ಮಾದಾಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ

ಮೈಸೂರು, ಡಿಸೆಂಬರ್ 12: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾದ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದ್ದು, ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ

ಮಾದಾಪುರ ಗ್ರಾಮದ ನಿವಾಸಿ ಶಿವಬಸವೇಗೌಡ ಮಗ ಸಂಪತ್ ಹಾಗೂ ಸುರೇಂದ್ರ ಮಕ್ಕಳಾದ ದರ್ಶನ್ ಮತ್ತು ಹರೀಶ್ ಹುಡುಗಿಯರನ್ನು ಚುಡಾಯಿಸುತ್ತಿದ್ದರು.

"ನಿಮ್ಮ ಮಕ್ಕಳು ನಮ್ಮ ಅಂಗಡಿಯ ಬಳಿ ಕುಳಿತು ಕಾಲೇಜಿಗೆ ಹೋಗುವ ಹುಡುಗಿಯರನ್ನು ಚುಡಾಯಿಸುತ್ತಾರೆ. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳಿ" ಎಂದು ಶಿವಬಸವೇಗೌಡರ ಬಳಿ ಲಾಲಲಿಂಗ ಎಂಬುವವರು ಹೇಳಿದ್ದರು.

Conflict between the two groups for the trivial reason

ಇದೇ ಕಾರಣಕ್ಕೆ ಕೋಪಗೊಂಡ ಸಂಪತ್, ದರ್ಶನ್, ಹರೀಶ್ ತಮ್ಮ ಸ್ನೇಹಿತರ ಜೊತೆ ಸೇರಿ ಲಾಲಲಿಂಗ (ಮನು)ವಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಜಗಳ ಬಿಡಿಸಲು ಹೋದ ಗ್ರಾಪಂ ಸದಸ್ಯ ಶಿವಶಂಕರ್ ಮೇಲು ಹಲ್ಲೆ ನಡೆಸಿದ್ದಾರೆ.

ಗ್ರಾಮದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಗಾಯಾಳುಗಳನ್ನು ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ತಿ.ನರಸೀಪುರ ಎಎಸ್ಐ ಅಜರುದ್ದೀನ್ ರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+