ಹೃದಯ ಬಾಯಿಗೆ ಬರ್ಸಿ ಗೆಲ್ಲೋದು ಅಂದ್ರೆ ಇದೇನಾ? ಆರ್‌ಸಿಬಿ ಆಟಗಾರರ ಬಗ್ಗೆ ಅಭಿಮಾನಿಗಳು ಏನ್ ಹೇಳ್ತಿದ್ದಾರೆ?

ಆರ್‌ಸಿಬಿ ಬೆಂಗಳೂರು ತಂಡವು ನಿನ್ನೆ ಗುಜರಾತ್ ವಿರುದ್ಧದ ಮ್ಯಾಚ್ ಗೆದ್ದಿದೆ. ಹೀಗಿದ್ದರೂ ಆರ್‌ಸಿಬಿ ಅಭಿಮಾನಿಗಳು ಕೋಪ ಮಾಡಿಕೊಂಡಿದ್ದಾರೆ. ಒಂದು ಕಡೆ ಆರ್‌ಸಿಬಿ ಗೆದ್ದಿದೆ ಅಂತಾ ಅಭಿಮಾನಿಗಳು ಖುಷಿಯಾಗಿದ್ದರೆ, ಇನ್ನೊಂದು ಕಡೆ ಸುಲಭವಾಗಿ ಗೆಲ್ಲಬಹುದಿದ್ದ ಪಂದ್ಯನ ಹಿಂಗೆಲ್ಲಾ ಕಷ್ಟಪಟ್ಟು ಗೆದ್ದಿದ್ದಕ್ಕೆ ಆಕ್ರೋಶ ಹೊರ ಹಾಕುತ್ತಿದ್ದಾರೆ ಫ್ಯಾನ್ಸ್. ಹಾಗಾದ್ರೆ ನಮ್ಮ ಆರ್‌ಸಿಬಿ ಅಭಿಮಾನಿಗಳು ಹೇಳುತ್ತಿರುವುದು ಏನು? ಈ ಸುದ್ದಿ ಮಜಾ ಇದೆ ಬನ್ನಿ ಓದೋಣ.

ಅಂದಹಾಗೆ ನಿನ್ನೆ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಮ್ಯಾಚ್ ಭರ್ಜರಿ ಕುತೂಹಲವನ್ನ ಕೆರಳಿಸಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಗುಜರಾತ್ ಟೈಟಾನ್ಸ್ ತಂಡವು ಆರ್‌ಸಿಬಿ ಬೌಲಿಂಗ್ ವೇಗಕ್ಕೆ ಚೆಲ್ಲಾಪಿಲ್ಲಿ ಆಗೋಯ್ತು. ಗುಜರಾತ್ ತಂಡದ ಬ್ಯಾಟ್ಸ್‌ಮನ್‌ಗಳ ಪರದಾಟದ ನಡುವೆ, ಯಾರೊಬ್ಬರೂ ಹಾಫ್ ಸೆಂಚ್ಯುರಿ ಮಾಡಲೇ ಇಲ್ಲ. ಹೀಗಿದ್ದಾಗಲೇ, ಕೇವಲ 19.3 ಓವರ್‌ನಲ್ಲಿ 147 ರನ್‌ಗೆ ಗುಜರಾತ್ ಆಲೌಟ್ ಆಗಿ ಪೆವಿಲಿಯನ್ ಗೂಡು ಸೇರಿತ್ತು.

RCB vs GT IPL 2024 This Is What RCB Fans Are Saying After Victory Against Gujarat Titans

ಇದು ಸಾಲದು ಎಂಬಂತೆ ಮತ್ತೊಮ್ಮೆ ಆರ್‌ಸಿಬಿ ತಂಡದ ಎದುರು ಹೀನಾಯ ಸೋಲಿಗಾಗಿ ಸಿದ್ಧವಾಗಿ ನಿಂತಿತ್ತು ಗುಜರಾತ್ ತಂಡ. ಇಷ್ಟೆಲ್ಲಾ ಪರದಾಟದ ನಡುವೆ ಆರ್‌ಸಿಬಿ ಬ್ಯಾಟಿಂಗ್ ಆರಂಭಿಸಿದಾಗ, ಏನ್ ಆಗಿತ್ತು ಗೊತ್ತಾ? ಒಂದು ಹಂತದಲ್ಲಿ 5.5 ಓವರ್‌ಗೆ 92 ರನ್‌ಗಳನ್ನು ಚಚ್ಚಿದ್ದ ಆರ್‌ಸಿಬಿ ಸೋಲಿನ ಸುಳಿಗೆ ಸಿಲುಕಿದ್ದು ಹೇಗೆ? ಈ ಸಮಯದಲ್ಲಿ ಆಗಿದ್ದೇನು? ಈ ಎಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿದೆ ಮುಂದೆ ಓದಿ.

ಆರ್‌ಸಿಬಿ ಅಭಿಮಾನಿಗಳ ಕಣ್ಣಲ್ಲಿ ನೀರು!

148 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಮೊದಲನೇ ವಿಕೆಟ್‌ಗೆ 5.5 ಓವರ್‌ಗಳಲ್ಲಿ 92 ರನ್‌ ಚಚ್ಚಿ ಬಿಸಾಡಿತ್ತು. 92 ರನ್‌ ಆಗುವ ತನಕ ಒಂದೇ ಒಂದು ವಿಕೆಟ್ ಕೂಡ ಆರ್‌ಸಿಬಿ ತಂಡ ಕಳೆದುಕೊಂಡಿರಲಿಲ್ಲ. ಆದ್ರೆ 117 ರನ್ ಆಗುವಷ್ಟರಲ್ಲಿ ಬರೋಬ್ಬರಿ 6 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ಇದಾದ ನಂತರ RCB ಅಭಿಮಾನಿಗಳು ಕಣ್ಣಲ್ಲಿ ನೀರು ತುಂಬಿಕೊಂಡರು.

ದಿನೇಶ್ ಕಾರ್ತಿಕ್ ಇಲ್ಲ ಅಂದಿದ್ರೆ...

ಆದರೆ ಅದೇ ಸಮಯದಲ್ಲಿ ರೊಚ್ಚಿಗೆದ್ದ ಡಿಕೆ ಅಂದ್ರೆ ದಿನೇಶ್ ಕಾರ್ತಿಕ್ ಹಾಗೂ ಸ್ವಪ್ನಿಲ್ ಸಿಂಗ್ ಗುಜರಾತ್ ಬೌಲರ್‌ಗಳನ್ನ ಚಚ್ಚಿ ಬಿಸಾಡಿದರು. ಕೇವಲ 13.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿ ಆರ್‌ಸಿಬಿ ಗೆಲ್ಲಲು ಕಾರಣ ಆದರು. ಆದರೆ ಮ್ಯಾಟರ್ ಈಗ ಇದಲ್ಲ, ಆರ್‌ಸಿಬಿ ಹಿಂಗೆ ಸುಲಭದ ಪಂದ್ಯದಲ್ಲಿ ಗೆಲ್ಲುವುದಕ್ಕೆ ಪರದಾಡಿದ್ದು ಅಭಿಮಾನಿಗಳ ಪಿತ್ತ ನೆತ್ತಿಗೇರಿಸಿದೆ. ಅಲ್ಲದೆ 'ಹೃದಯ ಬಾಯಿಗೆ ಬರ್ಸಿ ಗೆಲ್ಲೋದು ಅಂದ್ರೆ ಇದೇನಾ?' ಅಂತಾ ಆರ್‌ಸಿಬಿ ಆಟಗಾರರಿಗೆ ಪ್ರಶ್ನೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+