ಉಪ್ಪಿನಂಗಡಿಯಲ್ಲಿ ಜೀಪಿನಡಿ ಬಿದ್ದ ತಾಯಿ, ಮಗು ಪವಾಡ ಸದೃಶ್ಯ ರೀತಿಯಲ್ಲಿ ಪಾರು
ಮಂಗಳೂರು, ಫೆಬ್ರವರಿ 11:ಏಕಾಏಕಿ ಚಾಲಕನಿಲ್ಲದ ಜೀಪು ಚಲಿಸಿದ್ದರಿಂದ ಜೀಪಿನಡಿಗೆ ಬಿದ್ದ ತಾಯಿ ಹಾಗೂ ಪುಟ್ಟ ಮಗು ಅದೃಷ್ಟವಶಾತ್ ಪವಾಡ ರೀತಿಯಲ್ಲಿ ಅಪಾಯದಿಂದ ಪಾರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಎಂಬಲ್ಲಿ ಭಾನುವಾರ ಸಂಜೆ (ಫೆ.10) ಈ ಘಟನೆ ನಡೆದಿದ್ದು, ಉಪ್ಪಿನಂಗಡಿಯ ಟಿಫಿನ್ ಹಾಲ್ ಹೋಟೆಲ್ ಎದುರು ಈ ಘಟನೆ ನಡೆದಿದೆ. ಹಿರೇಬಂಡಾಡಿಯ ನಿವಾಸಿ ಜಗದೀಶ್ ತಮ್ಮ ಜೀಪಿನಲ್ಲಿ ಟಿಫಿನ್ ಹಾಲ್ ಹೋಟೆಲ್ ಗೆ ಕಟ್ಟಿಗೆ ತಂದಿದ್ದರು. ಜೀಪನ್ನು ಹೋಟೆಲ್ ನ ಅಡುಗೆ ಮನೆ ಎದುರು ನಿಲ್ಲಿಸಿ, ಹೋಟೆಲ್ ಒಳಗೆ ಚಾ ಕುಡಿಯಲು ತೆರಳಿದ್ದರು. ಆದರೆ ಜೀಪ್ ನ ಕೀ ಜೀಪಲ್ಲೇ ಬಿಟ್ಟು ತೆರಳಿದ್ದರು.
ಜೀಪ್ ನಿಂದ ಕಟ್ಟಿಗೆ ಖಾಲಿ ಮಾಡಿದ ಬಳಿಕ ಹೊಟೇಲ್ ನ ಸಿಬ್ಬಂದಿಯೊಬ್ಬ ಜೀಪ್ ಗೆ ಹತ್ತಿ ಜೀಪ್ ಸ್ಟ್ರಾಟ್ ಮಾಡಿದ್ದಾನೆ. ಈ ಸಂದರ್ಭದಲ್ಲಿ ಜೀಪ್ ಒಮ್ಮಲೆ ಶರವೇಗದಲ್ಲಿ ಚಲಿಸಿದೆ. ಹೋಟೆಲ್ ಎದುರು ನಿಲ್ಲಿಸಿದ್ದ ಬೈಕ್ ಗಳಿಗೆ ಗುದ್ದಿದ ಜೀಪ್ ಅಲ್ಲೇ ಪಕ್ಕದಲ್ಲಿ ಮೆಡಿಕಲ್ ಶಾಪ್ ಗೆ ಬಂದಿದ್ದ ತಾಯಿ ಹಾಗೂ ಮಗುವಿನ ಮೇಲೆ ಹರಿದಿದೆ. ಘಟನೆಯಲ್ಲಿ ಉರುವಾಲು ಗ್ರಾಮದ ಚಂದ್ರಕಲಾ ಹಾಗೂ ಅವರ 2 ವರ್ಷದ ಮಗು ಸಣ್ಣಪುಟ್ಟ ಗಾಯಗಳಿಂದ ಪವಾಡ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಜೀಪ್ ನ ಕೀಯನ್ನು ಜೀಪ್ ನಲ್ಲೇ ಚಾಲಕ ಬಿಟ್ಟು ಹೋಗಿದ್ದು, ಈ ಘಟನೆಗೆ ಕಾರಣ ಎನ್ನಲಾಗಿದೆ. ಜೀಪ್ ನ ಅವಾಂತರದ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಅಫಘಾತದ ತೀವ್ರತೆಯನ್ನು ತಿಳಿಸುತ್ತದೆ. ಚಾಲಕನ ನಿರ್ಲಕ್ಷ್ಯ ತನಕ್ಕೆ ಸಾರ್ವಜನಿಕರು ಸೇರಿ ಆತನಿಗೆ ಹಿಗ್ಗ ಮುಗ್ಗ ಬಾರಿಸಿದ್ದಾರೆ.ಆದರೆ ಜೀಪು ಮಹಿಳೆ ಮೇಲೆ ಹರಿದು ಹೋಗುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications