ದಸರಾ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳು, ಟಿಕೆಟ್ ದರ, ಸಿನಿಮಾಗಳ ವಿವರ
ಮೈಸೂರು ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ದಸರಾವನ್ನು ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲೂ ವಿಭಿನ್ನವಾಗಿ ಆಚರಿಸಲಾತ್ತದೆ. ಈ ಬಾರಿ ದಸರಾದಲ್ಲಿ ಸಿನಿಮೋತ್ಸವ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 3ರವರೆಗೆ ನಡೆಯಲಿದ್ದು, ದೇಶ- ವಿದೇಶದ 112 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿದುಬಂದಿದೆ.
ದಸರಾ ಜೊತೆ ಜೊತೆಗೆ ನಡೆಯುವ ಸಿನಿಮೋತ್ಸವದಲ್ಲಿ ಪ್ರತಿದಿನ ನಾಲ್ಕು ಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ದಿನಕ್ಕೆ 100 ರೂ ಟಿಕೆಟ್ ದರನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ವಾರಕ್ಕೆ 300 ರೂ, ವಯಸ್ಕರಿಗೆ 500ರೂ ನಿಗದಿಪಡಿಸಲಾಗಿದೆ.
ಸೆಪ್ಟೆಂಬರ್ 26 ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಡಾ.ಶಿವರಾಜ್ ಕುಮಾರ್ ಉದ್ಘಾಟಿಸಲಿದ್ದಾರೆ. ಐನಾಕ್ಸ್‌ನಲ್ಲಿ 3 ಮತ್ತು ಡಿಆರ್‌ಸಿಯ 1 ಸ್ಕ್ರೀನ್‌ನಲ್ಲಿ ಪ್ರದರ್ಶನವಿರಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸ್ಯಾಂಡಲ್‌ವುಡ್ ನಟಿಯರಾದ ಅಮೃತ ಅಯ್ಯಂಗಾರ್, ಕಾವ್ಯಶೆಟ್ಟಿ, ಸುಧಾರಾಣಿ, ಅನುಪ್ರಭಾಕರ್ ಸೇರಿದಂತೆ ಅನೇಕ ತಾರೆಯರು ಆಗಮಿಸಲಿದ್ದಾರೆ.

ಸಿನಿಮಾ ಕಾರ್ಯಾಗಾರ ಆಯೋಜನೆ
ಸೆಪ್ಟೆಂಬರ್ 27ರಿಂದ ಅಕ್ಟೋಬರ್ 3ರವರೆಗೆ 56 ಕನ್ನಡ, 28 ಪನೋರಮಾ, 28 ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾಗಳು ಸೇರಿದಂತೆ ಒಟ್ಟು 112 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಸೆಪ್ಟೆಂಬರ್ 22, 23 ಮತ್ತು 24ರಂದು ಸಿನಿಮಾ ಕಾರ್ಯಾಗಾರ ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ಚಲನಚಿತ್ರ ನಿರ್ಮಾಣದ ಪೂರ್ವ ತಯಾರಿ ಕುರಿತು ಮಾಹಿತಿ ನೀಡಲಾಗುತ್ತದೆ.
ಈ ಕಾರ್ಯಾಗಾರವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ. ಚಂಪಾಶೆಟ್ಟಿ, ಪ್ರಶಾಂತ್ ಪಂಡಿತ್, ಪ್ರವೀಣ್ ಕೃಪಾಕರ್, ಪವನ್ ಕುಮಾರ್, ಶಂಕರ್ ಎನ್.ಸಂಡೂರು, ಪನ್ನಗಾಭರಣ, ಮಂಸೊರೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರನ್ನು ಆಹ್ವಾನಿಸಲಾಗಿದ್ದು, ಪ್ರವೇಶಕ್ಕೆ 300 ರೂ ಶುಲ್ಕ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಶ್ವಿನಿ ಪುನೀತ್ ರಾಜ್ ಕುಮಾರ್ ಚಿತ್ರ ವೀಕ್ಷಣೆ
ಚಲನಚಿತ್ರೋತ್ಸವದಲ್ಲಿ ಪುನೀತ್‌ರಾಜ್‌ಕುಮಾರ್ ಅವರ 6 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಪುನೀತ್‌ರಾಜ್‌ಕುಮಾರ್ ಬಾಲನಟರಾಗಿ ನಟಿಸಿರುವ ಬೆಟ್ಟದ ಹೂ, ಅಂಜನಿಪುತ್ರ, ರಾಜಕುಮಾರ, ಮೈತ್ರಿ, ಪೃಥ್ವಿ ಹಾಗೂ ಯುವರತ್ನ ಸಿನಿಮಾ ಪ್ರದರ್ಶನಗೊಳ್ಳಲಿದೆ. ಪುನೀತ್‌ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಶಕ್ತಿಧಾಮದ ಮಕ್ಕಳೊಂದಿಗೆ ಸೆಪ್ಟೆಂಬರ್ 27ರಂದು ಬೆಟ್ಟದ ಹೂ ಚಿತ್ರ ವೀಕ್ಷಿಸಲಿದ್ದಾರೆ. ಇನ್ನು ಸಂಚಾರಿ ವಿಜಯ್ ನಟಿಸಿರುವ ತಲೆದಂಡ, ಪುಕ್ಸಟ್ಟೆ ಲೈಫು, ಆಕ್ಟ್ 1978 ಸಿನಿಮಾಗಳು ಪ್ರದರ್ಶನಗೊಳ್ಳುತ್ತವೆ.

ಪ್ರಮುಖ ಕನ್ನಡ ಚಿತ್ರಗಳು
ಅವನೇ ಶ್ರೀಮನ್ನನಾರಾಯಣ, 100, 777 ಚಾರ್ಲಿ, ಶ್ರೀ ಸುತ್ತೂರು ಮಠ-ಗುರುಪರಂಪರೆ, ಆದ್ಯಾ, ಅವತಾರ ಪುರುಷ, ಬಡವರಾಸ್ಕಲ್, ಭಜರಂಗಿ-2, ನಿನ್ನ ಸನಿಹಕೆ, ಒಂಭತ್ತನೇ ದಿಕ್ಕು, ಪೈಲ್ವಾನ್, ರೈಡರ್, ರಾಬರ್ಟ್, ಸಖತ್, ಸಲಗ, ಸೀತಾರಾಮ ಕಲ್ಯಾಣ, ಶಿವಾಜಿ ಸುರತ್ಕಲ್, ವಿಕ್ರಾಂತ್ ರೋಣ, ವಿಂಡೋಸೀಟ್. ಭರಾಟೆ, ದಿಯಾ, ದೃಶ್ಯ-2, ಗಾಳಿಪಟ, ಗರುಡಗಮನ ವೃಷಭ ವಾಹನ, ಜಂಟಲ್ ಮನ್, ಗಿಫ್ಟ್ ಬಾಕ್ಸ್, ಹರಿಕಥೆ ಅಲ್ಲ ಗಿರಿಕಥೆ, ಹೀರೋ, ಇಂಡಿಯಾ ವರ್ಸಸ್ ಇಂಗ್ಲೆಂಡ್, ಇನ್ಸ್‌ಪೆಕ್ಟರ್ ವಿಕ್ರಂ, ಕವಚ, ಕವಲುದಾರಿ, ಕೆಜಿಎಫ್ 1, ಕೆಜಿಎಫ್ 2, ಲವ್ ಮಾಕ್ಟೇಲ್ 1, ಲವ್ ಮಾಕ್ಟೇಲ್-2, ಮದಗಜ, ಮುಗಿಲುಪೇಟೆ.

ಭಾರತೀಯ ಚಿತ್ರಗಳು
ಎ ಡಾಗ್ ಅಂಡ್ ಹಿಸ್ ಮ್ಯಾನ್, ಹರಿವ ನದಿಗೆ ಮೈಯೆಲ್ಲಾ ಕಾಲು, ಅಡಿಯು ಗೊಡಾರ್ಡ್, ಅಗ್ನಿವರ್ಷ, ಐಸೇ ಹಿ, ಬಾಫ್, ಬೂಂಬಾ ರೈಡ್, ಈ ಮಣ್ಣು, ಘೋಡೇ ಕೋ ಜಲೇಬಿ ಖಿಲಾನೆ ಲೇಜಾರಿಯಾ ಹೂಂ, ಹಾರುವ ಹಂಸಗಳು, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಇಂಟು ದಿ ಮಿಸ್ಟ್, ದಿ ಕ್ಲೌಡ್ ಅಂಡ್ ದಿ ಮ್ಯಾನ್, ಮನುಸಂಗಡ, ಮಿಂಚುಹುಳು, ಮೂಕಜ್ಜಿಯ ಕನಸುಗಳು, ನೀಲಿಹಕ್ಕಿ, ನೋಯ್, ಪದಕ, ಸಾರಾ ವಜ್ರ, ಉರಿಯಟ್ಟು, ವಿಡೋ ಆಫ್ ಸೈಲೆನ್ಸ್.
ಎ ಜೆಂಟಲ್ ಕ್ರೀಚರ್, ಎ ಹೀರೋ, ಅಡಲ್ಟ್ಸ್ ಇನ್ ದಿ ರೂಮ್, ಅನದರ್ ರೌಂಡ್, ಆ್ಯಶ್ ಇಸ್ ದಿ ಪ್ಯೂರೆಸ್ಟ್ ವೈಟ್, ಕ್ಯಾಪರ್ನಾಮ್, ಎವರಿಥಿಂಗ್ ಎವೆರಿವೇರ್ ಅಳ್ ಎಟ್ ಒನ್ಸ್, ಎಕೈಲ್, ಐ ಡೇನಿಯಲ್ ಬ್ಲೇಕ್, ಲವ್ ಲೆಸ್, ನಾರ್ಥ್ ಸಿ, ಪ್ಯಾರಲೆಲ್ ಮದರ್ಸ್, ಪ್ಯಾರಾ ಸೈಟ್, ಪೋಟ್ರೇಟ್ ಆಫ್ ಎ ಲೇಡಿ ಆನ್ ಫೈರ್, ಸಾರಿ ವಿ ಮಿಸ್ಡ್ ಯೂ, ಸ್ಪೆನ್ಸರ್, ಬೈಸಿಕಲ್ ಥೀವ್ಸ್, ದಿ ಲಾಸ್ಟ್ ಎಕ್ಸೆ ಕ್ಯೂಷನ್, ದಿ ಸೆವೆಂತ್ ಸೀಲ್, ದಿ ಟ್ಯೂರಿನ್ ಹಾರ್ಸ್, ಥ್ರೋನ್ ಆಫ್ ಬ್ಲಡ್, ಆನ್ ಡೈನ್, ವ್ಯಾಗಾ ಬಾಂಡ್, ವಾಕಬೌಟ್, ವೆನ್ ಹಿಟ್ಲರ್ ಸ್ಟೋಲ್ ಪಿಂಕ್ ರ್ಯಾಬಿಟ್, ವೈಫ್ ಆಫ್ ಎ ಸ್ಪೈ, ವಿಮೆನ್ ಇನ್ ದಿ ಡ್ಯೂನ್ಸ್.












Click it and Unblock the Notifications