ಯಕ್ಷಗಾನ ರಂಗಸ್ಥಳದಲ್ಲೇ ಮಡಿದ ಕಲಾವಿದರು ಯಾರ್ಯಾರು..?
ಮಂಗಳೂರು,ಡಿಸೆಂಬರ್ 24: ಸಾವು ಎಲ್ಲಿ ಹೇಗೆ ಯಾವಾಗ ಬರುತ್ತೆ ಎನ್ನುವುದು ತಿಳಿಯುವುದಿಲ್ಲ. ಕೆಲವರು ತಮ್ಮ ಕಾಯಕದಲ್ಲೇ ಇಹಲೋಕವನ್ನು ತ್ಯಜಿಸುತ್ತಾರೆ. ತನ್ನ ಬದುಕನ್ನೇ ಯಕ್ಷಗಾನಕ್ಕೇ ಸಮರ್ಪಿಸಿದ ಯಕ್ಷಗಾನದ ದಿಗ್ಗಜರೋರ್ವರು ಕಟೀಲು ಶ್ರೀದೇವಿಯ ಸೇವೆಯಾದ ಯಕ್ಷಗಾನದ ರಂಗಸ್ಥಳದಲ್ಲೇ ವೇಷದೊಂದಿಗೆ ಇಹಲೋಕ ತ್ಯಜಿಸಿದ್ದಾರೆ. ತ್ರಿಜನ್ಮ ಮೋಕ್ಷ ಎನ್ನುವ ಯಕ್ಷಗಾನ ಪ್ರಸಂಗದ ಶಿಶುಪಾಲ ಪಾತ್ರಧಾರಿಗೆ ರಂಗಸ್ಥಳದಲ್ಲೇ ಮೋಕ್ಷ ಪ್ರಾಪ್ತಿಯಾಗಿದೆ.
ಕರಾವಳಿಯ ಗಂಡುಕಲೆ ಯಕ್ಷಗಾನ ಅಲ್ಲಿನ ಜನರ ಜಾನಪದ, ಸಾಂಸ್ಕೃತಿಕ, ಮನೋರಂಜನಾ, ಧಾರ್ಮಿಕ ನಂಬಿಕೆಯ ಪ್ರತೀಕ.ಹೆಚ್ಚಾಗಿ ಯಕ್ಷಗಾನ ಸೇವೆ ನಡೆಯೋದೆ ಹರಕೆಯ ರೂಪದಲ್ಲಿ. ಎಲ್ಲಾ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಯಕ್ಷಗಾನ ಮೇಳಗಳಿದ್ದು ಸಾವಿರಾರು ಜನ ಕಲಾವಿದರು ಯಕ್ಷಗಾನದಲ್ಲೇ ಬದುಕು ಕಟ್ಟಿಕೊಂಡಿದ್ದಾರೆ.
ಅಪ್ರತಿಮ ಸಾಧನೆ ಮಾಡಿದ ಸಾಧಕರೂ ಯಕ್ಷಗಾನ ಕ್ಷೇತ್ರದಲ್ಲಿದ್ದಾರೆ.ಕಲಾವಿದರೂ ದೇವರ ಸೇವೆ ಅನ್ನೋ ನಿಟ್ಟಿನಲ್ಲಿ ಶ್ರದ್ಧಾ ಭಕ್ತಿಯಿಂದಲೇ ಯಕ್ಷಗಾನದ ಸೇವೆ ಸಲ್ಲಿಸುತ್ತಾರೆ. ಹೀಗಾಗಿ ಕಾಯಕವೇ ಕೈಲಾಸ ಅಂದುಕೊಂಡ ಸಾಕಷ್ಟು ಕಲಾವಿದರು ಯಕ್ಷಗಾನದ ರಂಗಸ್ಥಳದಲ್ಲೇ ವೇಷಧಾರಿಯಾಗಿ ಪ್ರದರ್ಶನ ನೀಡುತ್ತಿದ್ದಾಗಲೇ ಇಹಲೋಕ ತ್ಯಜಿಸಿದ್ದಾರೆ. ಅದಕ್ಕೊಂದು ಸೇರ್ಪಡೆಯಂತೆ ಗುರುವಾರ ಮಧ್ಯ ರಾತ್ರಿಯಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣ ಸರಸ್ವತಿ ಸದನದಲ್ಲಿ ನಡೆದ ತ್ರಿಜನ್ಮ ಮೋಕ್ಷ ಎನ್ನುವ ಯಕ್ಷಗಾನ ಪ್ರದರ್ಶನದ ವೇಳೆ ಇಹಲೋಕ ತ್ಯಜಿಸಿದ್ದಾರೆ.

ಹೃದಯಾಘಾತದಿಂದ ಏಕಾಏಕಿ ಕೆಳಗೆ ಕುಸಿದು ಬಿದ್ದ ಕಲಾವಿದ
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ನಾಲ್ಕನೇ ಮೇಳದ ತ್ರಿಜನ್ಮ ಮೋಕ್ಷ ಪ್ರಸಂಗದ ಕೊನೆಯ ಹಂತದ ಯಕ್ಷಗಾನ ನಡೆಯುತ್ತಿದ್ದಾಗ ಶಿಶುಪಾಲನ ಪಾತ್ರಧಾರಿಯಾಗಿದ್ದ ಹಿರಿಯ ಕಲಾವಿದ 58 ವರ್ಷದ ಗುರುವಪ್ಪ ಬಾಯಾರು ರಂಗಸ್ಥಳದಲ್ಲೇ ಇದ್ದು ಸಹ ಕಲಾವಿದರ ಜೊತೆಗಿದ್ದರು. ಇನ್ನೊಂದು ಪಾತ್ರಧಾರಿ ಯಕ್ಷಗಾನದ ರಂಗಸ್ಥಳದಲ್ಲಿ ಕುಣಿಯುತ್ತಿದ್ದಾಗ ಅಲ್ಲೇ ಇದ್ದ ಗುರುವಪ್ಪ ಬಾಯಾರು ಅವರಿಗೆ ಹೃದಯಾಘಾತವಾಗಿ ಏಕಾಏಕಿ ಕೆಳಗೆ ಕುಸಿದು ಬಿದ್ದರು. ತಕ್ಷಣ ರಂಗಸ್ಥಳದಲ್ಲಿ ಇದ್ದ ಕಲಾವಿದರು ದಿಗ್ಬ್ರಮೆಗೊಂಡು ಪ್ರದರ್ಶನ ನಿಲ್ಲಿಸಿ ಎಲ್ಲರು ಸೇರಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.ಇಂತಹ ಅಪ್ರತಿಮ ಕಲಾವಿದರ ಅಗಲುವಿಕೆಗೆ ಯಕ್ಷಗಾನ ರಂಗ ಕಂಬನಿ ಮಿಡಿದಿದೆ.

ರಂಗಸ್ಥಳದಿಂದ ತಲೆಕೆಳಗಾಗಿ ಕುಸಿದು ಬಿದ್ದ ಕಲಾವಿದ
ಗುರುವಪ್ಪ ಬಾಯಾರು ಅವರು ಕೇವಲ ಕಲಾವಿದರಾಗಿ ಮಾತ್ರವಲ್ಲದೆ ಪ್ರಸಂಗ ಕರ್ತರಾಗಿಯೂ ಯಕ್ಷಗಾನದ ಸೇವೆ ಸಲ್ಲಿಸಿದವರು. ಗುರುವಪ್ಪ ಬಾಯಾರು ಅವರಿಗೆ ಹಿಂದಿನ ದಿನವೇ ತಲೆ ಸುಸ್ತು, ಆಯಾಸ ಆಗುತ್ತಿದೆ ಎಂದು ಮನೆಯವರಲ್ಲಿ ಹೇಳಿದ್ದರು. ಯಕ್ಷಗಾನದ ಆರಂಭದ ಸಂಧರ್ಭದಲ್ಲೂ ತಲೆ ಸುಸ್ತು , ಆಯಾಸ ಎಂದು ಹೇಳಿ ಸ್ವಲ್ಪ ಹೊತ್ತು ಚೌಕಿಯಲ್ಲಿ ಮಲಗಿದ್ದರು. ಶಿಶುಪಾಲನಿಗಿರುವ ನಾಲ್ಕು ಪದ್ಯಗಳಲ್ಲಿ ಎರಡಕ್ಕೆ ಕುಣಿದು, ನಂತರದ ಪದ್ಯಕ್ಕೆ ದಂತವಕ್ತ್ರ ಪಾತ್ರಧಾರಿ ಕೃಷ್ಣ ಪ್ರಸಾದ್ ಭಟ್ ಅವರಿಗೆ ನಿರ್ವಹಿಸಲು ರಂಗಸ್ಥಳದಲ್ಲೇ ಹೇಳಿದರಂತೆ . ಈ ಹಂತದಲ್ಲೇ, ರಂಗಸ್ಥಳದಿಂದ ತಲೆಕೆಳಗಾಗಿ ಕುಸಿದು ಬಿದ್ದರು ಎಂದರು ಹಿರಿಯ ಯಕ್ಷಗಾನಾಸಕ್ತ ಶಾಂತರಾಮ ಕುಡ್ವ ಮೂಡಬಿದಿರೆ ತಿಳಿಸಿದ್ದಾರೆ.

ಯಕ್ಷಗಾನ ಕಲಾವಿದರಿಗೆ ಹೃದ್ರೋಗ ತಜ್ಞರ ಸಲಹೆ
ಕಲಾವಿದರು,ತಲೆ ಸುಸ್ತು , ಆಯಾಸ, ಹೃದಯ ನೋವು , ಎಡಕೈ ನೋವು ಈ ಎಲ್ಲಾ ಲಕ್ಷಣ ಕಂಡುಬಂದರೆ , ವಿಳಂಬಿಸದೇ , ವೈದ್ಯರನ್ನು ಭೇಟಿಯಾಗಬೇಕು ಎಂದು ಮಂಗಳೂರು ಕೆ.ಎಂ.ಸಿ.ಯ ಸುಪ್ರಸಿದ್ಧ ಹೃದ್ರೋಗ ತಜ್ಞರಾದ ಡಾ.ಪದ್ಮನಾಭ ಕಾಮತ ಹೇಳುತ್ತಾರೆ. ಗುರುವಪ್ಪ ಬಾಯಾರು ಅವರು ವಜ್ರ ಕೋಗಿಲೆ,ಕೀರ್ತಿಚಂದ್ರಿಕೆ , ಗಟ್ಟದಗರುಡೆ , ಗಂಧರ್ವ ನರ್ತಕಿ , ಕುಡ್ಲದ ಕುರಲ್ , ಕಡಲ ಕೇಸರಿ , ಚಂದ್ರ ಮಲ್ಲಿಗೆ , ಸೂರ್ಯಕಾಂತಿ, ನಾಗಮಂಡಲ, ಅಷ್ಟ ಮಂಗಲ, ಸ್ವರ್ಣ ಮಲ್ಲಿ, ಪೂಜೆದ ಪುಣ್ಣಮೆ ಮೊದಲಾದ ಹಲವಾರು ತುಳು ಪ್ರಸಂಗಗಳನ್ನು ರಚಿಸಿದ್ದಾರೆ.
2013ರಲ್ಲಿ ವೃತ್ತಿಪರ ಕಲಾವಿದನಾಗಬೇಕೆಂಬ ಒಲವು ತೋರಿ ಕಟೀಲು ಮೇಳಕ್ಕೆ ಸೇರ್ಪಡೆಗೊಂಡ ಗುರುವಪ್ಪ ಬಾಯಾರು ಅವರು, ಶ್ರೀ ದೇವಿ ಮಹಾತ್ಮೆಯ ಮಧು , ಕೈಟಭ, ದೇವೇಂದ್ರ, ವಿದ್ಯುನ್ಮಾಲಿ , ಶಿಶುಪಾಲ, ಮೈಂದ, ಅರ್ಜುನ, ಶತ್ರುಘ್ನ, ಸುಗ್ರೀವ , ಶಂತನು ಮುಂತಾದ ಕೋಲು ಕಿರೀಟದ ಪಾತ್ರದಲ್ಲೂ ನಾಟಕೀಯ ಪಾತ್ರಗಳಲ್ಲೂ ಕಾಣಿಸಿಕೊಂಡು ಪ್ರಸಿದ್ಧಿಯಾಗಿದ್ದಾರೆ.

ರಂಗಸ್ಥಳದಲ್ಲೇ ಸಾವನ್ನಪ್ಪಿದ ಯಕ್ಷಗಾನ ಕಲಾವಿದರ ವಿವರ
ಕಳೆದ ನಾಲ್ಕು ವರ್ಷಗಳ ಹಿಂದೆ, ಎಕ್ಕಾರಿನಲ್ಲಿ ಜರುಗಿದ ಕಟೀಲು ಮೇಳದ ಸುಪ್ರಸಿದ್ಧ ಕಲಾವಿದರಾದ ಗಂಗಯ್ಯ ಶೆಟ್ಟರೂ , ಅರುಣಾಸುರನ ಪಾತ್ರದಲ್ಲಿ ಇರುವಾಗ , ರಂಗಸ್ಥಳದಲ್ಲೇ ಕುಸಿದು ಬಿದ್ದು ನಿಧನರಾಗಿದ್ದು, ಇದೀಗ,ಆ ಸಾಲಿಗೆ ಗುರುವಪ್ಪ ಬಾಯಾರುರವರ ಹೆಸರು ಸೇರಿಕೊಂಡಿರುವುದು ಖೇದಕರ ಎನ್ನುವುದು ಶಾಂತರಾಮ ಕುಡ್ವ ಅವರ ಅಭಿಪ್ರಾಯವಾಗಿದೆ. ಈ ಹಿಂದೆ ನಿಧನರಾದ ಶಿರಿಯಾರ ಮಂಜು ನಾಯ್ಕ , ದಾಮೋದರ ಮಂಡೆಚ್ಚ , ಅರುವ ನಾರಾಯಣ ಶೆಟ್ಟಿ , ಕೆರೆಮನೆ ಶಂಭು ಹೆಗಡೆ, ಗಂಗಯ್ಯ ಶೆಟ್ಟಿ , ಹುಡುಗೋಡು ಚಂದ್ರಹಾಸ , ಸಾಧು ಕೊಠರಿಯವರಂತೆಯೇ , ಗುರುವಪ್ಪ ಬಾಯಾರುರವರು ನಿಧನರಾಗಿದ್ದಾರೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications