲಿ ಎಷ್ಟು ಬೌಲರ್‌ಗಳನ್ನು ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರವು ರೋಹಿತ್ ತಲೆಯಲ್ಲಿ ಓಡ್ತಾ ಇದ್ದಂತೆ ಕಾಣುತ್ತದೆ.

ಪಂದ್ಯದ ಬಳಿಕ ಮಾತನಾಡಿದ ರೋಹಿತ್‌, 'ಪಂದ್ಯ ನಿರೀಕ್ಷೆಯಂತೆ ನಡೆದಿದೆ. ಈ ಪಿಚ್‌ಗೆ ಹೊಂದಿಕೊಳ್ಳುವುದು ಮುಖ್ಯ. ರಿಷಭ್‌ ಪಂತ್‌ ಅವಕಾಶಕ್ಕಾಗಿ ಕಾಯುತ್ತಿದ್ದರು. ಹೀಗಾಗಿ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲಾಗಿದೆ ಎಂದರು.

ಟೀಮ್ ಇಂಡಿಯಾ ಟಿ20 ವಿಶ್ವಕಪ್‌ ಅಭಿಯಾನವನ್ನು ಇದೇ ಐದರಿಂದ ಐರ್ಲೆಂಡ್ ವಿರುದ್ಧ ಆರಂಭಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+