Get Updates
Get notified of breaking news, exclusive insights, and must-see stories!

ಮೈಸೂರಿನಲ್ಲಿ ಬಹುರೂಪಿ ಚಲನಚಿತ್ರೋತ್ಸವಕ್ಕೆ ಹಿರಿಯ ನಟ ದೊಡ್ಡಣ್ಣ ಚಾಲನೆ

ಮೈಸೂರು, ಡಿಸೆಂಬರ್‌, 09: ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ಮೈಸೂರಿನ ರಂಗಾಯಣದಲ್ಲಿ ನಡೆದ ಚಲನಚಿತ್ರೋತ್ಸವಕ್ಕೆ ಹಿರಿಯ ನಟ ದೊಡ್ಡಣ್ಣ ಚಾಲನೆ ನೀಡಿದರು.

ರಂಗಾಯಣದ ಭೂಮಿಗೀತದಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ನಂತರ ಮಾತನಾಡಿದ ಹಿರಿಯ ನಟ ದೊಡ್ಡಣ್ಣ, ಮೈಸೂರು ಅರಸರು ದೇವರಿದ್ದಂತೆ. ಬೆಳಕು, ನೀರು, ವಿದ್ಯೆ ಕೊಟ್ಟ ಪುಣ್ಯಾತ್ಮರು ಅವರು ಎಂದು ಶ್ಲಾಘಿಸಿದರು. ನನ್ನ ಅಣ್ಣನಿಂದ ನಟನೆ ಕಲಿತಿದ್ದೇನೆ. ಬಹುರೂಪಿ ಎಂಬ ಶಬ್ಧವೆ ಚೆಂದವಾಗಿದೆ. ಓದು ಬಾರದವರಿಗೂ ನಾಟಕ ಮನರಂಜನೆಯನ್ನು ಒದಗಿಸುತ್ತದೆ. ನಾಟಕದ ನಟನೆ ಮಾಡಿದವನು ಎಲ್ಲಿ ಬೇಕಾದರೂ ಬದುಕುತ್ತಾನೆ. ಪ್ರತಿ ಜಿಲ್ಲೆಗಳಲ್ಲಿ ರಂಗಾಯಣ ಆಗಬೇಕು. ಈ ಮೂಲಕ ನಮ್ಮ ಸಂಸ್ಕೃತಿಯನ್ನು ಪರಿಸಬೇಕು. ಸರ್ಕಾರ ಇದಕ್ಕೆ ಜಾಗ ಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ಮಲ್ಲಿಕಾರ್ಜುನ ಸ್ವಾಮಿ, ಬಹುರೂಪಿ ಸಂಚಾಲಕರಾದ ಜಗದೀಶ್ ಮನವಾರ್ತೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್, ಚಲನಚಿತ್ರೋತ್ಸವದ ಸಂಚಾಲಕರಾದ ಮನು ಕೆ., ಶಶಿಕಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಿನಿಮಾಗಳ ಸಂಪೂರ್ಣ ವಿವರ ಇಲ್ಲಿದೆ

ಸಿನಿಮಾಗಳ ಸಂಪೂರ್ಣ ವಿವರ ಇಲ್ಲಿದೆ

ಡಿಸೆಂಬರ್‌ 9ರಂದು ಜೈ ಹೋ-ಎ ಫಿಲ್ಮ್ ಆನ್ ಎ.ಆರ್.ರೆಹಮಾನ್, ಕರ್ಮ (ನೇಪಾಳಿ), ಡಿಸೆಂಬರ್‌ 10ರಂದು ಹಿಮಾಲಯ ವಿತ್ ಮೈಕಲ್ ಪಾಲಿನ್-ಲೀಪಿಂಗ್ ಟೈಗರ್ಸ್‌ ಆ್ಯಂಡ್ ನೇಕೆಡ್ ನಾಗಾಸ್ (ಇಂಗ್ಲೀಷ್), ಇಂಡೋ-ಪಾಕ್ ಕಾನ್‌ಫ್ಲಿಕ್ಟ್-1971, ಮುಕ್ತಿ (ಇಂಗ್ಲೀಷ್), 1971 (ಹಿಂದಿ), ಡಿಸೆಂಬರ್ 11ರಂದು ರಾಂಚಿ ಪಖಾರ (ಹಿಂದಿ), ದಿ ಪ್ರೈಸ್ ಆಫ್‌ ಫ್ರೀ (ಇಂಗ್ಲೀಷ್), ಟೇಕ್ ಆಫ್‌ (ಮಲಯಾಳಂ), ಡಿಸೆಂಬರ್‌ 12ರಂದು ಕಾವಿ (ಹಿಂದಿ), ಮಿಟ್ಟಿ ಮಾನಸ್ (ಹಿಂದಿ), ಉಲ್ಗುಲನ್ ಏಕ್ ಕ್ರಾಂತಿ (ಹಿಂದಿ), ಡಿಸೆಂಬರ್‌ 13ರಂದು ಗೌರ್ ಇನ್ ಮೈ ಗಾರ್ಡನ್ (ಇಂಗ್ಲೀಷ್), ಝರಿಯಾ (ಹಿಂದಿ), ದಿ ಸ್ಟೋರಿ ಆಫ್‌ ಜೆಲ್ಲಿ ಕಟ್ಟು (ಇಂಗ್ಲೀಷ್), ಸೀಡ್ಸ್ ಆಫ್‌ ಲೈಫ್‌ (ಇಂಗ್ಲೀಷ್), ಮೆರ್ಕು ತೊಡರ್ಚಿ ಮಲೈ (ತಮಿಳು), ಡಿಸೆಂಬರ್‌ 14ರಂದು ಫಿಡ್ಲರ್ ಆನ್ ದಿ ತ್ಯಾಚ್ (ಇಂಗ್ಲೀಷ್), ಮೈಸೂರು ಮಂಜುನಾಥ್ (ಕನ್ನಡ), ರಾಷ್ಟ್ರಕವಿ ಕುವೆಂಪು, ಬದುಕು ಬರಹ (ಕನ್ನಡ), ಉಸ್ತಾದ್ ಬಿಸ್ಮಿಲ್ಲಾ ಖಾನ್ (ಹಿಂದಿ), ದೋ ಆಂಖೇ ಬಾರಾ ಹಾತ್ (ಹಿಂದಿ), ಡಿಸೆಂಬರ್‌ 15ರಂದು ಕೊರಲ್ ವುಮೆನ್ (ಇಂಗ್ಲೀಷ್), ದಿ ಸ್ಟಾರ್ಕ್ ಸೇವಿಯರ್ಸ್‌(ಇಂಗ್ಲೀಷ್), ಟಿಂಬಕ್ಟು (ಇಂಗ್ಲೀಷ್), ಗಂಧಗುಡಿ (ಕನ್ನಡ) ಚಿತ್ರಗಳನ್ನು ನೋಡಬಹುದಾಗಿದೆ.

ಯಾವೆಲ್ಲ ಆಹಾರ ಪದಾರ್ಥಗಳು ಇರಲಿವೆ?

ಯಾವೆಲ್ಲ ಆಹಾರ ಪದಾರ್ಥಗಳು ಇರಲಿವೆ?

ಕರಕುಶಲ ವಸ್ತುಗಳು, ಪುಸ್ತಕಗಳ ಪ್ರದರ್ಶನ, ಆಹಾರ, ತಿನಿಸು ಮತ್ತು ಮಾರಾಟಕ್ಕಾಗಿ 60 ಮಳಿಗೆಗಳನ್ನು ನಿರ್ಮಿಸಲಾಗಿದೆ. ಕರಕುಶಲ ವಸ್ತುಗಳು ಮತ್ತು ಬಟ್ಟೆಗಳಿಗಾಗಿ 15 ಮಳಿಗೆ, ದೇಸಿ ಆಹಾರಕ್ಕಾಗಿ 15ಕ್ಕೂ ಹೆಚ್ಚಿನ ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ. ಸಹಜ ಕೃಷಿ ಆಹಾರಗಳು ಲಭ್ಯವಾಗಲಿವೆ. ಮೈಸೂರು, ಕೊಡಗು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಬಗೆ ಬಗೆಯ ವಿಶೇಷ ಆಹಾರ ಪದಾರ್ಥಗಳನ್ನು ಹಂಚಲು ಸಿದ್ಧತೆ ಮಾಡಿಕೊಳ್ಳಲಾಗಿದೆ,'' ಎಂದು ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.

