KL Rahul: ಆರ್‌ಸಿಬಿ ತಂಡಕ್ಕೆ ಮತ್ತೆ ಮರಳುತ್ತಾರಾ ಕೆಎಲ್ ರಾಹುಲ್?
ಟೀಮ್ ಇಂಡಿಯಾದ ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವ ಕೆಎಲ್ ರಾಹುಲ್ ಸದ್ಯ ಐಪಿಎಲ್‌ನಲ್ಲಿ ಬ್ಯೂಸಿ ಇದ್ದಾರೆ. ಈಗ ಅವರು ಲಖ್ನೋ ಸೂಪರ್ ಜೇಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೈದಾನದಲ್ಲಿ ಕಮಾಲ್ ಮಾಡುವ ಕನಸನ್ನು ಕಾಣುತ್ತಿರುವ ಇತ್ತೀಚಿಗೆ ಆರ್.ಅಶ್ವಿನ್ ಜೊತೆಗಿನ ಒಂದು ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ರಾಹುಲ್, ಸರಣಿಯನ್ನು ಮಿಸ್ ಮಾಡಿಕೊಂಡಿದ್ದರು. ಗಾಯದಿಂದ ಚೇತರಿಸಿಕೊಂಡಿರುವ ರಾಹುಲ್ ಮತ್ತೆ ಅಂಗಳಕ್ಕೆ ಮರಳಿದ್ದಾರೆ. ಆದರೆ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ಎಡವುತ್ತಿರುವುದು ಮ್ಯನೇಜ್ಮೆಂಟ್ ಚಿಂತೆಯನ್ನು ಹೆಚ್ಚು ಮಾಡಿದೆ. ಕೆಎಲ್ ಸಹ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಕನಸಿನಲ್ಲಿದ್ದಾರೆ.

ಆರ್.ಅಶ್ವಿನ್ ಅವರೊಂದಿಗೆ ಕೆಎಲ್ ರಾಹುಲ್ ಇತ್ತೀಚಿಗೆ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಈ ವೇಳೆ ಆರ್‌ಸಿಬಿ ತನ್ನ ಲೈಫ್ ಬದಲಿಸಿತು ಎಂದು ಹೇಳಿದರು. 2013ರಿಂದ ರಾಹುಲ್ ಆರ್‌ಸಿಬಿ ಪರ ಆಡಿದ್ದರು. ಇದೇ ವೇಳೆ ರಾಹುಲ್ ವಿರಾಟ್ ಹೇಗೆ ತಮ್ಮನ್ನು ತಂಡಕ್ಕೆ ಸೇರಿಸಿಕೊಂಡರು ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
ಕನಸು ನನಸು
ಹಳೆದ ಘಟನೆಯನ್ನು ಮೆಲಕು ಹಾಕಿದ ರಾಹುಲ್ 2013ರಲ್ಲಿ ಆರ್‌ಸಿಬಿ ತಮ್ಮ ತಂಡದ ಪರ ಆಡುತ್ತೀರಾ ಎಂದು ಕೇಳಿತ್ತು. ಆಗ ನಾನು ನೀವು ತಮಾಷೆ ಮಾಡುತ್ತಿಲ್ಲ ತಾನೆ ಎಂದು ಹೇಳಿದ್ದೆ. ಆರ್‌ಸಿಬಿ ತಂಡವನ್ನು ಪ್ರತಿನಿಧಿಸುವುದು ನನ್ನ ಕನಸಾಗಿತ್ತು. ವಿರಾಟ್ ನಿಮ್ಮ ಮುಂದೆ ಆಯ್ಕೆಗಳಿಲ್ಲ ಈ ಒಪ್ಪಂದಕ್ಕೆ ಸಹಿ ಹಾಕಿ ಎಂದು ತಿಳಿಸಿದ್ದರು. ಅಲ್ಲದೆ ಮುಂದಿನ ಎರಡು ತಿಂಗಳು ಆಟವನ್ನು ಆನಂದಿಸಲಿದ್ದೀರಿ ಎಂದು ತಿಳಿಸಿದ್ದರು. ಏಳೆಂಟು ರಣಜಿ ಸೀಸನ್ ಆಡಿದಾಗಲು ಸಿಗದಷ್ಟು ಅನುಭವ ಆರ್‌ಸಿಬಿ ಪರ ಆಡಿದಾಗ ನನಗೆ ಸಿಕ್ಕಿದೆ. ಈ ತಂಡದೊಂದಿಗೆ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಮನದಾಳ ಮಾತುಗಳನ್ನು ಹೇಳಿದ್ದಾರೆ.

