ಚುನಾವಣೆ ಗೆಲುವಿಗೆ ವರುಷ; ಮಹಾ ಸಂಕಲ್ಪ ತಿಳಿಸಿದ ಬಿವೈ ವಿಜಯೇಂದ್ರ
ಶಿವಮೊಗ್ಗ, ಮೇ 14: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಪ್ರಕಟವಾಗಿ ಒಂದು ವರ್ಷ ಕಳೆದಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಚುನಾವಣೆಯಲ್ಲಿ ಸೋಲು ಕಂಡಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಚುನಾವಣೆಯಲ್ಲಿ ಹಲವಾರು ಅಭ್ಯರ್ಥಿಗಳು ಮೊದಲ ಬಾರಿಗೆ ಶಾಸಕರಾದರು. ಅವರಲ್ಲಿ ಬಿ. ವೈ. ವಿಜಯೇಂದ್ರ ಸಹ ಒಬ್ಬರು.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ 2023ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿದರು. ಶಿಕಾರಿಪುರ ಕ್ಷೇತ್ರದಿಂದ ಕಣಕ್ಕಿಳಿದ ಅವರು ಚುನಾವಣೆಯಲ್ಲಿ 81,810 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾದರು.

ಚುನಾವಣಾ ಫಲಿತಾಂಶ ಪ್ರಕಟಗೊಂಡು ಒಂದು ವರ್ಷವಾದ ಹಿನ್ನಲೆಯಲ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. 'ನನ್ನ ಕುಟುಂಬವೇ ಆಗಿರುವ ಶಿಕಾರಿಪುರದ ಸಹೃದಯ ಬಂಧುಗಳ ಧ್ವನಿಯಾಗಿ ನಿಲ್ಲುವೆ' ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಪ್ರಕಟಗೊಂಡ ಕೆಲವೇ ತಿಂಗಳುಗಳ ಬಳಿಕ ಬಿಜೆಪಿ ಬಿ. ವೈ. ವಿಜಯೇಂದ್ರರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಲೋಕಸಭೆ ಚುನಾವಣೆಯನ್ನು ಅವರ ನೇತೃತ್ವದಲ್ಲಿಯೇ ಎದುರಿಸಲಾಗಿದೆ. ಶಿಕಾರಿಪುರ ಕ್ಷೇತ್ರದ ಅಭಿವೃದ್ಧಿಯ ಜೊತೆ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯೂ ಈಗ ವಿಜಯೇಂದ್ರ ಮೇಲಿದೆ.
ವಿಜಯೇಂದ್ರ ಪೋಸ್ಟ್: ಶಿಕಾರಿಪುರದ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, 'ಶಿಕಾರಿಪುರದ ಮಹಾಜನತೆ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿ ಇಂದಿಗೆ ಒಂದು ವರ್ಷ. ಮಾನ್ಯ BS Yediyurappa ಅವರಂತೆ ನನ್ನ ಮೇಲೂ ಅಗಾಧ ವಿಶ್ವಾಸವಿರಿಸಿ ಆಶೀರ್ವಾದ ಮಾಡಿದ್ದರ ಪ್ರತಿಫಲವೋ ಅಥವಾ ಪೂರ್ವಜನ್ಮದ ಸುಕೃತವೋ ಎಂಬಂತೆ ಜನರ ನಿರೀಕ್ಷೆಯಂತೆ ಸಾಗುವ ಹಾದಿಯಲ್ಲಿ ಪಕ್ಷದ ವರಿಷ್ಠರು ರಾಜ್ಯಾಧ್ಯಕ್ಷ ಸ್ಥಾನ ನೀಡಿ ಮಹತ್ವದ ಜವಾಬ್ದಾರಿ ಹೆಗಲಿಗೇರಿಸಿದರು' ಎಂದು ಹೇಳಿದ್ದಾರೆ.
'ಗುರುತರ ಜವಾಬ್ದಾರಿ ಹೆಗಲಿಗೇರಿದ ಬೆನ್ನಲ್ಲೇ ರಾಜ್ಯದ ಪಕ್ಷದ ಕಾರ್ಯಕರ್ತ ಬಂಧುಗಳು ಹೇಗೆ ಸಹಕಾರ ಕೊಟ್ಟರೋ, ಅದಕ್ಕೂ ಮಿಗಿಲಾಗಿ ಶಿಕಾರಿಪುರದ ಮತದಾರ ಬಂಧುಗಳು ಅಷ್ಟೇ ಪ್ರೀತಿ, ವಿಶ್ವಾಸವಿಟ್ಟು ಬೆಂಬಲಪೂರ್ವಕವಾಗಿ ಜತೆ ನಿಂತಿದ್ದಾರೆ. ಜನಪ್ರತಿನಿಧಿಗಳಾಗಿ ಜನರ ಕಷ್ಟ ಕಾರ್ಪಣ್ಯಗಳನ್ನು ಆಲಿಸುವುದು ನಮ್ಮ ಕರ್ತವ್ಯ, ಅನಿರೀಕ್ಷಿತವಾಗಿ ಎದುರಾದ ಬರ ರೈತರನ್ನು, ಶ್ರಮಿಕ ವರ್ಗದ ಜನರನ್ನು ಕೊಂಚ ಬಾಧಿಸಿದೆ, ಲೋಕಸಮರ ಮುಗಿದ ಬೆನ್ನಲ್ಲೇ ಎಲ್ಲೆಡೆ ವರ್ಷಧಾರೆಯ ಸಿಂಚನ ಭೂತಾಯ ಒಡಲನ್ನು ತಂಪೆರೆಯುವ ಮೂಲಕ ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿಸಿದೆ' ಎಂದು ತಿಳಿಸಿದ್ದಾರೆ.
ಶಿಕಾರಿಪುರದ ಮಹಾಜನತೆ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿ ಇಂದಿಗೆ ಒಂದು ವರ್ಷ. ಮಾನ್ಯ @BSYBJP ಅವರಂತೆ ನನ್ನ ಮೇಲೂ ಅಗಾಧ ವಿಶ್ವಾಸವಿರಿಸಿ ಆಶೀರ್ವಾದ ಮಾಡಿದ್ದರ ಪ್ರತಿಫಲವೋ ಅಥವಾ ಪೂರ್ವಜನ್ಮದ ಸುಕೃತವೋ ಎಂಬಂತೆ ಜನರ ನಿರೀಕ್ಷೆಯಂತೆ ಸಾಗುವ ಹಾದಿಯಲ್ಲಿ ಪಕ್ಷದ ವರಿಷ್ಠರು ರಾಜ್ಯಾಧ್ಯಕ್ಷ ಸ್ಥಾನ ನೀಡಿ ಮಹತ್ವದ ಜವಾಬ್ದಾರಿ…
— Vijayendra Yediyurappa (Modi Ka Parivar) (@BYVijayendra) May 14, 2024
'ಇನ್ನು ಮುಂದೆ ಉತ್ತಮ ಕಾಲದ ಆರಂಭವಾಗಲಿದೆ ಎಂಬ ಭರವಸೆಯೊಂದಿಗೆ ಸಾಗೋಣ, ನನ್ನ ಹೆಗಲ ಮೇಲೆ ಎಷ್ಟೇ ಎತ್ತರದ ಜವಾಬ್ದಾರಿ ಇದ್ದರೂ ನನ್ನ ಕುಟುಂಬವೇ ಆಗಿರುವ ಶಿಕಾರಿಪುರದ ಸಹೃದಯ ಬಂಧುಗಳ ಧ್ವನಿಯಾಗಿ ನಿಲ್ಲುವೆ, ಅಭಿವೃದ್ಧಿ ಕಾರ್ಯಗಳು ಸಾಗುತ್ತಲೇ ಇರುವಂತೆ ಕಣ್ಗಾವಲಾಗಿರುವೆ. ಶಿಕಾರಿಪುರ ಅಂದು, ಇಂದು, ಎಂದೆಂದಿಗೂ ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರವಾಗಿಯೇ ಕೊಂಡೊಯ್ಯುವುದು ನನ್ನ ಕರ್ತವ್ಯ ಹಾಗೂ ಮಹಾ ಸಂಕಲ್ಪ. ನಿಮ್ಮ ಹೃನ್ಮನಸ್ಸಿನ ಆಶೀರ್ವಾದವೇ ನನಗೆ ಶ್ರೀರಕ್ಷೆ' ಎಂದು ವಿಜಯೇಂದ್ರ ಪೋಸ್ಟ್‌ನಲ್ಲಿ ಹೇಳಿದ್ದಾರೆ.
2023ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಶಿಕಾರಿಪುರದ ಶಾಸಕ ಬಿ. ಎಸ್. ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿದರು. ಶಿಕಾರಿಪುರದಿಂದ ಬಿ. ವೈ. ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎಂದು ಘೋಷಣೆ ಮಾಡಿದರು. ಬಿಜೆಪಿ ಪಕ್ಷ ಸಹ ಅವರಿಗೆ ಟಿಕೆಟ್ ನೀಡಿತು.
ಚುನಾವಣೆಯಲ್ಲಿ ಬಿ. ವೈ. ವಿಜಯೇಂದ್ರ 81810 ಮತಗಳನ್ನು ಪಡೆದು ಜಯಗಳಿಸಿದರು. ಎದುರಾಳಿಯಾಗಿದ್ದ ಕಾಂಗ್ರೆಸ್‌ನ ಗೋಣಿ ಮಾಲತೇಶ್ 8101 ಮತಗಳನ್ನು ಪಡೆದರು. ಪಕ್ಷೇತರ ಅಭ್ಯರ್ಥಿಯಾಗಿದ್ದ ಎಸ್. ಪಿ. ನಾಗರಾಜ್ ಗೌಡ 70802 ಮತಗಳನ್ನು ಪಡೆದರು. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಸ್ಪರ್ಧೆ ಕಾರಣಕ್ಕೆ ಕ್ಷೇತ್ರದ ಚುನಾವಣೆ ರಾಜ್ಯ, ರಾಷ್ಟ್ರದ ಗಮನ ಸೆಳೆದಿತ್ತು.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications