Gautam Gambhir: ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆಗಲು ಶಾರೂಖ್ ಖಾನ್ ಅಡ್ಡಿ? ಖಾಲಿ ಚೆಕ್‌ ಆಫರ್

ರಾಹುಲ್ ದ್ರಾವಿಡ್ ಬಳಿಕ ಭಾರತ ತಂಡದ ಮುಂದಿನ ಕೋಚ್‌ ನೇಮಕಕ್ಕೆ ಬಿಸಿಸಿಐ ಹುಡುಕಾಟ ಆರಂಭಿಸಿದೆ. ಭಾರತ ಮಾತ್ರವಲ್ಲದೆ ಹಲವು ವಿದೇಶಿ ಮಾಜಿ ಆಟಗಾರರು ಕೂಡ ಹೆಡ್‌ ಕೋಚ್ ಆಗಲು ಆಸಕ್ತಿ ತೋರಿಸಿದ್ದಾರೆ.

ಹಲವು ಆಟಗಾರರು ಆಸಕ್ತಿ ಹೊಂದಿದ್ದರು, ಬಿಸಿಸಿಐ ಮಾತ್ರ ಗೌತಮ್ ಗಂಭೀರ್ ಅವರನ್ನು ಮುಂದಿನ ಕೋಚ್ ಆಗಿ ನೇಮಿಸಲು ಆಸಕ್ತಿ ಹೊಂದಿದೆ. ಕೆಕೆಆರ್ ತಂಡದ ಮೆಂಟರ್ ಆಗಿ ಮೊದಲ ಆವೃತ್ತಿಯಲ್ಲೇ ಫೈನಲ್‌ಗೆ ಮುನ್ನಡೆಸಿರುವ ಗಂಭೀರ್, ಭಾರತ ತಂಡದ ಕೋಚ್ ಆಗಲು ಸೂಕ್ತ ಎನ್ನಲಾಗಿದೆ.

Shah Rukh Khan s Blank Cheque to Gautam Gambhir for KKR Tenure

ಗೌತಮ್ ಗಂಭೀರ್ ಕೂಡ ಭಾರತ ತಂಡದ ಕೋಚ್ ಆಗಲು ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ. ಆದರೆ ಗೌತಮ್ ಗಂಭೀರ್ ಭಾರತ ತಂಡದ ಕೋಚ್ ಆಗಲು ಒಬ್ಬ ವ್ಯಕ್ತಿ ಅಡ್ಡವಾಗಿ ನಿಂತಿದ್ದಾರೆ. ಹೌದು, ಶಾರುಖ್ ಖಾನ್ ಅವರು ಈಗ ಗೌತಮ್ ಗಂಭೀರ್ ಅವರು ಬಿಸಿಸಿಐ ಕೋಚ್ ಆಗಲು ಅಡ್ಡಿಯಾಗಿದ್ದಾರೆ.

ಗೌತಮ್ ಗಂಭೀರ್ ಅವರನ್ನು ಬಿಟ್ಟುಕೊಡಲು ಶಾರುಖ್ ಖಾನ್ ಅವರಿಗೆ ಸುತರಾಂ ಇಷ್ಟವಿಲ್ಲ. ಕೆಕೆಆರ್ ತಂಡದ ಮೆಂಟರ್ ಆಗಿ ಮುಂದುವರೆಯಲು ಗೌತಮ್ ಗಂಭೀರ್ ಅವರಿಗೆ ಭರ್ಜರಿ ಆಫರ್ ಕೊಟ್ಟಿದ್ದಾರೆ.

ಖಾಲಿ ಚೆಕ್ ನೀಡಿರುವ ಶಾರುಖ್ ಖಾನ್

ಐಪಿಎಲ್ 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿರುವ ಗಂಭೀರ್ ಅವರಿಗೆ ಫ್ರಾಂಚೈಸಿಯ ಸಹ-ಮಾಲೀಕ ಶಾರುಖ್ ಖಾನ್ ಅವರು ಮುಂದಿನ 10 ವರ್ಷಗಳವರೆಗೆ ಫ್ರಾಂಚೈಸಿಯಲ್ಲಿ ಉಳಿಯಲು 'ಖಾಲಿ ಚೆಕ್' ನೀಡಿದ್ದರು ಎಂದು ವರದಿಯೊಂದು ಹೇಳಿದೆ.

ದೈನಿಕ್ ಜಾಗರಣ್ ವರದಿಯ ಪ್ರಕಾರ ಗಂಭೀರ್ ಕೂಡ ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಆಸಕ್ತಿ ತೋರಿದ್ದಾರೆ. ತಮ್ಮನ್ನು ಆಯ್ಕೆ ಮಾಡುವುದನ್ನು ಖಚಿತಪಡಿಸಿದರೆ ಮಾತ್ರ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ. ಇಲ್ಲವಾದಲ್ಲಿ ಅರ್ಜಿ ಸಲ್ಲಿಸಲ್ಲ ಎಂದು ಹೇಳಿದ್ದಾರೆ.

ಭಾರತ ತಂಡದ ಕೋಚ್ ಆಗಿ ಗಂಭೀರ್ ಅವರನ್ನು ನೇಮಿಸಲು ಬಿಸಿಸಿಐ ತೀವ್ರ ಆಸಕ್ತಿ ತೋರಿಸಿದ ಬೆನ್ನಲ್ಲೇ, ಕೆಕೆಆರ್ ಸಹ-ಮಾಲೀಕ ಶಾರುಖ್ ಖಾನ್ ಮಾಜಿ ಭಾರತ ಆರಂಭಿಕ ಆಟಗಾರನನ್ನು ಫ್ರಾಂಚೈಸಿಯಲ್ಲಿ ದೀರ್ಘಕಾಲ ಉಳಿಸಿಕೊಳ್ಳುವ ಉದ್ದೇಶವನ್ನು ವರದಿ ಬಹಿರಂಗಪಡಿಸಿದೆ.

ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಬಳಿಕ ಕೋಚ್ ಆಗಲು ಬಿಸಿಸಿಐ ರಿಕಿ ಪಾಂಟಿಂಗ್, ಜಸ್ಟಿನ್ ಲ್ಯಾಂಗರ್ ಮತ್ತು ಸ್ಟೀಫನ್ ಫ್ಲೆಮಿಂಗ್ ಅರವನ್ನು ಸಂಪರ್ಕಿಸಿದ್ದರೂ, ನಿರಾಕರಿಸಿದ್ದಾರೆ ಎನ್ನಲಾಗಿದೆ. ಆದರೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಯಾವುದೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ಸಂಪರ್ಕಿಸಿಲ್ಲ ಎಂದಿದ್ದಾರೆ.

ಗಂಭೀರ್ ಅವರು ಭಾರತದ ಮುಂದಿನ ಮುಖ್ಯ ಕೋಚ್ ಆಗಲು ಆಸಕ್ತಿ ಹೊಂದಿರಬಹುದು ಆದರೆ ಕೆಕೆಆರ್ ತಂಡವನ್ನು ತೊರೆಯುವ ಬಗ್ಗೆ ಅವರು ಶಾರುಖ್ ಖಾನ್‌ ಅವರೊಂದಿಗೆ ಏನು ಮಾತುಕತೆ ನಡೆಸಿದ್ದಾರೆ ಎಂಬುದು ದೊಡ್ಡ ನಿರ್ಧಾರಕ ಅಂಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+