ಹೆಗ್ಗಡೆ ಆಸ್ತಿ ವಿವಾದ: ತನಿಖೆ ಸರಿಯಾಗಿ ನಡೆಸಿ
ಮಂಗಳೂರು, ಮೇ.26: ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಆಸ್ತಿಯ ಬಗ್ಗೆ ತನಿಖೆ ನಡೆಸುತ್ತಿರುವ ಕಂದಾಯ ಇಲಾಖೆ ಸರಿಯಾಗಿ ತನಿಖೆ ನಡೆಸದಿದ್ದಲ್ಲಿ ಅದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗುವುದು ಎಂದು ಬೆಳ್ತಂಗಡಿ ನಾಗರಿಕಾ ಸೇವಾ ಟ್ರಸ್ಟ್ ಹೇಳಿದೆ.
ನಾಗರಿಕಾ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ್ ನಾಯಕ್ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, 1974-75ರಲ್ಲಿ ಹೆಗ್ಗಡೆಯವರು ಆಸ್ತಿಯನ್ನು ಘೋಷಣೆ ಮಾಡಿದ ಬಳಿಕ 1992ರಲ್ಲಿ ಮತ್ತೊಮ್ಮೆ ಪರಿಷ್ಕೃತವಾಗಿ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. 2012ರಲ್ಲಿ ಬೆಳ್ತಂಗಡಿ ನ್ಯಾಯಾಲಯ ಹೆಗಡೆ ಪರವಾಗಿ ತೀರ್ಪು ನೀಡಿದೆ. ಈ ವಿಚಾರಣೆ ವೇಳೆ ಕಾನೂನು ಬಾಹಿರವಾಗಿ ಹಲವಾರು ಚಟುವಟಿಕೆಗಳು ನಡೆದಿದೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಹಲವಾರು ದಾಖಲೆಗಳನ್ನು ಬಿಡುಗಡೆ ಮಾಡಿದ ಸೋಮನಾಥ್ ನಾಯಕ್ ಅವರು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಅಧಿಕಾರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇದೊಂದು ದೊಡ್ಡ ಭೂ ಹಗರಣವಾಗಿದ್ದು ಟ್ರಸ್ಟ್ ಮುಂದಿನ ದಿನಗಳಲ್ಲಿಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.
ಏನಿದು ಪ್ರಕರಣ:
ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಕರ್ನಾಟಕ ಭೂ ಸುಧಾರಣಾ ಕಾಯ್ದೆ ಉಲ್ಲಂಘನೆ ಮಾಡಿ ಸುಮಾರು 1,300 ಎಕ್ರೆ ಜಾಗವನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ನಾಗರಿಕಾ ಸೇವಾ ಟ್ರಸ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಇಲಾಖೆಯವರಿಗೆ ದೂರು ನೀಡಿತ್ತು. ಈ ದೂರಿನ ಮೇರೆಗೆ ಮುಖ್ಯಮಂತ್ರಿಯವರು ಕಂದಾಯ ಇಲಾಖೆಗೆ ಹೆಗಡೆಯವರ ಆಸ್ತಿ ತನಿಖೆಗೆ ಆದೇಶ ನೀಡಿದ್ದರು.











Click it and Unblock the Notifications