ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೂರು ರೂ.ಕಳ್ಳತನ ಆರೋಪ : ವಿದ್ಯಾರ್ಥಿ ನೇಣಿಗೆ ಶರಣು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 15 : ಶಾಲೆಯಲ್ಲಿ ನೂರು ರೂಪಾಯಿ ಹಣ ಕದ್ದ ಆರೋಪದಿಂದ ಮನನೊಂದ ವಿದ್ಯಾರ್ಥಿಯೋಬ್ಬ ನೇಣಿಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಭೈರವೇಶ್ವರ ನಗರದ ಭೈರವೇಶ್ವರ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪವನ್(12) ಎಂದು ಗುರುತಿಸಲಾಗಿದೆ. ಸಹಪಾಠಿಯ ಬಳಿ ಇದ್ದ ನೂರು ರು ಅನ್ನು ಪವನ್ ಕಳ್ಳತನ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಇದರಿಂದ ಮನನೊಂದ ಪವನ್ ಶಾಲಾ ಸಮವಸ್ತ್ರದಲ್ಲೇ ನೇಣಿಗೆ ಶರಣಾಗಿದ್ದಾನೆ. ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಪಿಗ್ಗಿ ಬಿದ್ದ ಮುಂಬೈ ಪೊಲೀಸರು, ಕಿಲಾಡಿ ಕೊಲೆಗಾರನ ಗ್ರೇಟ್ ಎಸ್ಕೇಪ್!]

students accused of stealing of rs 100, school boy commit to suicide himself

ಬಸ್ ಹರಿದು ಸ್ಥಳದಲ್ಲೇ ಹೋಂಡಾ ಆಕ್ಟಿವಾ ಸವಾರ ಸಾವು, ಆರೋಪಿ ಬಂಧನ

ಮೈಸೂರು: ಹೋಂಡಾ ಆಕ್ಟಿವಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಗುದ್ದಿ, ಆಕ್ಟಿವಾ ಸವಾರನ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ಮೈಸೂರಿನಲ್ಲಿ ಜರುಗಿದೆ.
ಮೃತನನ್ನು ಮೂಲತಃ ಗೌರಿಬಿದನೂರು ನಿವಾಸಿ, ಪ್ರಸ್ತುತ ಬೋಗಾದಿಯಲ್ಲಿ ವಾಸವಿರುವ ಅಶೋಕ್ (36) ಎಂದು ಗುರುತಿಸಲಾಗಿದೆ. ಬೋಗಾದಿಯಲ್ಲಿ ಬಾಡಿಗೆ ಮನೆಯಲ್ಲಿದ್ದ ಈತ ಕೆಲಸ ಮುಗಿಸಿ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಬೋಗಾದಿ-ದೂರ ಗ್ರಾಮದ ಮುಖ್ಯರಸ್ತೆಯಲ್ಲಿ ಅಡಕನಹಳ್ಳಿಗೆ ತೆರಳುತ್ತಿದ್ದ ಬಸ್ ಆಕ್ಟಿವಾ ಸವಾರನಿಗೆ ಗುದ್ದಿದೆ. ಆತ ತನ್ನ ವಾಹನದಿಂದ ಬಿದ್ದ ಕೂಡಲೇ ಆತನ ಮೈಮೇಲೆ ಬಸ್ ಹರಿದಿದೆ ಎನ್ನಲಾಗಿದೆ. ಬಸ್ ಚಾಲಕ ಮಹಾಂತೇಶ್ ನನ್ನು ಬಂಧಿಸಲಾಗಿದೆ.

students accused of stealing of rs 100, school boy commit to suicide himself

ಸ್ಥಳಕ್ಕೆ ಟ್ರಾಫಿಕ್ ಎಸಿಪಿ ಮಾದಯ್ಯ, ಇನ್ಸಪೆಕ್ಟರ್ ಪೂವಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸ್ಥಳೀಯರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತರು ಮಾತನಾಡಿ ಈ ಸ್ಥಳದಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಸಿಗ್ನಲ್ ಲೈಟ್ ಅಳವಡಿಸಲು ಹೇಳಿದರೂ ಇನ್ನೂ ಅಳವಡಿಸಿಲ್ಲ. ಹಂಪ್ಸ್ ಅಳವಡಿಸಲು ಹೇಳಿದರೂ ಅಳವಡಿಸುತ್ತಿಲ್ಲ ಎಂದು ಆರೋಪಿಸಿದರು.

ಅಶೋಕ್ ಮೃತದೇಹವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಕೆ.ಆರ್.ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ : ನೇಣಿಗೆ ಶರಣು

ಮೈಸೂರು: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ನೇಣಿಗೆ ಶರಣಾದ ಘಟನೆ ನಂಜನಗೂಡು ರಸ್ತೆಯ ಬಳಿ ನಡೆದಿದೆ.

ಮೃತನನ್ನು ನಂಜನಗೂಡು ವಿದ್ಯಾನಗರ ನಿವಾಸಿ ಮಾದೇಶ್ (32) ಎಂದು ಗುರುತಿಸಲಾಗಿದೆ. ಈತ 10 ವರ್ಷಗಳಿಂದ ಚಾಲಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ . ನಂಜನಗೂಡು ರಸ್ತೆಯ ಕಡಕೊಳ ಬಳಿ ಕಬ್ಬು ಸಾಗಿಸುತ್ತಿದ್ದ ಲಾರಿಯಲ್ಲೇ ಮಾದೇಶ್ ನೇಣಿಗೆ ಶರಣಾಗಿದ್ದಾನೆ. ಮೈಸೂರು ಸೌತ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

students accused of stealing of rs 100, school boy commit to suicide himself

ಸಾಲ ತೀರಿಸಲಾಗದೇ ಇಂಜಿನಿಯರ್ ಆತ್ಮಹತ್ಯೆ

ಮೈಸೂರು: ಸಾಲಬಾಧೆ ಸಹಿಸಲಾರದೇ ಸಿವಿಲ್ ಎಂಜಿನಿಯರ್ ಒಬ್ಬ ಮೈಸೂರಿನಲ್ಲಿ ನೇಣಿಗೆ ಶರಣಾಗಿದ್ದಾರೆ.

ಮೃತನನ್ನು ಶ್ರೀರಾಂಪುರದ ಎರಡನೇ ಹಂತದಲ್ಲಿ ವಾಸವಿದ್ದ ನವೀನ್ (30) ಎಂದು ಗುರುತಿಸಲಾಗಿದೆ. ನವೀನ್ ಖಾಸಗಿ ಕಂಪನಿ ಉದ್ಯೋಗಿ ವಿಪರೀತ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿದ್ದ ಈತ ಸಾಲ ಮರುಪಾವತಿಸಲಾಗದೇ ನೇಣಿಗೆ ಶರಣಾಗಿದ್ದಾನೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
While the students accused of stealing of rs 100.– 9 year old school boy commit to suicide himself in Mysuru. And other crime stories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X