Mohammed Siraj: ವಿಶ್ವಕಪ್ ಗೆದ್ದ ಮೊಹಮ್ಮದ್ ಸಿರಾಜ್‌ಗೆ ಸಿಕ್ತು ಸರ್ಕಾರಿ ಕೆಲಸ!
ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರಿಗೆ ಬಂಪರ್ ಬಹುಮಾನ ಸಿಕ್ಕಿದೆ. ತಂಡದಲ್ಲಿ ಆಟಗಾರರಿಗೆ ಬಿಸಿಸಿಐ ತಲಾ 5 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿವೆ. ಭಾರತ ತಂಡದ ಆಟಗಾರರಿಗೆ ಮುಂಬೈನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ.
ಇನ್ನು ಆಟಗಾರರಿಗೆ ತವರಿನಲ್ಲಿ ಮತ್ತು ಮನೆಯಲ್ಲಿ ಕೂಡ ಭರ್ಜರಿ ಸ್ವಾಗತ ಸಿಕ್ಕಿದೆ. ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಮೊಹಮ್ಮದ್ ಸಿರಾಜ್ ಅವರಿಗೆ ಹೈದರಾಬಾದ್‌ನಲ್ಲಿ ಭವ್ಯ ಸ್ವಾಗತ ಸಿಕ್ಕಿತ್ತು. ಈಗ ಅವರಿಗೆ ರಾಜ್ಯ ಸರ್ಕಾರದಿಂದ ಕೂಡ ಭರ್ಜರಿ ಬಹುಮಾನ ಸಿಕ್ಕಿದೆ.

ಮೊಹಮ್ಮದ್ ಸಿರಾಜ್‌ಗೆ ಸನ್ಮಾನ ಮಾಡಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ನಿವೇಶನ ಮತ್ತು ಸರ್ಕಾರಿ ಕೆಲಸ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.
ಸಿರಾಜ್ ಭೇಡಿ ಮಾಡಿ ಸಿಎಂ
ಮೊಹಮ್ಮದ್ ಸಿರಾಜ್ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರನ್ನು ಮಂಗಳವಾರ ಭೇಟಿ ಮಾಡಿದರು. ಸಭೆಯಲ್ಲಿ ಸಿಎಂ ರೇವಂತ್ ರೆಡ್ಡಿ ಅವರು ಸಿರಾಜ್ ಅವರನ್ನು ಸನ್ಮಾನಿಸಿ, ಅವರ ಆಟವನ್ನು ಶ್ಲಾಘಿಸಿದರು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂದು ಹೊಗಳಿದರು.
ಮೊಹಮ್ಮದ್ ಸಿರಾಜ್ ನಮ್ಮ ದೇಶಕ್ಕೆ ಅಪಾರ ಹೆಮ್ಮೆ ಮತ್ತು ತೆಲಂಗಾಣ ರಾಜ್ಯಕ್ಕೆ ದೊಡ್ಡ ಗೌರವವನ್ನು ತಂದಿದ್ದಾರೆ ಎಂದ ಸಿಎಂ ರೇವಂತ್ ರೆಡ್ಡಿ ಸಿರಾಜ್‌ಗೆ ರಾಜ್ಯ ಸರ್ಕಾರದ ಪರವಾಗಿ ಮನೆ ಮತ್ತು ಉದ್ಯೋಗವನ್ನು ಮಂಜೂರು ಮಾಡಲು ಅಧಿಕಾರಿಗಳಿಗೆ ಆದೇಶ ನೀಡಿದರು.
ಹೈದರಾಬಾದ್ ಅಥವಾ ಸಮೀಪದಲ್ಲಿ ಸೂಕ್ತ ಸ್ಥಳವನ್ನು ಹುಡುಕಲು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಧಿಕಾರಿಗಳಿಗೆ ಆದೇಶಿಸಿದರು. ನಿವೇಶನ ಮತ್ತು ಸರ್ಕಾರಿ ಉದ್ಯೋಗಗಳನ್ನು ಒದಗಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಸಿರಾಜ್ ಅವರ ಸಾಧನೆಯ ಸಂಕೇತವಾಗಿ, ಸಿರಾಜ್‌ಗೆ ರಾಜ್ಯ ಸರ್ಕಾರವು ವಸತಿ ನಿವೇಶನ ಮತ್ತು ಸರ್ಕಾರಿ ಉದ್ಯೋಗವನ್ನು ನೀಡುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ವಿಜಯೋತ್ಸವದಲ್ಲಿ ಭಾಗವಹಿಸಿದ ಸಿರಾಜ್, ಸಿಎಂಒ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದು, ಅಲ್ಲಿ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮತ್ತು ಅವರ ಪುತ್ರ ಕೂಡ ಉಪಸ್ಥಿತರಿದ್ದರು.












Click it and Unblock the Notifications