RCB ಮೂರು ಪ್ಲೇಯರ್ ಉಳಿಸಿಕೊಳ್ಳಲು ಪ್ಲ್ಯಾನ್: ಲೀಸ್ಟ್‌ನಲ್ಲಿದ್ದಾರೆ ಒಬ್ಬ ವಿದೇಶಿ ಆಲ್‌ರೌಂಡರ್
ಐಪಿಎಲ್ 2025ರ ಸಿದ್ಧತೆಗಳು ಈಗಾಗಲೇ ತೆರೆ ಮರೆಯಲ್ಲಿ ಭರದಿಂದ ಸಾಗಿವೆ. ಈ ಬಾರಿ ಮೆಗಾ ಹರಾಜು ನಡೆಯಲಿದ್ದು, ತಂಡಗಳು ಯಾರನ್ನು ರಿಟೇನ್ ಮಾಡಿಕೊಳ್ಳುತ್ತವೆ. ಹಾಗೂ ಯಾರನ್ನು ರಿಲೀಸ್ ಮಾಡುತ್ತವೆ ಎಂಬ ಲೆಕ್ಕಾಚಾರ ಈಗ ಶುರವಾಗಿದೆ. ಆರ್‌ಸಿಬಿ ಅಭಿಮಾನಿಗಳು ಸಹ ಈ ಲೆಕ್ಕಾಚಾರ ನಡೆಸಿದ್ದಾರೆ.
2024ರ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಕ್ವಾಲಿಫೈಗೆ ಅರ್ಹತೆ ಪಡೆದಿದ್ದ ಆರ್‌ಸಿಬಿ ಮೇಲೆ ಅಭಿಮಾನಿಗಳು ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಐಪಿಎಲ್ ಪ್ರಶಸ್ತಿ ಬರವನ್ನು ಕೊನೆಗಳಿಸಲು ಆರ್‌ಸಿಬಿ ಮ್ಯಾನೇಜ್ಮೆಂಟ್ ಸಹ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಆರ್‌ಸಿಬಿ ತಂಡ ಯಾರನ್ನು ಕೈ ಬಿಡುತ್ತದೆ, ಯಾರನ್ನು ಉಳಿಸಿಕೊಳ್ಳುತ್ತದೆ ಎಂಬ ಕುತೂಹಲ ಮನೆ ಮಾಡಿದೆ.

ಈ ಬಾರಿ ಆರ್‌ಸಿಬಿ ಅಳೆದು ತೂಗಿ ಆಟರರನ್ನು ಉಳಿಸಿಕೊಳ್ಳಲು ಪ್ಲ್ಯಾನ್ ಮಾಡಿದೆ. ಈ ಬಗ್ಗೆ ಮ್ಯಾನೇಜ್ಮೆಂಟ್ ಕ್ಲೀಯರ್ ಪಿಶ್ಚರ್ ತೆಗೆದುಕೊಂಡಂತೆ ಕಾಣುತ್ತಿದೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಅಬ್ಬರಿಸಿದ ಯುವ ಆಟಗಾರರಿಗೆ ಆರ್‌ಸಿಬಿ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇನ್ನು ಯುವ ಆಟಗಾರರನ್ನು ಉಳಿಸಿಕೊಂಡು, ಭವಿಷ್ಯದ ತಂಡವನ್ನು ಕಟ್ಟುವ ಇರಾದೆ ಬೆಂಗಳೂರು ತಂಡದ್ದಾಗಿದೆ.
ಆರ್‌ಸಿಬಿ ತಂಡದಲ್ಲಿ ಯಾರಾಗ್ತಾರೆ ರಿಟೇನ್
ಆರ್‌ಸಿಬಿ ತಂಡದ ಆಧಾರ ಸ್ಥಂಭ ಎಂದೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಳಿಸಿಕೊಳ್ಳುವುದು ಪಕ್ಕಾ. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ವಿರಾಟ್ ನಾಯಕತ್ವದಲ್ಲೇ ಕಣಕ್ಕೆ ಇಳಿಯುವ ಲೆಕ್ಕಾಚಾರಗಳು ಆರಂಭವಾಗಿವೆ.
ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ವಿರಾಟ್ ಕೊಹ್ಲಿ ಅವರನ್ನು ಉಳಿಸಿಕೊಳ್ಳುವುದು ಕನ್ಫರ್ಮ್. ಇನ್ನು ನಾಯಕ ಫಾಫ್ ಡುಪ್ಲೇಸಿಸ್ ಅವರನ್ನು ಕೈ ಬಿಡುವ ಸಾಧ್ಯತೆಗಳು ದಟ್ಟವಾಗಿವೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬಿದ್ದ ಭಾರತೀಯ ಆಟಗಾರನಿಗೆ ಮಣೆ ಹಾಕಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ.

