ಎಚ್ ವಿಶ್ವನಾಥ್ ರಾಜೀನಾಮೆ: ಮುಂದಿನ ನಡೆ ನಿಗೂಢ
ಮೈಸೂರು, ಜೂನ್ 20: 'ನಾನು ಕಾಂಗ್ರೆಸ್ಸಿಗೆ ರಾಜೀನಾಮೆ ನೀಡುತ್ತಿದ್ದೇನೆ' ಎನ್ನುವ ಮೂಲಕ, ಬಹುದಿನಗಳಿಂದ ಕಾಂಗ್ರೆಸ್ ಪಕ್ಷ ತೊರೆಯುವ ಕುರಿತಾಗಿ ಹುಟ್ಟಿದ್ದ ಊಹಾಪೋಹಕ್ಕೆ ಮಾಜಿ ಸಂಸದ ಎಚ್. ವಿಶ್ವನಾಥ್ ತೆರೆ ಎಳೆದಿದ್ದಾರೆ.
ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಹೊರನಡೆಯುವ ಸೂಚನೆ ನೀಡಿದ್ದ ವಿಶ್ವನಾಥ್ ಮಂಗಳವಾರ ಅಧಿಕೃತವಾಗಿ ಪಕ್ಷ ತ್ಯಜಿಸುವ ನಿರ್ಧಾರ ಪ್ರಕಟಿಸಿದರು. ಮೈಸೂರಿನ ಖಾಸಗಿ ಹೊಟೇಲ್ ವೊಂದರಲ್ಲಿ ಈ ಸಂಬಂಧ ಬೆಂಬಲಿಗರ ಸಭೆ ನಡೆಸುತ್ತಿರುವ ವಿಶ್ವನಾಥ್ ಪಕ್ಷ ತ್ಯಜಿಸುವ ನಿರ್ಧಾರ ಪ್ರಕಟಿಸಿದ್ದು, ಜೂನ್ 23 ರಂದು ಬೆಂಗಳೂರಿಗೆ ತೆರಳಿ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಲಿರುವುದಾಗಿ ತಿಳಿಸಿದರು.

ಎಲ್ಲರ ಊಹೆಯಂತೆಯೇ ಅವರು ಜೆಡಿಎಸ್ ಸೇರುತ್ತಾರಾ ಎಂಬುದನ್ನು ಕಾದುನೋಡಬೇಕು.












Click it and Unblock the Notifications