Jasprit Bumrah: ವಾಸಿಮ್ ಅಕ್ರಮ್ ದಾಖಲೆ ಅಳಿಸಿದ ಬುಮ್ರಾ

ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್‌ ನಡುವಣ ಮೊದಲ ಟೆಸ್ಟ್‌ ಪಂದ್ಯ ಲೀಡ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಬ್ಯಾಟರ್‌ಗಳು ಆರ್ಭಟ ನಡೆಸುತ್ತಿದ್ದಾರೆ. ಭಾರತದ ಪರ ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ರಿಷಭ್‌ ಪಂತ್‌ ಶತಕ ಬಾರಿಸಿ ಮಿಂಚಿದರು. ಮೊದಲ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್ ತಂಡದ ಬ್ಯಾಟರ್‌ಗಳಿಗೆ ಬುಮ್ರಾ ಬಹುವಾಗಿ ಕಾಡಿದರು. ಇವರು ಬಿದ್ದ ಮೂರು ವಿಕೆಟ್‌ಗಳನ್ನು ಪಡೆದು ಹೊಸ ಇತಿಹಾಸ ನಿರ್ಮಿಸಿದರು.

ಶನಿವಾರ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 3 ವಿಕೆಟ್‌ಗೆ 359 ರನ್‌ಗಳಿಂದ ಮುಂದುವರೆಸಿ 471 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್ ತಂಡ ದಿನದಾಟದಂತ್ಯಕ್ಕೆ 3 ವಿಕೆಟ್‌ಗೆ 209 ರನ್‌ ಸೇರಿಸಿತು. ಓಲಿ ಪೋಪ್ ಅಜೇಯ 100 ಹಾಗೂ ಹ್ಯಾರಿ ಬ್ರೂಕ್‌ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಶನಿವಾರ ಬುಮ್ರಾ ಮೂರು ವಿಕೆಟ್‌ ಪಡೆಯುವ ಮೂಲಕ ದಾಖಲೆ ಬರೆದರು.

India vs England Test Bumrah Breaks Akram s Record as Batters Dominate

ಟೀಮ್ ಇಂಡಿಯಾದ ಪ್ರಸಿದ್ಧ ಕೃಷ್ಣಾ, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್‌ ವಿಕೆಟ್‌ ಪಡೆಯುವಲ್ಲಿ ವಿಫಲರಾದರು. ಆದರೆ ಜಸ್ಪ್ರಿತ್ ಬುಮ್ರಾ ಮೂರು ವಿಕೆಟ್‌ ಪಡೆದು ಅಬ್ಬರಿಸಿದರು. ಇವರು ಈ ಮೂಲಕ ಪಾಕಿಸ್ತಾನದ ದಿಗ್ಗಜ ವೇಗದ ಬೌಲರ್ ವಾಸಿಮ್ ಅಕ್ರಮ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಸೇನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಏಷ್ಯಾ ಬೌಲರ್‌ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು.

ಮೊದಲ ಇನಿಂಗ್ಸ್‌ನಲ್ಲಿ ಬುಮ್ರಾ ಬೆನ್ ಡಕೆಟ್‌, ಜಾಕ್‌ ಕ್ರಾಲಿ ಅವರ ವಿಕೆಟ್‌ ಪಡೆಯುತ್ತಿದ್ದಂತೆ ಸೇನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಏಷ್ಯನ ಬೌಲರ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ವಾಸಿಮ್ ಅಕ್ರಮ್ (146), ಅನಿಲ್ ಕುಂಬ್ಳೆ (141), ಇಶಾಂತ್ ಶರ್ಮಾ (130) ಮತ್ತು ಮೊಹಮ್ಮದ್ ಶಮಿ (123) ನಂತರದ ಸ್ಥಾನದಲ್ಲಿದ್ದಾರೆ.

India vs England Test Bumrah Breaks Akram s Record as Batters Dominate

ಬೆಸ್ಟ್‌ ಬೌಲರ್‌

ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅವರನ್ನು ವಿಶ್ವದ ಅತ್ಯುತ್ತಮ ಬೌಲರ್‌ ಎಂದು ಬೆನ್ ಡಕೆಟ್‌ ತಿಳಿಸಿದ್ದಾರೆ. ಬುಮ್ರಾ ಅವರನ್ನು ಎದುರಿಸುವುದು ತುಂಬ ಕಷ್ಟ. ಇವರು ಎರಡೂ ಕಡೆಗಳಲ್ಲಿ ಸ್ವಿಂಗ್ ಮಾಡುವ ಬೌಲರ್. ಇವರು ಯಾವುದೇ ಸೂಚನೆ ಇಲ್ಲದೆ ಮೂರು ಅಥವಾ ನಾಲ್ಕು ವಿಭಿನ್ನ ಎಸೆತಗಳನ್ನು ಎಸೆಯುವ ಅವರ ಸಾಮರ್ಥ್ಯ ಅದ್ಭುತ. ಇವರ ಕೈಯನ್ನು ನೋಡಿದರೆ ಇವರು ಯಾವ ಎಸೆತವನ್ನು ಎಸೆಯುತ್ತಾರೆ ಎಂಬುದನ್ನು ಅಂದಾಜಿಸುವುದು ಕಷ್ಟ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+