ರಜತ್ ಪಟೀದಾರ್
ಇನ್ನುಆರ್‌ಸಿಬಿ ಮೆಗಾ ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ ಅವರನ್ನು ಬಿಟ್ಟರೆ, ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರು ರಜತ್ ಪಟೀದಾರ. ಇವರು ಭರ್ಜರಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಧಾರವಾಗಿದ್ದಾರೆ. ಅಲ್ಲದೆ ಕಳೆದ ಐಪಿಎಲ್‌ನಲ್ಲಿ ಅಮೋಘ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ್ದಾರೆ. ಹೀಗಾಗಿ ಇವರನ್ನು ಉಳಿಸಿಕೊಳ್ಳುವುದು ಸಹ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.
ವಿದೇಶಿ ಆಟಗಾರನಿಗೆ ಮಣೆ
ಆರ್‌ಸಿಬಿ ಇನ್ನೊಬ್ಬ ಆಟಗಾರನನ್ನು ಅಳೆದು ತೂಗಿ ಉಳಿಸಿಕೊಳ್ಳಲು ಪ್ಲ್ಯಾನ್ ಮಾಡಿದೆ. ಇದರಂತೆ ವಿದೇಶಿ ಆಟಗಾರ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲೂ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್. ಈ ಪಟ್ಟಿಯಲ್ಲಿ ಗ್ಲೇನ್ ಮ್ಯಾಕ್ಸ್‌ವೆಲ್ ಸಹ ಕಾಣಿಸಿಕೊಳ್ಳುತ್ತಾರೆ. ಆದರೆ ಇವರನ್ನು ಉಳಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ. ಕಳೆದ ಋತುವಿನಲ್ಲಿ ಇವರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರನ್ನು ಕೈ ಬಿಡು ಚಾನ್ಸ್ ಹೆಚ್ಚಿದೆ.
ಇನ್ನು ಕಳೆದ ಐಪಿಎಲ್ ಋತುವಿನಲ್ಲಿ ಆರ್‌ಸಿಬಿ ತಂಡ ಸೇರಿದ್ದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಹಾರಜಿನ ಅಖಾಡಕ್ಕೆ ಬಿಡುವ ಸಾಧ್ಯತೆ ಹೆಚ್ಚಿದೆ. ಇವರನ್ನು ಮುಂಬೈನಿಂದ ಭಾರೀ ಮೊತ್ತ ನೀಡಿ ಟ್ರೇಡ್ ಮಾಡಿತ್ತು. ಆದರೆ ಇವರು ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡುವಲ್ಲಿ ವಿಫಲರಾಗಿದ್ದಾರೆ.

ಇಂಗ್ಲೆಂಡ್ ಆಟಗಾರನಿಗೆ ಆದ್ಯತೆ
ಇಂಗ್ಲೆಂಡ್ ತಂಡದ ಆಲ್‌ರೌಂಡರ್ ವಿಲ್ ಜಾಕ್ಸ್‌ಗೆ ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶ ಸಾಧ್ಯತೆ ಹೆಚ್ಚಿದೆ. ಇವರು ಮಿಡ್ಲ್ ಆರ್ಡರ್‌ನಲ್ಲಿ ಹಿಂದಿನ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಲ್ಲದೇ, ಸ್ಪಿನ್ ಬೌಲಿಂಗ್ ಸಹ ಮಾಡಿ ತಂಡಕ್ಕೆ ನೆರವಾಗಿದ್ದರು.












Click it and Unblock the Notifications