ನಂಬರ್ ಗಳೊಡನೆ ಆಟವಾಡುವ ಅಂಧ ಬಸವರಾಜ್ ಸಾಧನೆಗೆ ಬೆರಗಾಗಲೇಬೇಕು!
ಮೈಸೂರು, ಸೆಪ್ಟೆಂಬರ್.7: ಈತ ಅಪ್ಪಟ ಹಳ್ಳಿ ಹೈದ. ಕೋಟಿಗಟ್ಟಲೇ ಗಣಿತ ಅಂಕೆಯನ್ನು ಹೇಳಿದರೆ ಸಾಕು ಲೀಲಾಜಾಲವಾಗಿ ಗುಣಾಕಾರ, ಭಾಗಕಾರ, ಸಂಕಲನ, ವ್ಯವಕಲನ ಎಲ್ಲವನ್ನು ಪೆನ್ನು ಬೇಡ, ಹಾಳೆ ಇಲ್ಲದೆ ಮಾಡಿ ಮುಗಿಸುತ್ತಾನೆ. ಇವನ ಸಾಧನೆ ನೋಡಿದರೆ ನೀವು ಅಚ್ಚರಿಪಡುವುದರಲ್ಲಿ ಎರಡು ಮಾತಿಲ್ಲ.
ಹೌದು, ಬೆಳಗಾಂ ಜಿಲ್ಲೆಯ ಅಥಣಿ ತಾಲೂಕಿನ ನಿವಾಸಿ ಬಸವರಾಜ್ ಶಂಕರ್ ಉಮ್ರಾಣಿ ಎಂಬ 24ರ ಹರೆಯದ ಯುವಕನ ಜ್ಞಾಪಕ ಶಕ್ತಿಯ ಅಗಾಧತೆ ನೋಡಿದರೆ ಒಮ್ಮೆ ಎದ್ದು ನಿಂತು ಸೆಲ್ಯೂಟ್ ಹೊಡೆಯಬೇಕೆಂದೆನಿಸುತ್ತದೆ.
ಅಂಧರಾಗಿರುವ ಬಸವರಾಜ್ ಅವರ ಸಾಧನೆ ಕಣ್ಣು ಇದ್ದವನೂ ಸಹ ಸಾಧಿಸಲು ಅಸಾಧ್ಯ. ಸಣ್ಣ ವಯಸ್ಸಿನಲ್ಲೇ ಈ ಪ್ರಯತ್ನ ಪ್ರಾರಂಭ ಮಾಡಿದ್ದ ಬಸವರಾಜ್ ಗೆ ಈಗ 24 ವರ್ಷ. ಅಂಧರಾದ ಇವರು ಎಲ್ಲರ ನೆಚ್ಚಿನ ಟಿವಿ ಕಾರ್ಯಕ್ರಮ ಮಜಾ ಟಾಕೀಸ್ ನಲ್ಲಿ ಭಾಗಿಯಾಗಿ ತಮ್ಮ ಪ್ರತಿಭೆ ತೋರಿದ್ದಾರೆ.
ಕೇವಲ ನೀವು ಸಂಖ್ಯೆಗಳನ್ನು ಹೇಳಿದರೆ ಸಾಕು, ಯಾವ ಸಹಾಯವೂ ಇಲ್ಲದೆ ನಿಖರ ಉತ್ತರ ಕೊಡುತ್ತಾನೆ. ಯಾವುದೇ ವರ್ಷ, ಇಲ್ಲವೇ ತಿಂಗಳಿನ ದಿನಾಂಕವೂ ಯಾವ ವಾರ ಬರುತ್ತದೆ ಎಂದು ಕೇಳಿದರೆ ಪಂಚಾಂಗದ ಮೊರೆ ಹೋಗದೆ ಕ್ಷಣಾರ್ಧದಲ್ಲಿ ವಾರ ಹೇಳುತ್ತಾನೆ.
ಕಣ್ಣಿದ್ದು ಸಮಯವನ್ನು ಗಡಿಯಾರ ನೋಡಿ ಹೇಳುತ್ತೇವೆ ನಾವು. ಆದರೆ ಕಣ್ಣಿಲ್ಲದೇ, ಗಡಿಯಾರದ ಸಹಾಯವಿಲ್ಲದೇ ಸಮಯ ಎಷ್ಟಾಗಿದೆ ಎಂದು ಕೇಳಿದರೆ ಸಾಕು ನಿಖರವಾದ ಸಮಯ ಹೇಳುವ ನಿಷ್ಣಾತ ಈತ. ಇಷ್ಟೇ ಅಲ್ಲ ಬಸವರಾಜ್ ಸಾಧನೆ, ಇನ್ನು ಮುಂದೆ ಇದೆ ಓದಿ ....

ಕರಾರುವಕ್ಕಾಗಿ ಹೇಳ್ತಾರೆ ಬೆಲೆ
ನೀವು ಯಾವುದಾದರೊಂದು ನೋಟನ್ನು ಆತನ ಕೈಗಿಟ್ಟು ತಕ್ಷಣವೇ ಕಿತ್ತುಕೊಂಡರೆ ಕ್ಷಣಾರ್ಧದಲ್ಲಿ ನೋಟುಗಳ ಒಟ್ಟು ಮೌಲ್ಯವನ್ನು ಕರಾರುವಕ್ಕಾಗಿ ಹೇಳುವ ಹಾಗೂ ಇನ್ನು ಬೇರೆ ಬೇರೆ ದೇಶದ ಕರೆನ್ಸಿಗಳನ್ನು ಕೈಗಿಟ್ಟು ತಕ್ಷಣವೇ ಕಿತ್ತುಕೊಂಡರೆ ನೋಟುಗಳ ಅಂದಿನ ಮೌಲ್ಯವನ್ನು ಹೇಳುತ್ತಾನೆ.

ಗಣಿತ ನೀರು ಕುಡಿದಷ್ಟೇ ಸಲೀಸು
ಈತನ ವಿಶೇಷತೆಗಳು ಇಲ್ಲಿಗೆ ನಿಲ್ಲಲಿಲ್ಲ. ರಾಷ್ಟ್ರೀಯ ನಾಯಕರ ಹುಟ್ಟು ಮತ್ತು ಸಾವಿನ ದಿನಾಂಕ, ತಿಂಗಳು, ವರ್ಷ ಹಾಗೂ ವಾರಗಳನ್ನು ಹೇಳುತ್ತಾನೆ. ಹಿಂದೆಂದೋ ಕೇಳಿದ ದೂರವಾಣಿ ಅಥವಾ ಯಾರನ್ನೇ ಭೇಟಿಯಾದ ದಿನಾಂಕ ಕೇಳಿದರೇ ಅಷ್ಟೇ ಖಚಿತವಾಗಿ ಹೇಳುವುದು ಈತನಿಗೆ ನೀರು ಕುಡಿದಷ್ಟೇ ಸಲೀಸು.
ಹೌದು, ಇವನೊಬ್ಬ ಮಾನವ ಕಂಪ್ಯೂಟರ್. ವಿಜಯಪುರ ಗಡಿಯಂಚಿನಲ್ಲಿರುವ ಬೆಳಗಾವಿಯಲ್ಲಿ ಹುಟ್ಟಿ ಬೆಳೆದ ಬಸವರಾಜ್ ಸ್ಮರಣಶಕ್ತಿ ಹಾಗೂ ಬುದ್ಧಿಮತ್ತೆಗೆ ಪ್ರತಿಯೊಬ್ಬರು ತಲೆಬಾಗಲೇಬೇಕು.

ಅಂಧನಾಗಲು ಕಾರಣ
ಬಸವರಾಜ್ ಪೋಷಕರು ಆತನನ್ನು ಮೋದಿ, ಮಿಂಟೋ, ನಾರಾಯಣ ನೇತ್ರಾಲಯ ಸೇರಿದಂತೆ ಕಂಡ ಕಂಡ ನೇತ್ರ ತಜ್ಞರನ್ನು ಕಂಡು ಮಗನಿಗೆ ಬೆಳಕು ನೀಡುವಂತೆ ಅಂಗಲಾಚಿದ್ದಾರೆ. ಆದರೆ ಈತನ ಕಣ್ಣಿನ ನರಗಳ ದೌರ್ಬಲ್ಯದಿಂದಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಇದರಿಂದ ತಂದೆ - ತಾಯಿಗಳು ಕೈ ಚೆಲ್ಲಿ ಕುಳಿತರು. ಆದರೂ ಈತ ವಿಶೇಷ ವ್ಯಕ್ತಿಯಾಗಿದ್ದಾನೆ. ಬಸವರಾಜ್ ಗೆ ಎಂಟು ವರ್ಷವಿದ್ದಾಗಲೇ ಮನೆ ಪಕ್ಕದ ಕುಲಕರ್ಣಿ ಎಂಬುವವರು ಶಾಲೆಗೆ ಪ್ರವೇಶ ನೀಡಿಸಲು ನಿರ್ಧರಿಸಿದರು. ಅಂದು ಶಾಲೆಗೆ ಸೇರಿಸಿದರು. ನಂತರ ಆತ ಬೆಳೆದದ್ದೇ ವಿಶೇಷ ಸಾಧನೆ.
ಮಹೇಶ್ ಅಂಧ ಮಕ್ಕಳ ಶಾಲೆಯಲ್ಲಿ ಬ್ರೈಲ್ ಲಿಪಿ ಕಲಿತ ನಂತರ ಅಥಣಿಯ ಶ್ರೀ ಶಿವಯೋಗಿ ಮುರುಘರಾಜೇಂದ್ರ ಸ್ವಾಮೀಜಿ ಕಾಲೇಜಿನಲ್ಲಿ ಬಿಎ ಮುಗಿಸಿದರು. ನಂತರ ಬಿ ಎಡ್ ಪದವಿಯನ್ನು ಸಹ ಪಡೆದಿದ್ದಾರೆ.

ಮೆಮೊರಿಯಲ್ಲಿದೆ 10,000 ಕ್ಕೂ ಹೆಚ್ಚು ನಂಬರ್ ಗಳು
ಇವರಿಗೆ ಒಮ್ಮೆ ಪರಿಚಯವಾಗಿ ಮೊಬೈಲ್ ನಂಬರ್ ಹೇಳಿದರೆ ಸಾಕು, ಮೆಮೊರಿಯಲ್ಲಿ ಹಾಗೆಯೇ ಕುಳಿತು ಬಿಡುತ್ತದೆ ನಂಬರ್. ಇದುವರೆಗೂ ಇವರ ಮೆಮೊರಿಯಲ್ಲಿರುವುದು ಬರೋಬ್ಬರಿ 10,000 ಕ್ಕೂ ಹೆಚ್ಚು ಮೊಬೈಲ್ ನಂಬರ್ ಗಳು.
ಕೇವಲ ನಂಬರ್ ಗಳೊಡನೆ ಆಟವಾಡುವ ಬಸವರಾಜ್ ಇನ್ನೊಂದು ವಿಶೇಷತೆ ಹೊಂದಿದ್ದಾರೆ. ಪ್ರತಿಯೊಬ್ಬ ರಾಷ್ಟ್ರೀಯ ಕ್ರಿಕೆಟ್ ಆಟಗಾರರು, ನಾಯಕರ ಹೆಸರು ಹಾಗೂ ಅವರು ಗಳಿಸಿದ್ದ ರನ್, ವಿಕೆಟ್ , ಕ್ಯಾಚ್ ಗಳನ್ನು ಸಲೀಸಾಗಿ ಹೇಳುತ್ತಾನೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications