Glenn Maxwell: ಟ್ರಾವಿಸ್ ಹೆಡ್‌ರನ್ನು ಕೆಣಕಿದ ಮ್ಯಾಕ್ಸ್‌ವೆಲ್; ಮೈದಾನದಲ್ಲೇ ಆಸ್ಟ್ರೇಲಿಯಾ ಆಟಗಾರರ ಕಿತ್ತಾಟ
ಶನಿವಾರ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಭರ್ಜರಿ ಗೆಲುವು ಸಾಧಿಸಿ, ಮತ್ತೆ ಗೆಲುವಿನ ಹಳಿಗೆ ಮರಳಿದೆ. ಸತತ ನಾಲ್ಕು ಪಂದ್ಯಗಳನ್ನು ಸೋತಿದ್ದ ಸನ್‌ರೈಸರ್ಸ್ ಬೃಹತ್ ಮೊತ್ತವನ್ನು ಚೇಸ್ ಮಾಡಿ ಗೆದ್ದಿರುವುದು ತಂಡದ ವಿಶ್ವಾಸವನ್ನು ಹೆಚ್ಚಿಸಿದೆ. ಈ ಪಂದ್ಯದ ವೇಳೆ ಆಸ್ಟ್ರೇಲಿಯಾ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದ್ದು ಗಮನ ಸೆಳೆಯಿತು.
246 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ಸ್ಫೋಟಕ ಆರಂಭ ಪಡೆಯಿತು. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಪಂಜಾಬ್ ಕಿಂಗ್ಸ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. ಪಂಜಾಬ್‌ನ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಹೆಡ್ ಬೌಂಡರಿ ಬಾರಿಸಿ ಅಬ್ಬರಿಸಿದರು, ಈ ಸಂದರ್ಭದಲ್ಲಿ ಹೆಡ್ ಒಂದು ಚೆಂಡನ್ನು ಡಿಫೆಂಡ್ ಮಾಡಿದರು, ಬೌಲಿಂಗ್ ಮಾಡುತ್ತಿದ್ದ ಮ್ಯಾಕ್ಸ್‌ವೆಲ್ ಚೆಂಡನ್ನು ಹಿಡಿದು ಕೀಪರ್ ಕಡೆಗೆ ಎಸೆದರು. ಅದೃಷ್ಟವಶಾತ್ ಚೆಂಡು ಹೆಡ್‌ಗೆ ಬೀಳಲಿಲ್ಲ, ಈ ಸಂದರ್ಭದಲ್ಲಿ ಹೆಡ್ ಸಿಟ್ಟಾದರು, ಮ್ಯಾಕ್ಸ್‌ವೆಲ್ ವಿರುದ್ಧ ಜೋರಾಗಿ ಕಿರುಚಿದರು.

ಒಂಬತ್ತನೇ ಓವರ್‌ನ ಕೊನೆಯಲ್ಲಿ ಹೆಡ್ ಮತ್ತು ಮ್ಯಾಕ್ಸ್‌ವೆಲ್ ನಡುವೆ ಮಾತಿನ ಚಕಮಕಿ ನಡೆಯಿತು. ಟ್ರಾವಿಸ್ ಹೆಡ್ ಮತ್ತೆ ಮ್ಯಾಕ್ಸ್‌ವೆಲ್‌ರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಅಂಪೈರ್ ಅವರನ್ನು ಬೇರ್ಪಡಿಸುವ ಮೊದಲು ಸ್ಟೊಯಿನಿಸ್ ಕೂಡ ಅಲ್ಲಿಗೆ ಬಂದರು. ಬಳಿಕ ಮೂವರು ಮಾತಿನ ಚಕಮಕಿ ನಡೆಸಿದರು. ಆದರೂ ಕೊನೆಯಲ್ಲಿ ಮೂವರು ತಮಾಷೆ ಮಾಡಿದಂತೆ ಕಂಡಿತು.
ಪಂದ್ಯದ ಬಳಿಕ ಮಾತನಾಡಿದ ಟ್ರಾವಿಸ್ ಹೆಡ್, ಮ್ಯಾಕ್ಸ್‌ವೆಲ್ ಮತ್ತು ಸ್ಟೊಯಿನಿಸ್ ಅವರೊಂದಿಗಿನ ಜಗಳದ ಬಗ್ಗೆ ಮಾತನಾಡಿದರು, "ನೀವು ಅವರನ್ನು ಚೆನ್ನಾಗಿ ಅರಿತಿದ್ದಾಗ ಮಾತ್ರ ಪರಸ್ಪರ ಒಳ್ಳೆಯದಯ ಮತ್ತು ಕೆಟ್ಟದ್ದನ್ನು ಹೊರತರುತ್ತೀರಿ, ತುಂಬಾ ಗಂಭೀರವಾಗಿ ಏನೂ ಇಲ್ಲ, ತಮಾಷೆಗಾಗಿ ಮಾಡಿದ್ದು" ಎಂದು ಹೇಳಿದರು.












Click it and Unblock the Notifications