ಆರ್‌ಸಿಬಿ ಪರ ಆಡುತ್ತಾರಾ ಕೆಎಲ್?
ನಾನು ಕರ್ನಾಟಕದ ಆಟಗಾರ ಮತ್ತು ಬೆಂಗಳೂರಿನಿಂದ ಬಂದಿದ್ದೇನೆ ಎಂಬ ಸತ್ಯವನ್ನು ನೀವು ಎಂದಿಗೂ ಅಲ್ಲಗಳೆಯುವಂತಿಲ್ಲ. ಕೆಎಸ್‌ಸಿಎ ಮೈದಾನ ನನಗೆ ಮನೆಯಿದ್ದಂತೆ. ಅದು ನನ್ನ ಮನೆ ಮೊದಲು ಮತ್ತು ಈಗ ಐಪಿಎಲ್ ನಡೆಯುತ್ತಿದೆ. ಪ್ರತಿಯೊಬ್ಬ ಆಟಗಾರನು ತನ್ನ ತವರು ರಾಜ್ಯ ಅಥವಾ ನಗರದ ತಂಡಕ್ಕಾಗಿ ಆಡಲು ಬಯಸುತ್ತಾನೆ, ನಾನು ಬೆಂಗಳೂರಿನವನಂತೆ ಮತ್ತು ನಾನು ಬೆಂಗಳೂರಿನಿಂದ ಆಡಿದ್ದರೆ ಅದು ತುಂಬಾ ಚೆನ್ನಾಗಿತ್ತು ಎಂದು ತಮ್ಮ ಅನಿಸಿಕೆ ತಿಳಿಸಿದ್ದಾರೆ.
ಐಪಿಎಲ್ ಮತ್ತು ಟಿ20 ಕ್ರಿಕೆಟ್ ಬಗ್ಗೆ ಯೋಚಿಸಿದಾಗ ಅಥವಾ ಕನಸು ಕಂಡಾಗಿನಿಂದ, ನನ್ನ ಮನಸ್ಸಿನಲ್ಲಿ ಆ ಒಂದು ವಿಚಾರ ಬಹುವಾಗಿ ಓಡುತ್ತಲೇ ಇತ್ತು. ವಿರಾಟ್ ದೆಹಲಿಯವರು ಮತ್ತು ಮಾಹಿ ಭಾಯ್ ಜಾರ್ಖಂಡ್‌ನವರಾಗಿದ್ದರೂ ಅವರು ಸಿಎಸ್‌ಕೆಗೆ ಆಡುತ್ತಿದ್ದಾರೆ. ಹಾಗಾಗಿ ಇದು ದೊಡ್ಡ ಬದಲಾವಣೆ ಎಂದು ನಾನು ಭಾವಿಸುತ್ತೇನೆ. ಆದಾಗ್ಯೂ, ಪ್ರತಿಯೊಬ್ಬರೂ ಸಾಧ್ಯವಾದರೆ ತಮ್ಮ ನಗರದ ಫ್ರಾಂಚೈಸಿಯೊಂದಿಗೆ ಆಡಲು ಬಯಸುತ್ತಾರೆ. ಆದರೆ ನಾವೆಲ್ಲರೂ ನಮ್ಮ ಪ್ರತಿಭೆಯನ್ನು ತೋರಿಸಬೇಕು ಮತ್ತು ದೇಶಕ್ಕಾಗಿ ಆಡಬೇಕು ಎಂದು ತಿಳಿಸಿದ್ದಾರೆ.

ಪ್ರಸಕ್ತ ಐಪಿಎಲ್‌ನಲ್ಲಿ ರಾಹುಲ್ ಆಡಿರುವ ಆರು ಪಂದ್ಯಗಳಲ್ಲಿ 134ರ ಸ್ಟ್ರೈಕ್ ರೇಟ್‌ನಲ್ಲಿ 204 ರನ್ ಗಳಿಸಿದ್ದಾರೆ. ಈ ವೇಳೆ ಒಂದು ಅರ್ಧಶತಕ ಸಹ ಸೇರಿದೆ.












Click it and Unblock the Notifications