2021ರ ಮೈಸೂರು ದಸರಾಕ್ಕೆ ಚಾಲನೆ ಕೊಟ್ಟ ಎಸ್. ಎಂ. ಕೃಷ್ಣ
ಮೈಸೂರು, ಅಕ್ಟೋಬರ್ 07; ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ 2021ಕ್ಕೆ ಗುರುವಾರ ವಿದ್ಯುಕ್ತ ಚಾಲನೆ ಸಿಕ್ಕಿದೆ. ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸರಳ ದಸರಾವನ್ನು ಉದ್ಘಾಟಿಸಿದರು.
ಗುರುವಾರ ಬೆಳಗ್ಗೆ 8.15 ರಿಂದ 8.45ರ ಶುಭ ತುಲಾ ಲಗ್ನದಲ್ಲಿ ಮೈಸೂರು ದಸರಾ ಮಹೋತ್ಸವ 2021ಕ್ಕೆ ಎಸ್. ಎಂ. ಕೃಷ್ಣ ದೀಪ ಬೆಳಗಿ ಚಾಲನೆ ನೀಡಿದರು. ನಾಡ ದೇವತೆ ಚಾಮುಂಡೇಶ್ವರಿ ದೇವಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು.
ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್, ಸಚಿವರಾದ ಆರ್. ಅಶೋಕ, ಬಿ. ಸಿ. ಪಾಟೀಲ್, ಡಾ. ಸುಧಾಕರ್, ಶಿವರಾಂ ಹೆಬ್ಬಾರ್, ಸುನೀಲ್ ಕುಮಾರ್, ನಾರಾಯಣ ಗೌಡ, ಭೈರತಿ ಬಸವರಾಜು, ಶಶಿಕಲಾ ಜೊಲ್ಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಾಸಕರಾದ ಜಿ. ಟಿ. ದೇವೇಗೌಡ, ರಾಮದಾಸ್, ನಾಗೇಂದ್ರ, ತನ್ವೀರ್ ಸೇಠ್, ಎಂಎಲ್‌ಸಿ ಎಚ್. ವಿಶ್ವನಾಥ್, ಸಂಸದ ಪ್ರತಾಪ್ ಸಿಂಹ, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಎಸ್. ಎಂ. ಕೃಷ್ಣ ಭಾಷಣ
ದಸರಾ ಉದ್ಘಾಟಿಸಿ ಮಾತನಾಡಿದ ಎಸ್. ಎಂ. ಕೃಷ್ಣ, "ಮನುಕುಲಕ್ಕೆ ಬಂದಿರುವ ಬಹಳ ದೊಡ್ಡ ಗಂಡಾಂತರವಾದ ಕೊರೊನಾ ಪಿಡುಗಿನಿಂದ ರಕ್ಷಣೆ ಮಾಡಬೇಕು ಎಂದು ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ. ದಸರಾ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿದ್ದಕ್ಕೆ ಮಾನ್ಯ ಮುಖ್ಯಮಂತ್ರಿಗಳಿಗೆ ಅನಂತ ಧನ್ಯವಾದ ಸಲ್ಲಿಸುತ್ತೇನೆ" ಎಂದರು.
"ಇಂದು ದೇಶ ಕೋವಿಡ್‌ನಂತಹ ಭೀಕರ ಕಾಯಿಲೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ನರಳಿ ಬಳಲುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ಕಾಪಾಡುವ ಏಕೈಕ ಆಸರೆ ತಾಯಿ ಚಾಮುಂಡೇಶ್ವರಿ ದೇವಿಯೇ ಆಗಿದ್ದಾಳೆ. ಆಕೆ ಕನ್ನಡ ನಾಡನ್ನ ನಿರಂತರವಾಗಿ ರಕ್ಷಿಸುತ್ತಾ ಬಂದಿದ್ದಾಳೆ. ಮೈಸೂರು ಅರಸರ ಮನೆ ದೇವಿಯಾಗಿರುವ ಶ್ರೀ ಚಾಮುಂಡೇಶ್ವರಿ ಎಲ್ಲೆ ಮೇಲೂ ತನ್ನ ಕೃಪಾಶೀರ್ವಾದವನ್ನು ನೀಡಿ ಹರಸಲಿ" ಎಂದು ಎಸ್. ಎಂ. ಕೃಷ್ಣ ಪ್ರಾರ್ಥಿಸಿದರು.

ತಂದೆ, ಮಗನ ಜೊತೆ ಕೆಲಸ
"ಯಾವ ಜನ್ಮದ ಪುಣ್ಯವೋ ಏನೋ? ಮುಖ್ಯಮಂತ್ರಿಗಳು ಹಾಗೂ ಅವರ ತಂದೆ ಜೊತೆ ಕೆಲಸ ಮಾಡಿದ ಸೌಭಾಗ್ಯ ನನ್ನದಾಗಿದೆ. ಅತ್ಯಂತ ಗೌರವಯುತವಾಗಿ ಈ ಕ್ಷಣವನ್ನು ನನ್ನದಾಗಿಸಿದ್ದೀರಿ. ನಿಮಗೆ ನನ್ನ ಅನಂತ ಧನ್ಯವಾದಗಳು" ಎಂದು ಎಸ್. ಎಂ. ಕೃಷ್ಣ ಹೇಳಿದರು.
"ದಸರಾ ಮತ್ತು ಮೈಸೂರು ಎರಡೂ ಒಟ್ಟೊಟ್ಟಿಗೆ ಬರುವ ಶಬ್ಧ. ದಸರಾವನ್ನು ಮೈಸೂರು ಅರಸರು ಸಂಸ್ಥಾನದ ಪ್ರಗತಿಯನ್ನು ದೇಶಕ್ಕೆ ತೋರಿಸಲು ಹಾಗೂ ಜನರಲ್ಲಿ ಧಾರ್ಮಿಕ ಮತ್ತು ನೈತಿಕ ಪ್ರಜ್ಞೆ ಮೂಡಿಸಲು ಬಳಸಿಕೊಂಡಿದ್ದರು. ಅದೇ ಪರಂಪರೆಯನ್ನು ಈಗಲೂ ನಾವು ಮುಂದುವರೆಸಬೇಕಾಗಿದೆ. ಅನೇಕ ಸಂಕಷ್ಟಗಳ ನಡುವೆ ಸರಳವಾಗಿ ದಸರಾವನ್ನು ಆಚರಿಸಲು ಸಂಕಲ್ಪ ಮಾಡಿರುವ ಎಲ್ಲರನ್ನೂ ಅಭಿನಂದಿಸುತ್ತೇನೆ" ಎಂದರು.
"ಇಂದು ವಿಶ್ವ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಕೋವಿಡ್ ಆಘಾತ ಯಾವುದೇ ದೇಶಕ್ಕೆ ಸೀಮಿತವಾಗಿಲ್ಲ. ವಿಶ್ವದ ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಆದರೆ ಭಾರತ ತನ್ನ ಪ್ರಗತಿ ಗತಿಯನ್ನು ಉಳಿಸಿಕೊಂಡು ಬರುತ್ತಿದೆ. ಇದು ಕಡಿಮೆ ಸಾಧನೆಯಲ್ಲ. ದೇಶ ಮತ್ತಷ್ಟು ಪ್ರಗತಿ ಸಾಧಿಸಲು ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯಿಂದ ವರ್ತಿಸಬೇಕು" ಎಂದು ಎಸ್. ಎಂ. ಕೃಷ್ಣ ಕರೆ ನೀಡಿದರು.

ಮೈಸೂರಿನ ಜೊತೆಯಲ್ಲೇ ಬೆಳೆದೆ
"12 ವರ್ಷ ಇದ್ದಾಗಲೇ ನಮ್ಮ ತಂದೆ ಓದಲು ಕಳುಹಿಸಿಕೊಟ್ಟರು. ಒಂಟಿಕೊಪ್ಪಲು ಶಾಲೆಯಲ್ಲಿ ಓದಿ, ಮಹಜನ ಶಾಲೆ, ಯುವರಾಜ ಕಾಲೇಜು, ಮಹಾರಾಜ ಕಾಲೇಜಿನಲ್ಲಿ ಕಲಿತೆ. ನಾನು ಮೈಸೂರಿನ ಜೊತೆಯಲ್ಲೇ ಬೆಳೆದೆ. ಪ್ರತಿದಿನ ಚಾಮುಂಡಿ ಬೆಟ್ಟ ನೋಡುತ್ತಿದ್ದೆ, ಕೈ ಮುಗಿಯುತ್ತಿದೆ. ದಸರಾ ಆ ವೇಳೆ ಸಂಭ್ರಮದಿಂದ ನಡೆಯುತ್ತಿತ್ತು. ರಾಜ್ಯದ ನಾನಾ ಕಡೆ ಹಾಗೂ ವಿದೇಶದಿಂದ ಜನರು ಬರುತ್ತಿದ್ದರು. ಪ್ರಜಾಪ್ರತಿನಿಧಿ ಜಗನ್ಮೋಹನ ಅರಮನೆಯಲ್ಲಿ ನಡೆಯುತ್ತಿತ್ತು" ಎಂದು ಎಸ್. ಎಂ. ಕೃಷ್ಣ ನೆನಪು ಮಾಡಿಕೊಂಡರು.

ಮೈಸೂರು ದಸರಾ ನೆನಪಿಸಿಕೊಂಡ ಕೃಷ್ಣ
"ಮೈಸೂರು ಕುಸ್ತಿಗೆ ಹೆಸರಾಂತ ಜಿಲ್ಲೆ. ಯದುವಂಶದವರು ದಸರಾ ಉತ್ಸವಕ್ಕೆ ಮೆರಗು ತಂದಿದ್ದಾರೆ. ನಾಲ್ವಡಿ ಒಡೆಯರ್, ಜಯಚಾಮರಾಜ ಒಡೆಯರ್ ಕೊಡುಗೆ ಅಪಾರ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆಯೂ ಇದೆ. ಯದುಕುಲದ ಅರಸರು ದಸರೆಯನ್ನು ನಾಡಹಬ್ಬವನ್ನಾಗಿ ಪರಿವರ್ತಿಸಲು ಶ್ರಮ ಪಟ್ಟಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಶ್ರಮಿಸಿದ್ದಾರೆ ಅವರಿಗೆ ಭಕ್ತಿ ಪೂರ್ವಕ ನಮನ ಸಲ್ಲಿಸುತ್ತೇನೆ. ದಸರಾ ಉತ್ಸವವನ್ನು ಯಶಸ್ವಿಯಾಗಿ ನೆರವೇರಿಸಲು ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ" ಎಂದರು.

ತಮ್ಮ ಮನೆಯಲ್ಲಿ ನಡೆಯುವ ಹಬ್ಬ
"ನಾನು ವಿದ್ಯಾರ್ಥಿ ದೆಸೆಯಿಂದಲೂ ಮೈಸೂರಿನ ದಸರಾ ಉತ್ಸವವನ್ನು ನೋಡುತ್ತಾ ಬೆಳೆದಿದ್ದೇನೆ. ಸ್ವಾತಂತ್ರ್ಯ ಪೂರ್ವದಲ್ಲಿ ದಿವಾನ್ ಸರ್. ಎಂ. ವಿಶ್ವೇಶ್ವರಯ್ಯ ಹಾಗೂ ಸರ್ ಮಿರ್ಜಾ ಇಸ್ಮಾಯಿಲ್ ಕಾಲದಿಂದಲೂ ಈ ದಸರಾ ವೈಭವವನ್ನು ನೋಡಿದ್ದೇನೆ. ನಮ್ಮ ಹಿರಿಯರಿಂದ ಅನೇಕ ಸಂಗತಿಗಳನ್ನು ಕೇಳಿದ್ದೇನೆ" ಎಂದು ಎಸ್. ಎಂ. ಕೃಷ್ಣ ಹೇಳಿದರು.
"ಮೈಸೂರು, ಮಂಡ್ಯ, ಚಾಮರಾಜನಗರ, ಮೊದಲಾದ ಕಡೆ ದಸರಾ ಹಬ್ಬ ಎಂದರೆ ತಮ್ಮ ಮನೆಗಳಲ್ಲಿ ನಡೆಯುವ ಹಬ್ಬ ಎನ್ನುವ ಸಂಭ್ರಮವಿರುತ್ತಿತ್ತು. ನವರಾತ್ರಿ ಆ ಹತ್ತು ದಿನಗಳಲ್ಲೂ ಬೊಂಬೆ ಪ್ರದರ್ಶನ ಪ್ರತಿ ಮನೆಯಲ್ಲಿಯೂ ನಡೆಯುತ್ತಿತ್ತು" ಎಂದು ಎಸ್. ಎಂ. ಕೃಷ್ಣ ನೆನಪಿಸಿಕೊಂಡರು.

800 ವರ್ಷಗಳ ಇತಿಹಾಸವಿದೆ
"ಮೈಸೂರಿನ ದಸರಾ ಉತ್ಸವಕ್ಕೆ 800 ವರ್ಷಗಳ ಇತಿಹಾಸವಿದೆ. ವಿಜಯನಗರದ ಅರಸರು ಈ ದಸರಾವನ್ನು ತಮ್ಮ ಶಕ್ತಿ ಪ್ರದರ್ಶನ, ವಿದೇಶಿಯರ ಭೇಟಿ ಮಾಡುವುದು ಮತ್ತು ಹೊಸ ದಿಗ್ವಿಜಯಕ್ಕೆ ಹೋಗಲು ಮುಹೂರ್ತವನ್ನು ನಿಗದಿ ಮಾಡುವುದಕ್ಕೆ ಉಪಯೋಗಿಸಿಕೊಳ್ಳುತ್ತಿದ್ದರು" ಎಂದು ಎಸ್. ಎಂ. ಕೃಷ್ಣ ಹೇಳಿದರು.
"ವಿಜಯನಗರದ ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ಹಂಪಿಯಲ್ಲಿ ದಸರಾ ಆಚರಣೆಗಾಗಿ ಮಹಾನವಮಿ ದಿಬ್ಬವನ್ನು ನಿರ್ಮಿಸಲಾಗಿತ್ತು. ಅಲ್ಲಿ ನವರಾತ್ರಿ 10 ದಿನಗಳ ಕಾಲವು ಕ್ರೀಡೆ, ಸಾಹಸ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು" ಎಂದರು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications