ಮಂಗಳೂರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ, ಮೂವರ ಸೆರೆ
ಮಂಗಳೂರು, ಡಿಸೆಂಬರ್ 26: ಮಂಗಳೂರಿನ ಕಂಕನವಾಡಿ ಠಾಣಾ ವ್ಯಾಪ್ತಿಯ ಪೊಲೀಸರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ, ನಾಗೂರಿಯ ಮನೆಯೊಂದರಲ್ಲಿ ಐವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಆರೋಪಿಗಳನ್ನು ಬಂಟ್ವಾಳದ ಮನೋಜ್(24) , ಹರೀಶ್ ಶೆಟ್ಟಿ (38) , ದುರ್ಗೇಶ್ ಶೆಟ್ಟಿ(46) ಎಂದು ಗುರುತಿಸಲಾಗಿದೆ. ಇವರು ಹಲವು ವರ್ಷಗಳಿಂದ ವಿವಿಧೆಡೆ ಈ ವೃತ್ತಿಯನ್ನು ನಡೆಸುತ್ತಿದ್ದರು ಎಂದು ಹೇಳಲಾಗಿದೆ.[ಹೋಂ ಸ್ಟೇನಲ್ಲಿ ವೇಶ್ಯವಾಟಿಕೆ, ಜೆಡಿಎಸ್ ಶಾಸಕರ ಮಗ ಬಂಧನ]

ಮಂಗಳೂರಿನ ನಾಗೂರಿಯ ಮನೆ ಒಂದರಲ್ಲಿ ವೇಶ್ಯಾವಾಟಿಕೆ ಚಟುವಟಿಕೆ ನಡೆಸುತ್ತಿದ್ದು, ಕಂಕನಾಡಿ ನಗರ ಠಾಣಾ ಪೊಲೀಸರು ಖಚಿತ ಮಾಹಿತಿ ಆಧಾರದ ಮೇರೆಗೆ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ ಮೂರು ಆರೋಪಿಗಳನ್ನು ಬಂಧಿಸಿದರು. ಐವರು ಮಹಿಳೆಯರನ್ನು ರಕ್ಷಿಸಿದರು.[ಮೈಸೂರು: ವೇಶ್ಯಾವಾಟಿಕೆಯಲ್ಲಿ ಬಾಂಗ್ಲಾ ಮಹಿಳೆಯರೇ ಹೆಚ್ಚು]
ವೇಶ್ಯಾವಾಟಿಕೆ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಂಧಿತ ಮೂವರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ.












Click it and Unblock the Notifications