Mohamme Siraj: ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಈಗ ಡಿಎಸ್‌ಪಿ

ಭಾರತ ತಂಡದ ವೇಗದ ಬೌಲರ್, ಆರ್‌ಸಿಬಿ ಸ್ಟಾರ್ ಆಟಗಾರ ಮೊಹಮ್ಮದ್ ಸಿರಾಜ್ ಈಗ ತೆಲಂಗಾಣದಲ್ಲಿ ಅಧಿಕೃತವಾಗಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿಎಸ್‌ಪಿ) ಅಧಿಕಾರ ವಹಿಸಿಕೊಂಡಿದ್ದಾರೆ. ಇಂದು (ಶುಕ್ರವಾರ) ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ರಿಪೋರ್ಟ್ ಮಾಡಿಕೊಂಡಿದ್ದಾರೆ.

ಮೊಹಮ್ಮದ್ ಸಿರಾಜ್ ಅವರಿಗೆ ಪ್ರತಿಷ್ಠಿತ ಗ್ರೂಪ್-1 ಸರ್ಕಾರಿ ಹುದ್ದೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಘೋಷಣೆ ಮಾಡಿದ್ದ ಬಳಿಕ ಈ ನಿರ್ಧಾರ ತೆಗೆದುಕೊಲ್ಳಲಾಗಿದೆ. ಇಂದು ಸಿರಾಜ್ ಡಿಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿರಾಜ್ ಅಧಿಕಾರ ಸ್ವೀಕರಿಸುವ ಮುನ್ನ ಮಾತನಾಡಿ ಸಿಎಂ ರೇವಂತ್ ರೆಡ್ಡಿ ಕ್ರೀಡಾಪಟುಗಳಿಗೆ ಬೆಂಬಲ ಕೊಡಲು ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.

Mohammed siraj takes charge as telangana dsp

ಭಾರತ ತಂಡವು 2024 ರ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ಬಳಿಕ ಮೊಹಮ್ಮದ್ ಸಿರಾಜ್ ಅವರಿಗೆ ಡಿಎಸ್‌ಪಿ ಕೆಲಸ ಕೊಡುವುದಾಗಿ ಭರವಸೆ ಕೊಟ್ಟಿತ್ತು. ಇದರ ಹೊರತಾಗಿ ಜುಬಿಲಿ ಹಿಲ್ಸ್‌ನಲ್ಲಿ 1800 ಚದರ ಅಡಿ ಭೂಮಿಯನ್ನು ಕೂಡ ನೀಡಿದೆ.

ಆಟೋ ರಿಕ್ಷಾ ಚಾಲಕನ ಮಗ ಸೂಪರ್ ಸ್ಟಾರ್

ಮೊಹಮ್ಮದ್ ಸಿರಾತ್, ಮಾರ್ಚ್ 13, 1994 ರಂದು ತೆಲಂಗಾಣದ ಹೈದರಾಬಾದ್‌ನಲ್ಲಿ ಜನಿಸಿದರು. ಬಲಗೈ ವೇಗದ ಬೌಲಿಂಗ್‌ಗೆ ಹೆಸರಾಗಿರುವ ಸಿರಾಜ್ ಸದ್ಯ ಭಾರತ ತಂಡದ ಪ್ರಮುಖ ಬೌಲರ್ ಗಳಲ್ಲಿ ಒಬ್ಬರು. ಅವರ ತಂದೆ ಆಟೋ ರಿಕ್ಷ ಚಾಲಕರು. 16ನೇ ವಯಸ್ಸಿನಲ್ಲಿ ಟೆನಿಸ್ ಬಾಲ್‌ನಲ್ಲಿ ಬೌಲಿಂಗ್ ಮಾಡಲು ಆರಂಭಿಸಿದ ಅವರು, 19ನೇ ವಯಸ್ಸಿನಲ್ಲಿ ಕ್ಲಬ್ ಕ್ರಿಕೆಟ್‌ ಆಡಲು ಪ್ರಾರಂಭಿಸಿದರು.

ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಅವರು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಆಡುತ್ತಾರೆ. ದೇಶೀಯ ಕ್ರಿಕೆಟ್‌ಲ್ಲಿ ಹೈದರಾಬಾದ್ ತಂಡಕ್ಕಾಗಿ ಆಡುತ್ತಾರೆ.

2023ರ ಏಷ್ಯಾಕಪ್‌ ಗೆಲುವಿನಲ್ಲಿ ಸಿರಾಜ್ ಪ್ರಮುಖ ಪಾತ್ರ ವಹಿಸಿದ್ದರು. ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 21 ರನ್ ನೀಡಿ 6 ವಿಕೆಟ್ ಪಡೆದುಕೊಂಡಿದ್ದರು. 2024ರ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡದ ಭಾಗವಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+