ಗ್ರಾಮಕ್ಕೆ ಕಾಂಗ್ರೆಸ್ ನಾಯಕರಿಗೆ ಪ್ರವೇಶವಿಲ್ಲ! ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲೇ ಸಿಟ್ಟಿಗೆದ್ದ ಜನ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ ಎನ್ನುವುದು ಬಿಜೆಪಿಯ ಆರೋಪ, ಅಲ್ಲದೆ ಗ್ಯಾರಂಟಿಗಳ ಅನುಷ್ಠಾನ ಮಾಡಿರುವ ಕಾಂಗ್ರೆಸ್ ಅದಕ್ಕೆ ಹಣ ಹೊಂದಿಸಲು ವಿವಿಧ ಯೋಜನೆಗಳ ಹಣವನ್ನು ಬಳಕೆ ಮಾಡುತ್ತಿದೆ ಎನ್ನುವ ಆರೋಪವನ್ನು ವಿಪಕ್ಷ ನಾಯಕರು ಮಾಡುತ್ತಿದ್ದಾರೆ.

ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ಹಣ ಗ್ಯಾರಂಟಿಗೆ ಖರ್ಚಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿದ್ದರೆ ನಮ್ಮ ಮೊದಲ ಆದ್ಯತೆ ಅಭಿವೃದ್ಧಿ, ಉಚಿತ ಕೊಡುಗೆಗಳಿಂದ ಅಭಿವೃದ್ಧಿಗೆ ಯಾವುದೇ ತೊಂದರೆಯಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು ಕೂಡ ವಿಪಕ್ಷಗಳ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ.

Nagarle villagers prohibit congress leaders entry siddaramaih

ಸಿಎಂ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾ ವ್ಯಾಪ್ತಿಗೆ ಬರುವ ಗ್ರಾಮವೊಂದರಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಗ್ರಾಮಸ್ಥರು ಸಿಟ್ಟಾಗಿದ್ದು, ಗ್ರಾಮದೊಳಗೆ ಕಾಂಗ್ರೆಸ್ ಮುಖಂಡರಿಗೆ ಪ್ರವೇಶವಿಲ್ಲ ಎಂದು ಫ್ಲೆಕ್ಸ್ ಹಾಕಲಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ಈ ಫೋಟೊವನ್ನು ಹಂಚಿಕೊಳ್ಳಲಾಗಿದೆ.

ಎಕ್ಸ್ ಖಾತೆಯಲ್ಲಿ ಯೋಗ ನರಸಿಂಹ ಎನ್ನುವವರು ಈ ಫೋಟೋ ಹಂಚಿಕೊಂಡಿದ್ದು, ಸರ್ಕಾರ ಅಭಿವೃದ್ಧಿ ಕೆಲಸವನ್ನು ಮರೆತಂತಿದೆ ಎಂದು ಹೇಳಿದ್ದಾರೆ.

ಹಳ್ಳಿ ರಾಜಕೀಯ ಕಾರಣ?

ಯೋಗ ನರಸಿಂಹ ಎನ್ನುವವರ ಪೋಸ್ಟ್‌ಗೆ ಮಂಜುನಾಥ್ ಎನ್ನುವವರು ಪ್ರತಿಕ್ರಿಯೆ ನೀಡಿದ್ದು, ನಾನು ಹಲವು ಬಾರಿ ಗ್ರಾಮಕ್ಕೆ ಹೋಗಿದ್ದೇನೆ, ನಗರ್ಲೆ ಗ್ರಾಮದ ರಸ್ತೆಗಳೇ ಅಲ್ಲಿನ ಅಭಿವೃದ್ಧಿ ಕಥೆಯನ್ನು ಹೇಳುತ್ತದೆ. ಇದೆಲ್ಲಾ ರಾಜಕೀಯ ಮಾಡಲು ಫ್ಲೆಕ್ಸ್ ಹಾಕಿದ್ದಾರೆ. ಅಲ್ಲಿ ಅಭಿವೃದ್ಧಿ ಕೆಲಸಗಳು ಚನ್ನಾಗಿಯೇ ಆಗಿವೆ ಎಂದು ಹೇಳಿದ್ದಾರೆ.

ಈ ಬೋರ್ಡ್ ಅಭಿವೃದ್ಧಿ ವಿಚಾರಕ್ಕೆ ಹಾಕಿರುವುದಲ್ಲ, ಆ ಊರು ಉತ್ತಮವಾಗಿಯೇ ಅಭಿವೃದ್ಧಿ ಆಗಿದೆ. ಊರಿನವರ ರಾಜಕೀಯದಿಂದ ಈ ಬೋರ್ಡ್ ಹಾಕಿರಬಹುದು ಎಂದು ಅಂದಾಜಿಸಿದ್ದಾರೆ. ವರುಣಾ ಕ್ಷೇತ್ರದ ಹಳ್ಳಿ ಹಳ್ಳಿಗೆ ಕರೆದುಕೊಂಡು ಹೋಗುತ್ತೇನೆ ಬನ್ನಿ ಅಲ್ಲಿ ಅಭಿವೃದ್ಧಿ ಕೆಲಸಗಳು ಚನ್ನಾಗಿಯೇ ಆಗಿದೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+