ಟಿ20 ವಿಶ್ವಕಪ್ ವಿಜೇತ ತಂಡದಲ್ಲಿ ರಾಹುಲ್ ದ್ರಾವಿಡ್ ಬಿಟ್ಟು ಇದ್ದಾರೆ ಮತ್ತೊಬ್ಬ ಕನ್ನಡಿಗ
ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಭರ್ಜರಿ ಪ್ರದರ್ಶನ ನೀಡಿ, ಎರಡನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟಿದೆ. ರೋಹಿತ್ ಪಡೆಯ ಆಟವನ್ನು ಕಂಡು ದೇಶವೇ ಸಂಭ್ರಮದಲ್ಲಿ ಮುಳಗಿದೆ. ಈ ಪ್ರಶಸ್ತಿಗೆ ಟೀಮ್ ಇಂಡಿಯಾ ಭಾಜನರಾಗುವಂತೆ ಮಾಡಿದವರಲ್ಲಿ ಇಬ್ಬರು ಕನ್ನಡಿಗರು ಇರುವುದು ವಿಶೇಷ..
ಒಬ್ಬರು ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್.. ಕನ್ನಡಿಗ ದ್ರಾವಿಡ್ ಅವರಿಗೆ ಇದು ಕೊನೆಯ ಅಸೈನ್ಮೆಂಟ್ ಆಗಿತ್ತು. ಈ ವೇಳೆ ದ್ರಾವಿಡ್ ತಮ್ಮ ಅಮೋಘ ಕೋಚಿಂಗ್ ಸ್ಕಿಲ್‌ಗಳನ್ನು ಪ್ರಸ್ತುತ ಪಡಿಸಿದರು. ಟೀಮ್ ಇಂಡಿಯಾದ ಮುಂದಾಳುವಾಗಿ, ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಂತೆ ಮಾಡುವಲ್ಲಿ ಇವರ ಸಾಧನೆ ಅಮೋಘ. ರಾಹುಲ್ ದ್ರಾವಿಡ್ ಇದೇ ತಂಡದೊಂದಿಗೆ ಸತತ ಎರಡು ವರ್ಷಗಳ ಕಾಲ ಸಮಯವನ್ನು ಕಳೆದಿದ್ದಾರೆ. ಇದೇ ವೇಳೆ ತಂಡದ ಆಟಗಾರರೊಂದಿಗೆ ಚೆನ್ನಾಗಿ ಹೊಂದಿಕೊಂಡು ಆಡಿದ ದ್ರಾವಿಡ್, ಒಬ್ಬ ರಿಯಲ್ ಮಾಸ್ಟರ್..

ರಾಹುಲ್ ಮುಂದಾಳತ್ವದ ಟೀಮ್ ಇಂಡಿಯಾ
2022ರ ಟಿ20 ವಿಶ್ವಕಪ್ ಸೋಲಿನ ಬಳಿಕ ರಾಹುಲ್ ದ್ರಾವಿಡ್, ಮುಂದಿನ ವಿಶ್ವಕಪ್‌ಗೆ ತಂಡದ ರೂಪು ರೇಷೆಗಳನ್ನು ಸಿದ್ಧಪಡಿಸಿಕೊಳ್ಳಲು ಪ್ರಾರಂಭಿಸಿದರು. ಸತತ ಎರಡು ವರ್ಷದ ಶ್ರಮ ಶನಿವಾರ ಮೈದಾದನದಲ್ಲಿ ಫಲ ನೀಡಿದೆ. ರಾಹುಲ್ ದ್ರಾವಿಡ್ ಅವರಂತೆ ಇದೇ ತಂಡದಲ್ಲಿ ಕಾಣಿಸಿಕೊಂಡ ಇನ್ನೊಬ್ಬ ಕನ್ನಡಿಗ ಎಲೆ ಮರೆಯ ಕಾಯಿಯಂತಿದ್ದಾರೆ. ಟಿ20 ವಿಶ್ವಕಪ್ ಗೆಲುವಿನಲ್ಲಿ ಇವರ ಕಾಣಿಕೆ ಸಹ ಅಪಾರ..
ಮತ್ತೊಬ್ಬ ಕನ್ನಡಿಗ ಯಾರು?
ಉತ್ತರ ಕನ್ನಡ ಜಿಲ್ಲೆಯ ಕುಮಾಟ ಮೂಲದ ಡಿ. ರಾಘವೇಂದ್ರ. ಇವರನ್ನು ನೀವೆಲ್ಲಾ ಟೀಮ್ ಇಂಡಿಯಾದ ಜೊತೆ ಆಗ್ಗಾಗೆ ಕಂಡಿರುತ್ತೀರಾ. ತೆಳಗ್ಗೆ, ಬೆಳಗ್ಗೆ, ಮಿಡಿಮ್ ಹೈಟ್ ಹಾಗೂ ಹಣೆಯ ಮೇಲೆ ಕುಂಕುಮ. ಯವಾಗಲೂ ಟೀಮ್ ಇಂಡಿಯಾ ಎಲ್ಲಿಯಾದರೂ ಪ್ರವಾಸ ಕೈಗೊಂಡರೂ ಈ ಒಬ್ಬ ಸಿಬ್ಬಂದಿ ಟೀಮ್ ಇಂಡಿಯಾದ ಜೊತೆ ಕಾಣಿಸಿಕೊಳ್ಳುತ್ತಾರೆ.
ರಘು ಟೀಮ್ ಇಂಡಿಯಾದಲ್ಲಿ ಥ್ರೋ ಡೌನ್ ಸ್ಪೆಷಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಟೀಮ್ ಇಂಡಿಯಾದ ಬ್ಯಾಟರ್‌ಗಳು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ವೇಗವಾಗಿ ಬೌಲಿಂಗ್ ಎಸೆಯುವುದೇ ಇವರ ಕೆಲಸ.

ಯಶಸ್ಸಿನ ಹೀರೋಗಳಲ್ಲಿ ಒಬ್ಬರು
ಕ್ರಿಕೆಟ್ ಮೇಲಿನ ಪ್ರೀತಿ ಇವರನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಹಿಂದಿನ ಕಷ್ಟದ ದಿನಗಳನ್ನು ಮೆಟ್ಟಿ ನಿಂತ ರಘು, ಈಗ ಟೀಮ್ ಇಂಡಿಯಾ ಯಶಸ್ವಿನ ಹಿರೋಗಳಲ್ಲಿ ಒಬ್ಬರು. ತಮ್ಮ ಕನಸನ್ನೇ ಬೆನ್ನು ಹತ್ತಿದ್ದ ರಘು, ಟೀಮ್ ಇಂಡಿಯಾದ ನುರಿತ ಸಿಬ್ಬಂದಿಗಳಲ್ಲಿ ಒಬ್ಬರು. ವಿದೇಶಿ ವೇಗದ ಬೌಲರ್‌ಗಳು ಎಸೆಯುವ ಬೆಂಕಿಯಂತಹ ಚೆಂಡನ್ನು ಎದುರಿಸಲು ರಘು ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿ, ಬ್ಯಾಟರ್‌ಗಳಿಗೆ ಅಭ್ಯಾಸ ಮಾಡಿಸುತ್ತಾರೆ. ಈ ಮೂಲಕ ರಘು ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ನೀಡಿದ್ದಾರೆ.
ಟೀಮ್ ಇಂಡಿಯಾ ಸ್ಟಾರ್ ಆಟಗಾರರು ಈಗಾಗಲೇ ರಘು ಅವರ ಕಾರ್ಯವನ್ನು ಕೊಂಡಾಡಿದ್ದಾರೆ. ಈ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ನೆಟ್ಸ್‌ನಲ್ಲಿ ಕಾಣಿಸಿಕೊಂಡಾಗ ರಘು ಸಹ ಕಾಣಿಸಿಕೊಂಡಿದ್ದರು. ಅಲ್ಲದೆ ಬೌನ್ಸಿ ಟ್ರ್ಯಾಕ್‌ಗಳಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿದ್ದರ ಹಿಂದೆ ಇಬ್ಬರು ಕನ್ನಡಿಗರ ಕೈವಾಡವಿದೆ.












Click it and Unblock the Notifications