IPL 2023: ಭಾರತೀಯರ ಮನೆಮಾತಾಗಲಿದ್ದಾನೆ ಈ ಆಟಗಾರ: ಭರವಸೆಯ ಆಟಗಾರನ ಬಗ್ಗೆ ಬ್ರೇಟ್ ಲೀ ಮಾತು
ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಕೆಲ ಆಟಗಾರರು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಅಂಥಾ ಆಟಗಾರರ ಪೈಕಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ರಿಂಕು ಸಿಂಗ್ ಕೂಡ ಒಬ್ಬರು. ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ರಿಂಕು ಆನೇಕ ಪಂದ್ಯಗಳಲ್ಲಿ ತಂಡಕ್ಕೆ ಆಸರೆಯಾಗಿದ್ದಾರೆ. ಅಸಾಧ್ಯ ಪಂದ್ಯಗಳನ್ನು ಕೂಡ ಗೆಲ್ಲಿಸಿಕೊಟ್ಟಿದ್ದಾರೆ. ಸೋಮವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟಿ ಗೆಲುವು ಸಾಧಿಸಲು ಕಾರಣವಾಗಿದ್ದರು.
ಈ ಪಂದ್ಯದ ಬಳಿಕ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ರಿಂಕು ಸಿಂಗ್ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ರಿಂಕು ಸಿಂಗ್ ಸದ್ಯದಲ್ಲಿಯೇ ಭಾರತೀಯರ ಮನೆಮಾತನಾಗಲಿದ್ದಾರೆ ಎಂದು ಬ್ರೇಟ್ ಲೀ ಭವಿಷ್ಯ ನುಡಿದಿದ್ದಾರೆ. "ಆತ ತನ್ನನ್ನು ಇಷ್ಟಪಡಲು ಏನು ಬೇಕೋ ಅದೆಲ್ಲವನ್ನೂ ಮಾಡುತ್ತಿದ್ದಾರೆ. ಆತನೋರ್ವ ಮ್ಯಾಚ್ ವಿನ್ನರ್ ಹಾಗೂ ಆತ ಮನರಂಜಿಸುವ ಸಾಮರ್ಥ್ಯವಿರುವ ಆಟಗಾರ. ಆತ ಮೈದಾನಕ್ಕಿಳಿದು ಪಂದ್ಯವನ್ನು ಗೆಲ್ಲಿಸುತ್ತಾರೆ. ಯುವ ಆಟಗಾರ ಬಂದು ಈ ರೀತಿಯ ಪ್ರದರ್ಶಣ ನೀಡುವುದನ್ನು ನೋಡಲು ರೋಮಾಂಚನವಾಗುತ್ತದೆ" ಎಂದಿದ್ದಾರೆ ಬ್ರೇಟ್ ಲೀ.

ಮುಂದುವರಿದು ಮಾತನಾಡಿದ ಬ್ರೇಟ್ ಲೀ ರಿಂಕು ಸಿಂಗ್ ಭವಿಷ್ಯದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. "ರಿಂಕು ಸಿಂಗ್ ಭಾರತದ ಕ್ರಿಕೆಟ್ ಪ್ರೇಮಿಗಳ ಮನೆಮಾತಾಗಲಿದ್ದಾರೆ. ಭವಿಷ್ಯದಲ್ಲಿ ಉತ್ತಮವಾದ ಕ್ರಿಕೆಟ್ ಅವರಿಂದ ಬರಲಿದೆ" ಎಂದಿದ್ದಾರೆ ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಮಾಜಿ ವೇಗದ ಬೌಲರ್ ಬ್ರೇಟ್ ಲೀ.
Asia Cup 2023: ಪಾಕಿಸ್ತಾನದ ಕೈತಪ್ಪಲಿದೆ ಏಷ್ಯಾ ಕಪ್ ಆತಿಥ್ಯ?: ಶ್ರೀಲಂಕಾ ಆತಿಥ್ಯ ಸಾಧ್ಯತೆ
ರಿಂಕು ಸಿಂಗ್ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಎರಡು ಓವರ್‌ಗಳಿರುವಾಗ ಕಣಕ್ಕಿಳಿದು ಕೇವಲ 10 ಎಸೆತಗಳಲ್ಲಿ 21 ರನ್ ಬಾರಿಸಿ ಗೆಲುವು ಸಾರಿದರು. ಅದರಲ್ಲೂ ಕೊನೆಯ ಎಸೆತದಲ್ಲಿ ಕೆಕೆಆರ್ ಗೆಲುವಿಗೆ ಎರಡು ರನ್‌ಗಳ ಅಗತ್ಯವಿದ್ದಾಗ ರಿಂಕು ಸಿಂಗ್ ಬೌಂಡರಿ ಬಾರಿಸಿ ಗೆಲುವು ಘೋಷಿಸಿದರು. ಈ ಮೂಲಕ ಕೆಕೆಆರ್ ತಂಡದ ಪರವಾಗಿ ರಿಂಕು ಸಿಂಗ್ ಮತ್ತೊಮ್ಮೆ ಮ್ಯಾಚ್ ವಿನ್ನರ್ ಎನಿಸಿಕೊಂಡಿದ್ದಾರೆ.
"ಆತನ ಮೇಲೆ ದೊಡ್ಡ ಜವಾಬ್ಧಾರಿಯಿದೆ. ಒತ್ತಡದಲ್ಲಿ ಆಡುವುದು ಬಹಳ ಮುಖ್ಯ. ಆಟಗಾರನಾಗಿ ನೀವು ಎಷ್ಟು ಉತ್ತಮವಾದ ಮನಸ್ಥಿತಿಯನ್ನು ಹೊಂದಿದ್ದೀರಿ ಹಾಗೂ ಯಾವ ರೀತಿಯಾಗಿ ನೀವು ಯೋಚನೆ ಮಾಡುತ್ತೀರಿ ಎಂಬುದನ್ನು ತೋರಿಸುತ್ತದೆ. ಒಂದು ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸಿದ್ದಾಗ ರಿಂಕು ಸಿಂಗ್ ಅವರ ಬ್ಯಾಟಿಂಗ್ ಕೌಶಲ್ಯವನ್ನು ನೋಡಿದ್ದೆವು. ಆದರೆ ಇಂದು ಬಹಳ ಸವಾಲಿನಿಂದ ಕೂಡಿತ್ತು" ಎಂದಿದ್ದಾರೆ ಬ್ರೇಟ್ ಲೀ.
IPL 2023: ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ RCB ತಂಡಕ್ಕೆ ಈ 4 ಆಟಗಾರರ ಪ್ರದರ್ಶನ ನಿರ್ಣಾಯಕ!
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 179 ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ನಾಯಕ ಧವನ್ ಅರ್ಧ ಶತಕ ಸಿಡಿಸಿದ್ದರು. ಈ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ಪರವಾಗಿ ನಾಯಕ ನಿತೀಶ್ ರಾಣಾ, ಆಂಡ್ರೆ ರಸೆಲ್ ಹಾಗೂ ರಿಂಕು ಸಿಂಗ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಕೊನೆಯ ಎಸೆತದಲ್ಲಿ ಕೆಕೆಆರ್ ಗೆದ್ದು ಬೀಗಿದೆ.












Click it and Unblock the Notifications