ODI World Cup: ಬಿಸಿಸಿಐ ವಿರುದ್ಧ ಅಭಿಮಾನಿಗಳ ವ್ಯಾಪಕ ಆಕ್ರೋಶ
ಏಕದಿನ ವಿಶ್ವಕಪ್ 2023ರ ಫೈನಲ್‌ನಲ್ಲಿ ಭಾರತ ಸೋಲನುಭವಿಸುವ ಮೂಲಕ ಶತಕೋಟಿ ಭಾರತೀಯರ ಕನಸಿಗೆ ತಣ್ಣೀರೆರಚಿದೆ. ಒಂದು ದಶಕದ ನಂತರ ಐಸಿಸಿ ಕಪ್ ಗೆಲ್ಲುವ ಸನಿಹ ಬಂದಿದ್ದ ಭಾರತ ಕೊನೆ ಹಂತದಲ್ಲಿ ಎಡವಿತು.
ಈ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಆಡಿದ ರೀತಿ ನೋಡಿದವರಿಗೆ ಅನಿಸಿದ್ದು, ಈ ತಂಡ ವಿಶ್ವಕಪ್ ಗೆಲ್ಲಬೇಕು ಎಂದು. ಆದರೆ, ಕೊನೆಯ ಪಂದ್ಯದಲ್ಲಿ ನಿರೀಕ್ಷೆಗಳೆಲ್ಲಾ ಉಲ್ಟಾ ಆಗಿತ್ತು. 1 ಲಕ್ಷ 30 ಸಾವಿರ ಭಾರತೀಯ ಅಭಿಮಾನಿಗಳ ಎದುರು ಅಬ್ಬರಿಸಿದ ಆಸ್ಟ್ರೇಲಿಯನ್ನರ್ 6ನೇ ಬಾರಿ ವಿಶ್ವಕಪ್ ಗೆದ್ದು ಇತಿಹಾಸ ಬರೆದರು.

ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿರ್ಣಾಯಕ ಪಂದ್ಯಕ್ಕಾಗಿ ನಿಧಾನ ಮತ್ತು ಬಳಸಿದ ಪಿಚ್ ಅನ್ನು ಆಯ್ಕೆ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ನಿಧಾನಗತಿಯ ಪಿಚ್ ಕೊಟ್ಟಿದ್ದೇಕೆ?
ಫೈನಲ್‌ನಲ್ಲಿ ಬಳಸಲಾದ ಪಿಚ್‌ನಲ್ಲಿ ಭಾರತವು ಲೀಗ್ ಹಂತದಲ್ಲಿ ಪಾಕಿಸ್ತಾನವನ್ನು ಎದುರಿಸಿತ್ತು. ಇಲ್ಲಿ ಸುಲಭವಾಗಿ ರನ್ ಗಳಿಸಲು ಸಾಧ್ಯವಿಲ್ಲ ಎಂದು ತಿಳಿದಿತ್ತು, ಚೇಸಿಂಗ್ ಮಾಡುವ ತಂಡ ಸುಲಭವಾಗಿ ಗೆಲ್ಲುತ್ತದೆ ಎನ್ನುವುದನ್ನು ಇಲ್ಲಿನ ಇತಿಹಾಸ ಹೇಳಿರುವಾಗ ಫೈನಲ್ ಪಂದ್ಯಕ್ಕೆ ಉತ್ತಮ ಬ್ಯಾಟಿಂಗ್ ವಿಕೆಟ್ ನೀಡಬೇಕಿತ್ತು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಖಿಲ್ ಕೊಂಡಜ್ಜಿ ಎನ್ನುವ ಟ್ವಿಟರ್ ಬಳಕೆದಾರರು ಪ್ರತಿಕ್ರಿಯೆ ನೀಡಿ, "ಪಂದ್ಯಾವಳಿಯಲ್ಲಿ ವಿಶ್ವ ದರ್ಜೆಯ ಕ್ರಿಕೆಟ್ ಆಡಿದ ಭಾರತ ತಂಡದ ಬಗ್ಗೆ ಹೆಮ್ಮೆಯಿದೆ. ನಮ್ಮ ಬ್ಯಾಟ್ಸ್‌ಮನ್‌ಗಳು 300+ ರನ್ ಗಳಿಸುತ್ತಿದ್ದಾಗ ಮತ್ತು ನಮ್ಮ ವೇಗದ ಬೌಲರ್‌ಗಳು ಎದುರಾಳಿಗಳನ್ನು ವೇಗದ ವಿಕೆಟ್‌ಗಳ ಮೇಲೆ ಬೌಲಿಂಗ್ ಮಾಡುತ್ತಿದ್ದಾಗ ಬಿಸಿಸಿಐ ಫೈನಲ್‌ಗೆ ನಿಧಾನವಾದ ಒಣ ಪಿಚ್ ಅನ್ನು ಸಿದ್ಧಪಡಿಸುವಷ್ಟು ಮೂರ್ಖವಾಗಿತ್ತು. ಅದು ನಮಗೆ ತಿರುಗುಬಾಣವಾಯಿತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶೇಖರ್ ಖಡ್ಕ ಎನ್ನುವವರು ಟ್ವೀಟ್ ಮಾಡಿ, "ರೋಹಿತ್ ಶರ್ಮಾ ಸಂಪೂರ್ಣವಾಗಿ ಈ ಪ್ರಶಸ್ತಿಗೆ ಅರ್ಹರು. ಈ ದೊಡ್ಡ ಫೈನಲ್‌ನಲ್ಲಿ ಐಸಿಸಿ ಮತ್ತು ಬಿಸಿಸಿಐ ಈ ರೀತಿಯ ನಿಧಾನಗತಿಯ ಪಿಚ್ ಅನ್ನು ಹೇಗೆ ಬಳಸಬಹುದೆಂದು ನನಗೆ ತಿಳಿದಿಲ್ಲ, ಅಲ್ಲಿ ಟಾಸ್ ಗೆದ್ದ ತಂಡವು ಎರಡನೇ ಇನಿಂಗ್ಸ್‌ನಲ್ಲಿನ ಭಾರಿ ಇಬ್ಬನಿ ಅಂಶವನ್ನು ಪರಿಗಣಿಸಿ ಎರಡನೇ ತಂಡ ಸಂಪೂರ್ಣ ಲಾಭ ಪಡೆಯುತ್ತದೆ" ಎಂದು ಹೇಳಿದ್ದಾರೆ.
ಈ ರೀತಿ ಮಾಡಿದ್ದು ಇದೇ ಮೊದಲಲ್ಲ
ಪಿಚ್ ನಿರ್ಮಾಣ ವಿಚಾರದಲ್ಲಿ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವುದು ಇದೇ ಮೊದಲಲ್ಲ. ಮುಂಬೈನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ವೇಳೆ, ಪಿಚ್ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು. ಆರಂಭದಲ್ಲಿ, ಐಸಿಸಿ ಸಲಹೆಗಾರ ಆಂಡಿ ಅಟ್ಕಿನ್ಸನ್ ಅವರ ಮೌಲ್ಯಮಾಪನವು ನಿರ್ಣಾಯಕ ಪಂದ್ಯಗಳಿಗೆ ಪಿಚ್ ಸಂಖ್ಯೆ ಏಳನ್ನು ಆಯ್ಕೆ ಮಾಡಲು ಕಾರಣವಾಯಿತು.
ಆದರೂ, ಆಯ್ಕೆಯಾದ ಪಿಚ್‌ನಲ್ಲಿ ಕೊನೆಯ ಕ್ಷಣದಲ್ಲಿ ಬದಲಾವಣೆ ಕಂಡುಬಂದಿದೆ, ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಮತ್ತು ಭಾರತ-ಶ್ರೀಲಂಕಾ ಪಂದ್ಯಗಳಿಗೆ ಪಂದ್ಯಾವಳಿಯಲ್ಲಿ ಈಗಾಗಲೇ ಎರಡು ಬಾರಿ ಬಳಸಲಾಗಿದ್ದ ಪಿಚ್ ಸಂಖ್ಯೆ ಆರರಲ್ಲಿ ಆಡಿಸಬೇಕಿತ್ತು. ಅದೇನೇ ಇದ್ದರೂ, ವಾಂಖೆಡೆ ಸ್ಟೇಡಿಯಂನಲ್ಲಿ ಸಂಪೂರ್ಣವಾಗಿ ಸೂಕ್ತವಾದ ಬ್ಯಾಟಿಂಗ್ ವಿಕೆಟ್ ಅನ್ನು ಸಿದ್ಧಪಡಿಸಿದ್ದರಿಂದ ಸಮಸ್ಯೆಯನ್ನು ತ್ವರಿತವಾಗಿ ಸರಿಪಡಿಸಲಾಯಿತು.












Click it and Unblock the Notifications