"ಭಾಷಣದಲ್ಲಲ್ಲ, ನಿಜವಾಗಿಯೂ ರೈಲು ಬಿಟ್ಟಿದ್ದೇವೆ"; ಬಿವೈ ರಾಘವೇಂದ್ರ
ಶಿವಮೊಗ್ಗ, ನವೆಂಬರ್ 12: "ನಾವು ಕೇವಲ ಭಾಷಣಗಳಲ್ಲಿ ರೈಲು ಬಿಡುವವರಲ್ಲ, ನಿಜವಾಗಿಯೂ ಬಿಟ್ಟಿದ್ದೇವೆ. ಕೆಲವರು ಭಾಷಣದಲ್ಲಿ ರೈಲು ಬಿಡುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಅವರ ಬಾಯಿ ಈಗ ಬಂದ್ ಆಗಿದೆ" ಎಂದು ಸಂಸದ ಬಿ.ವೈ. ರಾಘವೇಂದ್ರ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಶಿಕಾರಿಪುರ ಪಟ್ಟಣ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿ ಮಾತನಾಡಿದ ಅವರು "ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದ ಮೇಲೆ ಶಿವಮೊಗ್ಗದಿಂದ ಅಂತರ ರಾಜ್ಯ ರೈಲು ಸಂಪರ್ಕ ಆರಂಭವಾಗಿದೆ. ನಾನು ಸಂಸದನಾಗಿ ಈ ಕಾರ್ಯ ಸಾಧಿಸಲು ಶಿಕಾರಿಪುರ ಜನತೆಯ ಆಶೀರ್ವಾದ ಕಾರಣ. ಪುರಸಭೆ ಸದಸ್ಯನಾಗಿದ್ದ ನನ್ನನ್ನು ಇಲ್ಲಿಯವರೆಗೂ ಕೈ ಹಿಡಿದುಕೊಂಡು ಬಂದಿದ್ದೀರಿ" ಎಂದು ಧನ್ಯವಾದ ಹೇಳಿದರು.

"ಶಿವಮೊಗ್ಗದಿಂದ ಚೆನೈಗೆ ಹಾಗೂ ತಿರುಪತಿಗೆ ಅಂತರ ರಾಜ್ಯ ಹೊಸ ರೈಲುಗಳ ಆರಂಭವಾಗಿದ್ದು ಇತಿಹಾಸದಲ್ಲಿಯೇ ಇದೆ ಮೊದಲು. ರಾಜ್ಯ ಸರ್ಕಾರಕ್ಕೆ ನೂರು ದಿನ ತುಂಬುವಷ್ಟರಲ್ಲಿ ವಿಮಾನ ಹಾರಾಟ ನಡೆಸುವ ಯೋಜನೆಯೂ ಇದೆ. ಶಿವಮೊಗ್ಗದಲ್ಲಿ ಈಗಾಗಲೇ ವಿಮಾನ ನಿಲ್ದಾಣಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದ್ದು, ರಾಜ್ಯ ಬಿಜೆಪಿ ಸರ್ಕಾರಕ್ಕೆ 100 ದಿನ ತುಂಬುಷ್ಟರಲ್ಲಿ ಶಿವಮೊಗ್ಗದಲ್ಲಿ ವಿಮಾನ ಹಾರಡಲಿದೆ, ಇದು ಮಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಮಹತ್ವಾಕಾಂಕ್ಷೆ" ಎಂದು ಭರವಸೆ ನೀಡಿದರು.












Click it and Unblock the Notifications