Shubman Gill: ನೀನೊಬ್ಬ ಸ್ವಾರ್ಥಿ! ಶುಭಮನ್ ಗಿಲ್ ವಿರುದ್ಧ ಅಭಿಮಾನಿಗಳ ಆಕ್ರೋಶ
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 3-1 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆ ಪಡೆಯುವ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದಿದೆ.
ಶನಿವಾರ ನಡೆದ ಪಂದ್ಯದಲ್ಲಿ ಭಾರತ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. 153 ರನ್‌ಗಳ ಗುರಿಯನ್ನು ಯಾವುದೇ ವಿಕೆಟ್ ಕಳೆದುಕೊಳ್ಳದೆ ಬೆನ್ನತ್ತಿತು. ಯಶಸ್ವಿ ಜೈಸ್ವಾಲ್ ಅಜೇಯ 93 ರನ್ ಗಳಿಸಿದರೆ, ಶುಭಮನ್ ಗಿಲ್ ಅಜೇಯ 58 ರನ್ ಗಳಿಸಿದರು.

ಭಾರತ ಪಂದ್ಯ ಗೆದ್ದರೂ ನಾಯಕ ಶುಭಮನ್ ಗಿಲ್ ವಿರುದ್ಧ ಅಭಿಮಾನಿಗಳು ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಗಿಲ್‌ರನ್ನು ಸ್ವಾರ್ಥಿ ಎಂದು ನಿಂದಿಸಲಾಗುತ್ತಿದೆ. ಯಶಸ್ವಿ ಜೈಸ್ವಾಲ್‌ಗೆ ಶತಕ ಗಳಿಸುವ ಅವಕಾಶವನ್ನು ಗಿಲ್ ಕಸಿದುಕೊಂಡರು ಎನ್ನುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಜೈಸ್ವಾಲ್‌ಗಿತ್ತು ಶತಕ ಗಳಿಸುವ ಅವಕಾಶ
ಭಾರತದ ಗೆಲುವಿಗೆ ಕೇವಲ 23 ರನ್‌ಗಳ ಅಗತ್ಯವಿತ್ತು ಮತ್ತು ಜೈಸ್ವಾಲ್ ಬ್ಯಾಟಿಂಗ್ 83 ರನ್ ಗಳಿಸಿದ್ದರು. ಅಭಿಮಾನಿಗಳು ಜೈಸ್ವಾಲ್ ಶತಕ ಬಾರಿಸಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದರೆ ಶುಭಮನ್ ಗಿಲ್ ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ ಭಾರತ ಗೆಲುವಿಗೆ ಹತ್ತಿರವಾಗಿತ್ತು. ಜೈಸ್ವಾಲ್ ಶತಕ ಗಳಿಸುವುದು ಸಾಧ್ಯವಾಗಲಿಲ್ಲ.
ಹಾರ್ದಿಕ್ ಪಾಂಡ್ಯ ಜೊತೆ ಹೋಲಿಕೆ
ಈ ಘಟನೆಯನ್ನು 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹಾರ್ದಿಕ್ ಪಾಂಡ್ಯ ಅವರ ಇದೇ ರೀತಿಯ ಕೃತ್ಯಕ್ಕೆ ಹೋಲಿಕೆ ಮಾಡಲಾಗುತ್ತಿದೆ. ಆ ಪಂದ್ಯದಲ್ಲಿ ಪಾಂಡ್ಯ ತಿಲಕ್ ವರ್ಮಾ ಅವರನ್ನು ಅರ್ಧಶತಕ ಗಳಿಸಲು ಅವಕಾಶ ಕೊಡಲಿಲ್ಲ. ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಗೆಲ್ಲಿಸಿದರು.
ಅಭಿಮಾನಿಗಳು ಗಿಲ್‌ರನ್ನು ಸ್ವಾರ್ಥಿ ಎಂದು ಕರೆದಿದ್ದಾರೆ. ತನ್ನ ಸಹಪಾಠಿ ಶತಕ ಗಳಿಸುವದನ್ನು ಗಿಲ್ ತಪ್ಪಿಸಿದರು, ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಜೈಸ್ವಾಲ್ ಅವರ ಶತಕವನ್ನು ತಪ್ಪಿಸಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆರಂಭಿಕ ಸ್ಥಾನ ಫೈನಲ್
ಜೈಸ್ವಾಲ್ ಅಮೋಘ ಪ್ರದರ್ಶನ ನೀಡುವ ಮೂಲಕ ಆರಂಭಿಕರಾಗಿ ತಮ್ಮ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ ಬಳಿಕ, ಅವರ ಸ್ಥಾನ ತುಂಬುವ ಆಟಗಾರನನ್ನು ಅಂತಿಮಗೊಳಿಸಲು ಆಯ್ಕೆದಾರರು ನೋಡುತ್ತಿದ್ದಾರೆ.
ಈಗಾಗಲೇ ಸರಣಿ ಗೆದ್ದಿರುವ ಭಾರತ ಸರಣಿಯ ಕೊನೆಯ ಪಂದ್ಯ ಭಾನುವಾರ ನಡೆಯಲಿದ್ದು, ಭಾರತ 4-1ರಲ್ಲಿ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.












Click it and Unblock the Notifications