Breaking: ಶಿವಮೊಗ್ಗ, ವಾಟ್ಸಪ್ ಸ್ಟೇಟಸ್‌ನಲ್ಲಿ ಡೆತ್‌ನೋಟ್ ಹಾಕಿದ್ದ ಯುವಕ ಶವವಾಗಿ ಪತ್ತೆ!
ಶಿವಮೊಗ್ಗ, ಸೆಪ್ಟೆಂಬರ್ 02: ಆನ್‌ಲೈನ್ ಟ್ರೆಡಿಂಗ್ ವಿಚಾರದಲ್ಲಿ ಆದ ನಷ್ಟ, ಲವ್ವರ್ ಸಿಕ್ಕಿಲ್ಲ ಎಂದು ಮನನೊಂದಿದ್ದ ಯುವಕನೊಬ್ಬ ವಾಟ್ಸಪ್ ಸ್ಟೇಟಸ್‌ನಲ್ಲಿ ಡೆತ್‌ನೋಟ್ ಹಾಕಿ ನಾಪತ್ತೆಯಾಗಿದ್ದ. ಯುವಕನ ಬೈಕ್ ತೀರ್ಥಹಳ್ಳಿಯ ತುಂಗಾ ನದಿ ಸೇತುವೆ ಬಳಿ ಪತ್ತೆಯಾಗಿತ್ತು. ಯುವಕ ನದಿಗೆ ಹಾರಿರಬಹುದು ಎಂದು ಶಂಕಿಸಲಾಗಿತ್ತು. ಈ ಪ್ರಕರಣ ದುರಂತರ ಅಂತ್ಯವಾಗಿದೆ. ಮೂರು ದಿನದ ಬಳಿಕ ಯುವಕನ ಶವ ಪತ್ತೆಯಾಗಿದೆ. ತೀರ್ಥಹಳ್ಳಿಯ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಹಣ ಕಳೆದುಕೊಂಡು ಡೆತ್‌ನೋಟ್ ಹಾಕಿ ಶನಿವಾರ ನಾಪತ್ತೆಯಾಗಿದ್ದ ತೀರ್ಥಹಳ್ಳಿಯ ಇಂದಾವರ ಗ್ರಾಮದ ಜಯದೀಪ್ (24) ಎಂಬ ಯುವಕನ ಶವ ಸೋಮವಾರ ಪತ್ತೆಯಾಗಿದೆ. ಮೂರು ಪುಟದ ಡೆತ್‌ನೋಟ್ ಅನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಯುವಕ ವಾಟ್ಸಪ್‌ನಲ್ಲಿ ಹಾಕಿ ನಾಪತ್ತೆಯಾಗಿದ್ದ. ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದರು.

ಸೋಮವಾರ ಜಯದೀಪ್ ಶವ ತೀರ್ಥಹಳ್ಳಿಯ ತುಂಗಾ ನದಿ ತೀರದ ಸ್ಮಶಾನಕಟ್ಟೆ ಬಳಿ ಪತ್ತೆಯಾಗಿದೆ. ವಾಟ್ಸಪ್ ಸ್ಟೇಟಸ್ ಡೆತ್‌ನೋಟ್‌ನಲ್ಲಿ ಹುಡುಗಿ ಸಿಕ್ಕಿಲ್ಲ ಎಂಬುದರ ಜೊತೆಗೆ ಆನ್‌ಲೈನ್ ಟ್ರೆಡಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದೇನೆ. ಸ್ನೇಹಿತರ ಬಳಿ ಸಾಲ ಮಾಡಿಕೊಂಡಿದ್ದೆ ಎಂದು ಬರೆದಿದ್ದ.
ಶನಿವಾರ ಯುವಕನ ಬೈಕ್ ತುಂಗಾ ನದಿ ದಂಡೆಯ ಮೇಲೆ ಪತ್ತೆಯಾಗಿತ್ತು. ಆಗಲೇ ನದಿಗೆ ಹಾರಿರಬಹುದು ಎಂಬ ಶಂಕೆ ಹಿನ್ನಲೆಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿತ್ತು. ಸೋಮವಾರ ಶವ ಪತ್ತೆಯಾಗಿದ್ದು, ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಮಾರಿ ಸಾಲ ತೀರಿಸಿ: ತೀರ್ಥಹಳ್ಳಿಯ ಇಂದಾವರ ಗ್ರಾಮದ ಜಯದೀಪ್ ವಾಟ್ಸಪ್ ಸ್ಟೇಟಸ್‌ನಲ್ಲಿ ಡೆತ್‌ನೋಟ್ ಹಾಕಿದ್ದ 90,000 ರೂ. ಸಾಲ ಮಾಡಿಕೊಂಡಿದ್ದೇನೆ. ಬೈಕ್ ಮಾರಿ ಸಾಲವನ್ನು ತೀರಿಸಿ ಎಂದು ಪೋಷಕರಿಗೆ ತಿಳಿಸಿದ್ದ. 'ನನ್ನ ಜೀವನಾನೇ ಒಂದು ರೀತಿ ಉಪ್ಪಿಲ್ಲದ ಊಟದ ರೀತಿ ಈ ಸುಮಾರು 3 ವರ್ಷದಿಂದ ಆಗಿದೆ. ನನ್ನ ಜೀವನದಲ್ಲಿ ವಯಸ್ಸು 24 ಆದರೂ ಹುಡುಗಿ ಅಂತ ಇಲ್ಲ. ಸಣ್ಣ ಸಣ್ಣ ಹುಡುಗರಿಗೆಲ್ಲ lover ಇದ್ರು ನನಗೆ ಇಲ್ಲ ಅನ್ನೋ ಬೇಜಾರು. oneside ಅಲ್ಲಿ ನಾನ್ ಒಬ್ಬಳನ್ನು love ಮಾಡಿದ್ದೆ. ಅವಳು ಒಪ್ಲಿಲ್ಲ. ಒಳ್ಳೆ ಕೆಲಸ ಹುಡುಕೋದ್ರಲ್ಲಾ ವಿಫಲವಾದೆ. ಇತ್ತೀಚಿನ ದಿನಗಳಲ್ಲಿ ಬರಿಸಾಲ ಮಾನಸಿಕ ಖಿನ್ನತೆ ನನ್ನ ಎಲ್ಲಾದರೂ ದೂರ ಹೋಗುವಂತೆ ಪ್ರೇರೇಪಿಸಿತು. ಊರು ಬಿಡೋಣ ಅಂತ ಮಾಡಿದೆ. ಆದರೆ ಊರು ಬಿಡೋಕ್ಕಿಂತ ಸಾವೇ ನನ್ನ ಮುನ್ನುಗ್ಗಿ ಕರೆಯಿತು' ಎಂದು ಹೇಳಿದ್ದ.
ಯುವಕ ಜಯದೀಪ್, 'ನನ್ನ ಒಂದು ಸಣ್ಣ ತಪ್ಪು ನನ್ನ ಇವತ್ತು ನನ್ನ ಸಾವಿನ ಕಡೇ ತಳ್ಳುತ್ತ ಇದೆ. money Thading Iinvestment ಅಂತ ಕಳೆದ 3 ದಿನದಲ್ಲಿ ಸಿಕ್ಬಿದ್ದೆ. ನನ್ನಂತ ತಿಳುವಳಿಕೆ ಇದ್ದವನು ಹೇಗೆ ಸಿಕ್ಕಿದ್ದೆ ಅಂತ ನಂಬಕ್ ಆಗ್ತಾ ಇಲ್ಲ. ಎಲ್ಲರ ಬಳಿ ಸಾಲಕ್ಕೆ ಬೇಡಿಕೆ ಇಟ್ಟೆ. ಸುಮಾರು ಜನದ ಬಳಿ ದುಡ್ಡು phone pay- google pay ಮಾಡುಸ್ಕೊಂಡೆ. ಸುಮಾರು 90000 ಸಾಲ ಮಾಡಿದೆ. ಪಾಪ ಅವರು ನನ್ ಮೇಲೆ ನಂಬಿಕೆ ಇಟ್ಟು ಕಳಸುದ್ರು. ಆದರೆ ಅವರ ನಂಬಿಕೆ ಉಳಿಸಿಕೊಳ್ಳಲು ನನಗೆ ಆಗಲಿಲ್ಲ. ಅವರು ಯಾರು ಹಣಕ್ಕಾಗಿ ಒತ್ತಾಯ ಮಾಡಲಿಲ್ಲ. ಆದರೇ ನನಗೇ ಒಂದು ರೀತಿ ಜಿಗುಪ್ಸೆವುಂಟಾಗುತ್ತಿದೆ. ಈ ಸಣ್ಣ ಅಮೌಂಟ್‌ಗಳು ನನಿಗೆ ದೊಡ್ಡ ವಿಷಯ ಯೇನು ಆಗಿರಲಿಲ್ಲ. ಆದರೆ ಎಲ್ಲರ ನಂಬಿಕೆ ಉಳಿಸಿಕೊಳ್ಳೋದು ನನಗೆ ಈ ಸಂದರ್ಭದಲ್ಲಿ ಕಷ್ಟ ಆಯಿತು' ಎಂದು ತಿಳಿಸಿದ್ದ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ 080 - 25497777.












Click it and Unblock the Notifications