ವನರಂಗದಲ್ಲಿ ನಡೆಯುವ ಕಾರ್ಯಕ್ರಮಗಳ ಪಟ್ಟಿ

ವನರಂಗದಲ್ಲಿ ನಡೆಯುವ ಕಾರ್ಯಕ್ರಮಗಳ ಪಟ್ಟಿ

ಇನ್ನು ವನರಂಗದಲ್ಲಿ ಡಿಸೆಂಬರ್‌ 9ರಂದು ಚಾಮರಾಜನಗರದ ಶಿವಮಲ್ಲೇಗೌಡ ಮತ್ತು ತಂಡದಿಂದ ಗೊರವರ ನೃತ್ಯ, ಡಾ.ಮನೋನ್ಮಣಿ ಮತ್ತು ತಂಡದಿಂದ ಸಂಪ್ರದಾಯದ ಹಾಡು, ಡಿಸೆಂಬರ್‌ 10ರಂದು ಮೈಸೂರಿನ ಸುಂದರೇಶ್ ಮತ್ತು ತಂಡದಿಂದ ಡೊಳ್ಳು ಕುಣಿತ, ಯದುಕುಮಾರ್ ಮತ್ತು ತಂಡದಿಂದ ನಾದಸ್ವರ, ಡಿಸೆಂಬರ್‌ 11 ಮಂಡ್ಯದ ಸವಿತಾ ಚಿರಕುನ್ನಯ್ಯ ತಂಡದಿಂದ ಪೂಜಾ ಕುಣಿತ, ಮೈಸೂರಿನ ಡಾ.ಮೈಸೂರು ಗುರುರಾಜ್ ಮತ್ತು ತಂಡದಿಂದ ನೀಲಗಾರರ ಮೇಳ ನಡೆಯಲಿದೆ.

ಕಲಾ ತಂಡಗಳ ಸಂಪೂರ್ಣ ವಿವರ

ಕಲಾ ತಂಡಗಳ ಸಂಪೂರ್ಣ ವಿವರ

ಡಿಸೆಂಬಮರ್ 12 ರಂದು ಚಿಕ್ಕಮಗಳೂರಿನ ರಂಗನಾಥ ಮತ್ತು ತಂಡದಿಂದ ಸೋಮನ ಕುಣಿತ, ಉಡುಪಿಯ ಶ್ರೀರಾಮ ಜನಪದ ಕಲಾ ತಂಡದಿಂದ ಕರಗ ಕೋಲಾಟ, ಡಿಸೆಂಬರ್‌ 13ರಂದು ದಕ್ಷಿಣ ಕನ್ನಡದ ಮಂಜುನಾಥ ಮತ್ತು ತಂಡದಿಂದ ಕಂಗೀಲು, ಡಾ.ಮಳವಳ್ಳಿ ಮಹದೇವಸ್ವಾಮಿ ಅವರಿಂದ ಮಂಟೇಸ್ವಾಮಿ ಹಾಡು, ಡಿಸೆಂಬರ್‌ 14ರಂದು ಹಾಸನದ ಓಂಕಾರ್ ಮೂರ್ತಿ ತಂಡದಿಂದ ಚಿಟ್ ಮೇಳ, ಶುಭಾ ರಾಘವೇಂದ್ರ ತಂಡದಿಂದ ಜಾನಪದ ಗೀತೆ, ಡಿಸೆಂಬರ್‌ 15ರಂದು ಕೆ.ಎನ್.ಮಹೇಶ್ ಅವರಿಂದ ವೀರಗಾಸೆ, ಕೊಡಗಿನ ಸೂರಜ್ ಮತ್ತು ತಂಡದಿಂದ ಬೊಳಕಾಟ್ ನಡೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+