IPL SRH Team: ಕಾವ್ಯಾ ಮಾರನ್ ಮಾಲಿಕತ್ವದ ಎಸ್‌ಆರ್‌ಎಚ್ ಟೀಂ ಐಪಿಎಲ್‌ನಿಂದ ಔಟ್?
IPL SRH Team: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಭರ್ಜರಿಯಾಗಿ ಗೆದ್ದು 17 ವರ್ಷಗಳ ಬಳಿಕ ಟ್ರೋಫಿ ತನ್ನದಾಗಿಸಿಕೊಂಡಿದೆ. ಈ ಹಿನ್ನೆಲೆ ಮಾರನೇ ದಿನ ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಳ್ಳಲಾಗಿದ್ದು, ಈ ವೇಳೆ ಚಿನ್ನಸ್ವಾಮಿ ಬಳಿ ಕಾಲ್ತಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದರು. ದುರಂತದ ಬೆನ್ನಲ್ಲೇ ಈ ತಂಡದ ಬ್ಯಾನ್ ಆಗಲಿದೆ ವದಂತಿಗಳು ಹಬ್ಬಿದ್ದು, ಇದಕ್ಕೆ ಪ್ರಾಂಚೈಸಿ ಸ್ಪಷ್ಟನೆಯನ್ನೂ ನೀಡಿತ್ತು. ಈ ನಡುವೆಯೇ ಇದೀಗ ಎಸ್‌ಆರ್‌ಎಚ್‌ಗೆ ಸಂಕಷ್ಟವೊಂದು ಎದುರಾಗಿದೆ. ಹಾಗಾದ್ರೆ ಅದೇನು ಅಂತೀರಾ ಇಲ್ಲಿದೆ ಮಾಹಿತಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆದ್ದ ಮಾರನೇ ದಿನವೇ ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದು, ಈ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇನ್ನು ಈ ಘಟನೆ ನಡೆದ ಬಳಿಕ ತುಂಬಾ ಬೆಳವಣಿಗೆಗಳು ಆದ್ವು.

ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಅಷ್ಟೇ ಅಲ್ಲದೆ, ಆರ್‌ಸಿಬಿ, ಕೆಎಸ್‌ಸಿಎ ವಿರುದ್ಧ ಎಫ್‌ಐಆರ್ ಹಾಗೂ ವಿರಾಟ್ ಕೊಹ್ಲಿ ಮೇಲು ದೂರು ದಾಖಲಾಗಿತ್ತು. ಬಳಿಕ ರಾಯಲ್ ತಂಡ ಐಪಿಎಲ್‌ನಿಂದ ಬ್ಯಾನ್ ಆಗಲಿದೆ ಹಾಗೂ ಮಾರಾಟ ಮಾಡಲಾಗುತ್ತದೆ ಎನ್ನುವ ವದಂತಿಗಳು ಹರಡಿದ್ದು, ಇದಕ್ಕೆ ಪ್ರಾಂಚೈಸಿ ಸ್ಪಷ್ಟನೆಯನ್ನೂ ಕೂಡ ನೀಡಿತ್ತು. ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದು ತಿಳಿಸಿತ್ತು.
ಇದರ ಬೆನ್ನಲ್ಲೇ ಇದೀಗ ಕಾವ್ಯಾ ಮಾರನ್ ಮಾಲಿಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಐಪಿಎಲ್‌ನಿಂದ ಬ್ಯಾನ್ ಆಗುವ ಆತಂಕ ಎದುರಾಗಿದೆ. ಎಸ್‌ಆರ್‌ಎಚ್ ಫ್ರಾಂಚೈಸಿಗೆ ಸಿಇಒ ಕಾವ್ಯಾ ಮಾರನ್ ಕುಟುಂಬದೊಳಗಿನ ವಿವಾದದಿಂದ ದೊಡ್ಡ ಸವಾಲು ಎದುರಾಗಿದೆ. ಕಾವ್ಯಾ ಅವರ ತಂದೆ ಕಲಾನಿಧಿ ಮಾರನ್ ವಿರುದ್ಧ ಅವರ ಸಹೋದರ ದಯಾನಿಧಿ ಮಾರನ್, ಹಣದ ಅಕ್ರಮ ವರ್ಗಾವಣೆ ಆರೋಪ ಮಾಡಿದ್ದಾರೆ. ಈ ವಿವಾದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲೀಕತ್ವದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದ ಎಂದಯ ವರದಿ ಆಗಿದೆ.
ವಿವಾದದ ಕೇಂದ್ರಬಿಂದು ಸನ್ ನೆಟ್‌ವರ್ಕ್‌ನ ಷೇರು ಹಂಚಿಕೆ ಆಗಿದೆ. 2003ಕ್ಕಿಂತ ಮೊದಲು, ಕಲಾನಿಧಿ ಮಾರನ್ ಮತ್ತು ಕರುಣಾನಿಧಿ ಕುಟುಂಬವು ಸನ್ ನೆಟ್‌ವರ್ಕ್‌ನಲ್ಲಿ ಸಮ ಪಾಲನ್ನು ಹೊಂದಿತ್ತು. ಆದರೆ, 2003ರ ಬಳಿಕ ಷೇರು ಹಂಚಿಕೆಯಲ್ಲಿ ಬದಲಾವಣೆ ಆಯಿತು ಎಂದು ದಯಾನಿಧಿ ಆರೋಪ ಮಾಡಿದ್ದಾರೆ. ತಂದೆ ಮುರಸೋಲಿ ಮಾರನ್ ಅನಾರೋಗ್ಯದಿಂದ ಬಳಲುತ್ತಿದ್ದ ಸಮಯದಲ್ಲಿ ಕಲಾನಿಧಿ ಮತ್ತು ಅವರ ಪತ್ನಿ ಕಾವೇರಿ ಮಾರನ್, ಕಂಪನಿಯ ನಿಯಂತ್ರಣವನ್ನ ತಮ್ಮ ಕೈವಶ ಮಾಡಿಕೊಂಡಿದ್ದಾರೆ ಎಂದು ದಯಾನಿಧಿ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ, ಸನ್ ಡೈರೆಕ್ಟ್ ಟಿವಿ, ಸನ್ ಪಿಕ್ಚರ್ಸ್, ಎಫ್‌ಎಂ ಚಾನೆಲ್‌ಗಳು, ಮತ್ತು ಸನ್‌ರೈಸರ್ಸ್ ಹೈದರಾಬಾದ್‌ನಂತಹ ಕಂಪನಿಗಳನ್ನು ಸ್ಥಾಪಿಸಲು ಸನ್ ನೆಟ್‌ವರ್ಕ್‌ನ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದಯಾನಿಧಿ ಆರೋಪ ಮಾಡಿದ್ದಾರೆ.
2005ರಲ್ಲಿ ಸನ್ ಟಿವಿ ತನ್ನ ತಾಯಿಯಾದ ಮಲ್ಲಿಕಾ ಮಾರನ್‌ಗೆ 10.64 ಕೋಟಿ ರೂಪಾಯಿ ಡಿವಿಡೆಂಡ್ ಪಾವರಿ ಮಾಡಿದೆ ಅಂತಾ ತಿಳಿಸಿತ್ತು. ಆದರೆ, ಯಾವುದೇ ಪಾವತಿಯೂ ಆಗಿಲ್ಲ. ಈ ಹಣವನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ಸೇರಿದಂತೆ ಇತರ ಕಂಪನಿಗಳನ್ನು ಕಟ್ಟಲು ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.
ಒಂದು ವೇಳೆ ನ್ಯಾಯಾಲಯವು 2003ರ ಷೇರು ಮಾದರಿಯನ್ನು ಪುನಃಸ್ಥಾಪಿಸಬೇಕು ಎಂದು ತೀರ್ಪು ನೀಡಿದರೆ, ಸನ್ ನೆಟ್‌ವರ್ಕ್‌ನ ಮಾಲೀಕತ್ವದಲ್ಲಿ ಗಮನಾರ್ಹ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಇದರಿಂದ ಐಪಿಎಲ್ ಎಸ್‌ಆರ್‌ಎಚ್ ತಂಡದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹಚ್ಚಿರುತ್ತದೆ. ಆಗ ಬಿಸಿಸಿಐ ಮಧ್ಯಪ್ರವೇಶಿಸಿ ತಂಡವನ್ನ ಮಾರಾಟ ಮಾಡುವಂತೆ ಒತ್ತಾಯಿಸಬಹುದು.
ಐಪಿಎಲ್ 2025ರಲ್ಲಿ ಎಸ್‌ಆರ್‌ಎಚ್ ತಂಡದಿಂದ ಹೇಳಿಕೊಳ್ಳುವಷ್ಟೇನೂ ಪ್ರದರ್ಶನ ಕಂಡುಬರಲಿಲ್ಲ. 14 ಪಂದ್ಯಗಳಲ್ಲಿ ಕೇವಲ 6 ಗೆಲುವು, 7 ಸೋಲು, ಮತ್ತು ಒಂದು ಡ್ರಾದೊಂದಿಗೆ ತಂಡವು 6ನೇ ಸ್ಥಾನಕ್ಕೆ ಇಳಿಯಿತು. ಪ್ರಮುಖ ಆಟಗಾರರಾದ ಹೆನ್ರಿಕ್ ಕ್ಲಾಸೆನ್ (23 ಕೋಟಿ), ಪ್ಯಾಟ್ ಕಮ್ಮಿನ್ಸ್ (18 ಕೋಟಿ), ಟ್ರಾವಿಸ್ ಹೆಡ್ (14 ಕೋಟಿ), ಅಭಿಷೇಕ್ ಶರ್ಮಾ (14 ಕೋಟಿ), ಮತ್ತು ನಿತೀಶ್ ಕುಮಾರ್ ರೆಡ್ಡಿ (6 ಕೋಟಿ) ಅವರನ್ನು ಉಳಿಸಿಕೊಂಡಿದ್ದರು. ಆದರೆ, 2024ರಲ್ಲಿ ಫೈನಲ್‌ಗೆ ತಲುಪಿದ್ದ ತಂಡ, 2025ರಲ್ಲಿ ನಿರೀಕ್ಷಿದಷ್ಟು ಪ್ರದರ್ಶನ ನೀಡಲು ವಿಫಲವಾಯಿತು. ಇದು ಒಂದು ಕಡೆ ಕಾವ್ಯಾ ಮಾರನ್‌ಗೆ ತಲೆನೋವಾದ್ರೆ, ಮತ್ತೊಂದೆಡೆ ತಂಡ ಬ್ಯಾನ್ ಆಗುವ ಆತಂಕವೂ ಎದುರಾಗಿದೆ.












Click it and Unblock the Notifications