Varuna Assembly Constituency: ಕಾಂಗ್ರೆಸ್‌ಗೆ ಮತ್ತೆ ವರದಾನವಾಗಲಿದೆಯಾ ವರುಣಾ?
ವರುಣಾ ರಾಜಕೀಯ ಚದುರಂಗದಾಟದಲ್ಲಿ ಯಾವಾಗಲೂ ಹಾಟ್‌ಸ್ಪಾಟ್ ಆಗಿದೆ. ಈಗ ವರುಣಾದಿಂದ ಯತೀಂದ್ರ ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ನಿಲ್ಲುವುದು ಬಹುತೇಕ ಅಂತಿಮವಾದಂತಿದೆ.
ಮೈಸೂರು, ಫೆಬ್ರವರಿ 21: ವರುಣಾ ವಿಧಾನಸಭಾ ಕ್ಷೇತ್ರ ಯಾವಗಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಇದು ಮಾಜಿ ಸಿಎಂ ಸಿದ್ದರಾಮಯ್ಯನವರ ತವರು ಕ್ಷೇತ್ರವಾಗಿದ್ದು, ಸದ್ಯ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಈಗ ಹಾಲಿ ಶಾಸಕರಾಗಿದ್ದಾರೆ.
ವರುಣಾ ರಾಜಕೀಯ ಚದುರಂಗದಾಟದಲ್ಲಿ ಯಾವಾಗಲೂ ಹಾಟ್‌ಸ್ಪಾಟ್ ಆಗಿದೆ. ಈಗ ವರುಣಾದಿಂದ ಯತೀಂದ್ರ ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ನಿಲ್ಲುವುದು ಬಹುತೇಕ ಅಂತಿಮವಾದಂತಿದೆ. ಏಕೆಂದರೆ ವರುಣಾದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿ ಯತೀಂದ್ರ ಒಬ್ಬರೇ ಅರ್ಜಿ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲಿಗೆ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಪಕ್ಕ ಎಂತಾಗಿದೆ. ಕಳೆದ 2018ರ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಮಗ ವಿಜಯೇಂದ್ರ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ನಿಲ್ಲಲಿಲ್ಲ. ಹಾಗಾಗಿ ಬಿಜೆಪಿಯಿಂದ ಟಿ ಬಸವರಾಜು ಅವರನ್ನು ನಿಲ್ಲಿಸಲಾಗಿತ್ತು. ಆದರೆ ಕ್ಷೇತ್ರದಲ್ಲಿ ಅವರು ಅಷ್ಟು ಪರಿಚಿತರಲ್ಲದ ಕಾರಣ ಯತೀಂದ್ರ ಸಿದ್ದರಾಮಯ್ಯ ಮುಂದೆ ಸೋತಿದ್ದರು.
ಬದಾಮಿಯಿಂದ ನಿಂತು ಗೆದ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಅಲ್ಲಿ ನಿಲ್ಲುವುದು ಸಂದೇಹವೇ ಸರಿ. ಆದರೆ ಅವರ ಮಗ ಯತೀಂದ್ರಗೆ ಪ್ರತಿಸ್ಪರ್ಧಿ ಯಾರು ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಕಾಂಗ್ರೆಸ್‌ಗೆ ನೇರಸ್ಪರ್ಧಿಯಾಗಿರುವ ಪಕ್ಷವೆಂದರೆ ಅದು ಬಿಜೆಪಿ. ಆದರೆ ಬಿಜೆಪಿಯಿಂದ ವರುಣಾದಿಂದ ಸ್ಪರ್ಧಿಸಲು ನಾಯಕರ ಸಾಲು ದೊಡ್ಡದಿದೆ. ಇಲ್ಲಿ ಸದ್ಯ ಯತೀಂದ್ರ ನಿಲ್ಲುತ್ತಿರುವುದರಿಂದ ಬಿಜೆಪಿಯಲ್ಲಿ ಹತ್ತಾರು ಮಂದಿ ಟಿಕೆಟ್ ಆಕಾಂಕ್ಷಿಗಳಾಗಿರುವುದರಿಂದ ಇವರ ಪೈಕಿ ಯಾರನ್ನು ಕಣಕ್ಕಿಳಿಸುತ್ತಾರೆ ಎಂಬುದೇ ಕುತೂಹಲಕಾರಿಯಾಗಿದೆ. ಬಿಜೆಪಿಯಲ್ಲಿ ಮೊದಲಿನಿಂದಲೂ ಪಕ್ಷದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಬಯಕೆ ಗಳಿರುವುದು ಸಹಜ. ಆದರೆ ಕ್ಷೇತ್ರದಲ್ಲಿ ಮತವನ್ನು ಪಡೆಯುವ, ವರ್ಚಸ್ಸು ಹೊಂದಿರುವ ನಾಯಕನ ಅಗತ್ಯತೆ ಇರುವುದರಿಂದ ಗೆಲ್ಲುವ ಅಭ್ಯರ್ಥಿಯನ್ನು ಬಿಜೆಪಿ ಪಕ್ಷ ನೋಡುತ್ತಿದೆ.

ವಿಜಯೇಂದ್ರ ಸ್ಪರ್ಧೆ ಸಾಧ್ಯತೆಯೂ ಇದೆ
ಈ ಪೈಕಿ ಬಿಜೆಪಿಯಿಂದ 2008ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸೋಲು ಕಂಡ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಕಾಪು ಸಿದ್ದಲಿಂಗಸ್ವಾಮಿ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದೀಗ ಮತ್ತೊಮ್ಮೆ ನನಗೆ ಮತ್ತೊಮ್ಮೆ ಟಿಕೆಟ್ ಕೊಡಿ ಎಂದು ನಾಯಕರ ಮುಂದೆ ಬೇಡಿಕೆ ಇಟ್ಟಿರುವುದಾಗಿ ಮೂಲಗಳು ತಿಳಿಸಿವೆ. ಆದರೆ ಕೊನೆಯಲ್ಲಿ ವಿಜಯೇಂದ್ರ ಇಲ್ಲಿಂದ ಸ್ಪರ್ಧೆ ಮಾಡಿದರೆ ಕಾಪು ಸಿದ್ದಲಿಂಗಸ್ವಾಮಿಗೆ ಟಿಕೆಟ್ ಕೈತಪ್ಪಲಿದೆ. ಕಾಪು ಸಿದ್ದಲಿಂಗಸ್ವಾಮಿ ಬಿಎಸ್ ಯಡಿಯೂರಪ್ಪನವರ ನಿಕಟವರ್ತಿ ಎಂದೇ ಗುರುತಿಸಿಕೊಂಡವರು.

ಕಾಪು ಸಿದ್ದಲಿಂಗಸ್ವಾಮಿ ಪ್ರಬಲ ಟಿಕೆಟ್ ಆಕಾಂಕ್ಷಿ
ಕಾಪು ಸಿದ್ದಲಿಂಗಸ್ವಾಮಿ ಅವರ ಜೊತೆ ಬಿಜೆಪಿ ಟಿಕೆಟ್ ಬಯಸಿ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮೈಮುಲ್ ನಿರ್ದೇಶಕ ಬಿ.ಎನ್.ಸದಾನಂದ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಗುರುಸ್ವಾಮಿ, ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಮೈಸೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವನೂರು ಪ್ರತಾಪ್, ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್, ಶರತ್ ಪುಟ್ಟಬುದ್ಧಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇವರೆಲ್ಲರಲ್ಲಿ ಕಾಪು ಸಿದ್ದಲಿಂಗಸ್ವಾಮಿ ಪ್ರಮುಖರು. ಆದರೆ ಕೊನೆ ಹಂತದ ಅಚ್ಚರಿಗಳು ಯಾವಾಗಲು ಸಂಭವಿಸುತ್ತವೆ.

ಜೆಡಿಎಸ್‌ನಿಂದ ಗೆಲ್ಲುವ ಸಾಧ್ಯತೆ ಕಡಿಮೆ
ಜೆಡಿಎಸ್‌ನಿಂದ ಇಲ್ಲಿ ಯಾರು ಸ್ಪರ್ಧಿಸಿದರು ಗೆಲ್ಲುವ ಸಾಧ್ಯತೆ ಕಡಿಮೆ ಇರುವುದರಿಂದ ಈ ಕ್ಷೇತ್ರದ ಬಗ್ಗೆ ಜೆಡಿಎಸ್ ವರಿಷ್ಠರು ಗಮನಹರಿಸಿದಂತೆ ಇಲ್ಲ. ಆದರೆ ಜೆಡಿಎಸ್ ನಿಂದ ಇಲ್ಲಿ ಒಬ್ಬರ ಹೆಸರು ಕೇಳಿ ಬರುತ್ತಿದೆ. ಅದು ಅಭಿಷೇಕ್ ಮಣಿಗಾರ್ ಹೆಸರು. ಒಂದು ವೇಳೆ ಇಲ್ಲಿ ಯತೀಂದ್ರ ಬದಲು ಸಿದ್ದರಾಮಯ್ಯ ನಿಂತರೆ ಲೆಕ್ಕಾಚಾರ ಬೇರೆಯದೇ ಆಗುತ್ತದೆ. ಕಾರಣ ಕೋಲಾರದಿಂದ ನಿಲ್ಲುತ್ತೇನೆ ಎಂದಿರುವ ಸಿದ್ದರಾಮಯ್ಯ ಅವರನ್ನು ಸೋಲಿಸಲು ಈಗಾಗಲೇ ತೆರೆಮರೆ ರಾಜಕೀಯ ಶುರುವಾಗಿದೆ ಎಂಬ ಮಾತುಗಳು ಜೋರಾಗಿಯೇ ಇದೆ. ವರುಣಾದಿಂದ ಸಿದ್ದರಾಮಯ್ಯ ಹಾಗೂ ವಿಜಯೇಂದ್ರ ನಿಂತರೆ ಹೈವೋಲ್ಟೆಜ್ ಕಣ ಇದಾಗಲಿದೆ.

2008ರಲ್ಲಿ ರಚನೆಯಾದ ಕ್ಷೇತ್ರ ವರುಣಾ
2008ರಲ್ಲಿ ರಚನೆಯಾದ ಕ್ಷೇತ್ರ ವರುಣಾ. ಇದುವರೆಗೂ ಇಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳು ನಡೆದಿವೆ. ಅದರಲ್ಲಿ ಎರಡು ಬಾರಿ ಅಂದರೆ 2008, 2013ರಲ್ಲಿ ಸಿದ್ದರಾಮಯ್ಯ ಗೆಲುವು ಕಂಡಿದ್ದಾರೆ. 2018ರಲ್ಲಿ ಯತೀಂದ್ರ ಗೆದ್ದಿದ್ದಾರೆ. ಹೀಗಾಗಿ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಕ್ಷೇತ್ರದಲ್ಲಿ ದಲಿತ ಹಾಗೂ ಲಿಂಗಾಯತ ಮತಗಳೇ ನಿರ್ಣಯಕ. 2018ರ ಚುನಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ 96,435 ಮತಗಳು, ಬಿಜೆಪಿಯಿಂದ ಟಿ ಬಸವರಾಜು 37,819 ಮತಗಳು, ಜೆಡಿಎಸ್‌ನಿಂದ ಅಭಿಷೇಕ್ 28,123 ಮತಗಳನ್ನು ಪಡೆದಿದ್ದರು. ಯತೀಂದ್ರ ಸಿದ್ದರಾಮಯ್ಯ 58,616 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications